alex Certify ಬಂಧನದಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಕಳ್ಳ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನದಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಕಳ್ಳ…!

ಬಂಧನದಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ನಾಲ್ಕನೇ ಮಹಡಿಯಿಂದ ಜಿಗಿದ ಪರಿಣಾಮ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ಸಂಭವಿಸಿದೆ. ರೋಹಿತ್​ ಎಂದು ಗುರುತಿಸಲಾದ ಕಳ್ಳನು ಮುಂಬೈನ ಮರೈನ್ ಲೈನ್ಸ್​ನಲ್ಲಿರುವ ಕಟ್ಟಡಕ್ಕೆ ಕಳ್ಳತನ ಮಾಡಲೆಂದು ಬಂದಿದ್ದ. ಆದರೆ ಆತ ಸಿಕ್ಕಿಬಿದ್ದಿದ್ದ.

ಕಟ್ಟಡದ ಎದುರು ಭಾಗದಿಂದ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಪೊಲೀಸರು ನೆಲದ ಮೇಲೆ ಸುರಕ್ಷತಾ ಜಾಲವನ್ನು ಸಿದ್ಧಪಡಿಸಿದರಾದರೂ ಆತ ಪ್ಯಾರಪೆಟ್​ ಮೇಲೆ ನಿಂತಿರುವುದನ್ನು ಕಾಣಬಹುದಾಗಿದೆ. ಹಲವು ಗಂಟೆಗಳ ಕಾಲ ಅಲ್ಲಿನ ನಿವಾಸಿಗಳು, ಪೊಲೀಸ್​ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರೋಹಿತ್​ ಸುರಕ್ಷಿತವಾಗಿ ಕಿಟಕಿಯ ಬದಿ ಬರುವಂತೆ ಮನವೊಲಿಸಲು ಯತ್ನಿಸಿದ್ದಾರೆ ಆದರೆ ರೋಹಿತ್​ ಪಕ್ಕದ ಕಾಂಪೌಂಡ್​ಗೆ ಹಾರಿದ್ದಾನೆ.

ಕೂಡಲೇ ಆತನನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ರೋಹಿತ್​ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಈತ ಬಂಧನದಿಂದ ತಪ್ಪಿಸಿಕೊಳ್ಳಲು ಬಹುಮಹಡಿ ಕಟ್ಟಡವನ್ನೇರಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...