alex Certify ಒಂದೇ ವಾರದಲ್ಲಿ ಮೂರನೇ ಅಗ್ನಿ ಅವಘಡಕ್ಕೆ ಸಾಕ್ಷಿಯಾದ ವಾಣಿಜ್ಯ ನಗರಿ ಮುಂಬೈ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ವಾರದಲ್ಲಿ ಮೂರನೇ ಅಗ್ನಿ ಅವಘಡಕ್ಕೆ ಸಾಕ್ಷಿಯಾದ ವಾಣಿಜ್ಯ ನಗರಿ ಮುಂಬೈ…..!

ಮುಂಬೈನ ವೈಲ್​ ಪಾರ್ಲೆ ವೆಸ್ಟ್​ನಲ್ಲಿರುವ ಪ್ರಸಿದ್ಧ ಪ್ರೈಮ್​ ಮಾಲ್​ನ ಮೊದಲ ಮಹಡಿಯಲ್ಲಿ ಶುಕ್ರವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

13 ಫೈರ್​ ಇಂಜಿನ್​ಗಳು ಸ್ಥಳಕ್ಕೆ ಧಾವಿಸಿದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

13 ಎಂಜಿನ್​ಗಳು, 8 ನೀರಿನ ಟ್ಯಾಂಕರ್​ಗಳು ಸೇರಿದಂತೆ ಫೈರ್​ ಬ್ರಿಗೇಡ್​ ವಾಹನಗಳು ಕಾರ್ಯಾಚರಣೆಗೆ ಬಂದಿವೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿ ಕಳೆದೊಂದು ವಾರದಲ್ಲಿ ವರದಿಯಾದ ಮೂರನೇ ಅತಿ ದೊಡ್ಡ ಬೆಂಕಿಯ ಅವಘಡ ಇದಾಗಿದೆ.

ಪೊವೈ ಉಪನಗರದಲ್ಲಿರುವ ಆಟೋಮೊಬೈಲ್​ ಶೋರೂಂ ಗ್ಯಾರೇಜಿನಲ್ಲಿ ನಿನ್ನೆಯಷ್ಟೇ ಹಠಾತ್​ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆ ನಡೆದ ಒಂದೇ ದಿನಗಳಲ್ಲಿ ಮತ್ತೊಂದು ಅಗ್ನಿ ಅವಘಡ ವರದಿಯಾದಂತಾಗಿದೆ. ಈ ವಾರದ ಆರಂಭದಲ್ಲಿ ಎಲೆಕ್ಟ್ರಾನಿಕ್ಸ್ ಗೂಡ್ಸ್​ ಕಂಪನಿಯೊಂದರಲ್ಲಿಯೂ ಬೆಂಕಿ ಕಾಣಿಸಿಕೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...