alex Certify 62 ರೂ. ವ್ಯತ್ಯಾಸಕ್ಕಾಗಿ ಓಲಾ ಕ್ಯಾಬ್ಸ್ ವಿರುದ್ಧ ಕೇಸ್; 15 ಸಾವಿರ ರೂಪಾಯಿ ಪರಿಹಾರ ಕೊಡಿಸಿದ ನ್ಯಾಯಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

62 ರೂ. ವ್ಯತ್ಯಾಸಕ್ಕಾಗಿ ಓಲಾ ಕ್ಯಾಬ್ಸ್ ವಿರುದ್ಧ ಕೇಸ್; 15 ಸಾವಿರ ರೂಪಾಯಿ ಪರಿಹಾರ ಕೊಡಿಸಿದ ನ್ಯಾಯಾಲಯ

ಓಲಾ ಕ್ಯಾಬ್ ಸೇವೆಯ ಚಾರ್ಜಿಂಗ್ ನೀತಿಯಿಂದ ಅಸಮಾಧಾನಗೊಂಡ ಪ್ರಯಾಣಿಕನೊಬ್ಬ ಕಂಪನಿಯನ್ನು ನ್ಯಾಯಾಲಯಕ್ಕೆ ಎಳೆದು, ರೂ.15,000 ಪರಿಹಾರ ಪಡೆದುಕೊಂಡ ಪ್ರಸಂಗ ನಡೆದಿದೆ.

ಮುಂಬೈನ ವಕೀಲ ಶ್ರೇಯನ್ಸ್ ಮಾಮಾನಿಯಾ ಕ್ಯಾಬ್ ಸೇವೆ ಪಡೆದು ತಮ್ಮ‌ ಕುಟುಂಬದೊಂದಿಗೆ ಕಾಂದಿವಲಿಯಿಂದ ಕಲಾಚೌಕಿಗೆ ಪ್ರಯಾಣ ಮಾಡಿದರು. ಅವರು ಓಲಾ ಅಪ್ಲಿಕೇಶನ್‌ನಲ್ಲಿ ರೈಡ್ ಬುಕ್ ಮಾಡಿದಾಗ, ಪ್ರಯಾಣ ದರವು ರೂ.372 ಎಂದು ನಮೂದಾಗಿತ್ತು. ಆದರೆ, ಶ್ರೇಯನ್ಸ್ ಮತ್ತು ಅವರ ಕುಟುಂಬ ಕಲಾಚೌಕಿ ತಲುಪಿದಾಗ, ಅವರ ಪ್ರಯಾಣ ದರ 372 ರಿಂದ ರೂ. 434. ರೂ.ಗಳಿಗೆ ಏರಿಕೆಯಾಗಿತ್ತು.

BIG NEWS: ಕೂಡಲೇ ಕೋವಿಡ್ ಪರಿಹಾರ ನೀಡಲು ‘ಸುಪ್ರೀಂ’ ಸೂಚನೆ: ವಿಳಂಬ ಮಾಡಿದ ರಾಜ್ಯ ಸರ್ಕಾರಗಳಿಗೆ ತರಾಟೆ

ಏರಿಕೆಗೆ ಕಾರಣ ಏನೆಂದು ವಿವರಣೆಯನ್ನು ಶ್ರೇಯನ್ಸ್ ಗ್ರಹಿಸಲು ಸಾಧ್ಯವಾಗಲಿಲ್ಲ. ಕ್ಯಾಬ್ ದರದಲ್ಲಿ 64 ರೂ. ಹೆಚ್ಚುವರಿಯಾದ ಬಗ್ಗೆ ಶ್ರೇಯನ್ಸ್ ಚಾಲಕನನ್ನು ವಿಚಾರಿಸಿದಾಗ, ಅಂತಹ ಹೆಚ್ಚಳವು ಸಾಮಾನ್ಯವಾಗಿದೆ ಎಂದು ವಿವರಣೆ ಸಿಕ್ಕಿತು.

ಹೆಚ್ಚಿಗೆ ಹಣ ಕೊಡದಿದ್ದರೆ ಚಾಲಕನಿಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಶ್ರೇಯನ್ಸ್ ಕಂಪನಿ ವಿರುದ್ಧ ಕೇಸ್ ದಾಖಲಿಸಿದರು.

ನಾನು ರೂ.434 ಪಾವತಿಸಿದ್ದೆ ಮತ್ತು ನಂತರ ಓಲಾ ಗ್ರಾಹಕ ಸೇವೆ ಸಂಪರ್ಕಿಸಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಬಳಿಕ ಪ್ರಕರಣ ದಾಖಲಿಸಿದ್ದು, ಆಗಸ್ಟ್ 17 ರಂದು ಮತ್ತು ಡಿಸೆಂಬರ್ 16ರಂದು ಗ್ರಾಹಕ ವೇದಿಕೆಯಲ್ಲಿ ವಿಚಾರಣೆ ನಡೆಯಿತು‌ ಎಂದಿದ್ದಾರೆ ಅವರು.

ಗ್ರಾಹಕರ ನ್ಯಾಯಾಲಯವು 15,000 ನೀಡುವಂತೆ ಒಲಾಗೆ ನಿರ್ದೇಶಿಸಿತು‌. 10,000 ಪರಿಹಾರ ಮತ್ತು ದೂರಿನ ವೆಚ್ಚವಾಗಿ ರೂ.5,000 ಎಂದು ನಿಗದಿಪಡಿಸಿತು. ಶ್ರೇಯನ್ಸ್ 4 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಆಯೋಗ 15 ಸಾವಿರಕ್ಕೆ ಪ್ರಕರಣ ಮುಕ್ತಾಯಗೊಳಿಸಿತು.

Mumbai Lawyer Sues Ola Cabs For Rs 62 Discrepancy, Wins Rs 15,000 Compensation

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...