alex Certify ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಜತೆ ನಟಿಸಿದ್ದ ಕೀನ್ಯಾ ಪ್ರಜೆಯಿಂದ ಸಾರ್ವಜನಿಕರ ಮೇಲೆ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಜತೆ ನಟಿಸಿದ್ದ ಕೀನ್ಯಾ ಪ್ರಜೆಯಿಂದ ಸಾರ್ವಜನಿಕರ ಮೇಲೆ ಹಲ್ಲೆ

ದಕ್ಷಿಣ ಮುಂಬೈನಲ್ಲಿ ಏಳು ಜನರ ಮೇಲೆ ಚಾಕು ಬಳಸಿ ಹಲ್ಲೆ ನಡೆಸಿದ ಕೀನ್ಯಾ ಪ್ರಜೆಯನ್ನು ಬುಧವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಜಾನ್‌ ಸುಜಾಸ್‌ ಮೆಂಟಿ ಎಂದು ಗುರುತಿಸಲಾಗಿದೆ.

ಈತ ಬಾಲಿವುಡ್‌ ಸೂಪರ್‌ಸ್ಟಾರ್‌ ಅಕ್ಷಯ್‌ ಕುಮಾರ್‌ ಜತೆಗೆ ನಟಿಸಿದ್ದ ಎಂಬ ಅಂಶ ಪ್ರಾಥಮಿಕ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾನ್ ಸುಜಾಸ್ ಮೆಂಟಿ ಬುಧವಾರ ಬಾಂಬೆ ಹೈಕೋರ್ಟ್ ಬಳಿ ಏಳು ಮಂದಿ ಮೇಲೆ ಹಲ್ಲೆ ನಡೆಸಿದ್ದ. ಚಾಕುವಿನಲ್ಲಿ ಚುಚ್ಚಿದ ಕಾರಣ ಅವರುಗಳು ಗಾಯಗೊಂಡಿದ್ದರು. ಆಜಾದ್ ಮೈದಾನ ಪೊಲೀಸರು ಮೆಂಟಿಯನ್ನು ಕೂಡಲೇ ಬಂಧಿಸಿ, ಹತ್ಯಾ ಯತ್ನದ ಕೇಸ್‌ ದಾಖಲಿಸಿದ್ದಾರೆ. ಆತನ ಹಿನ್ನೆಲೆ ಹಾಗೂ ಕೊಲೆಯ ಹಿಂದಿನ ಕಾರಣ ತಿಳಿಯಲು ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.

BIG NEWS: ವಿ.ಹೆಚ್.ಪಿ.ಯಿಂದ ಶ್ರೀರಂಗಪಟ್ಟಣ ಚಲೋ; ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ; ಎಸ್ ಪಿ ಎಚ್ಚರಿಕೆ

ಅಕ್ಷಯ ಕುಮಾರ್ ಜತೆಗೆ ನಟಿಸಿದ್ದೇನೆ ಎಂದು ಮೆಂಟಿ ಹೇಳಿದಾಗ ಪೊಲೀಸರು ನಂಬಿರಲಿಲ್ಲ. ಮೊಬೈಲ್‌ ಹ್ಯಾಂಡ್‌ಸೆಟ್‌ಗೆ ಸಂಬಂಧಿಸಿದ ವಾಣಿಜ್ಯ ವಿಡಿಯೋ ಜಾಹೀರಾತು ಎಂದು ಅದರ ಬ್ರ್ಯಾಂಡ್‌ ಮತ್ತು ಮಾದರಿಯನ್ನು ವಿವರಿಸಿದ್ದ. ಬಳಿಕ ಯೂಟ್ಯೂಬ್‌ನಲ್ಲಿ ಆ ಜಾಹೀರಾತನ್ನು ಪೊಲೀಸರು ವೀಕ್ಷಿಸಿ ಅದರಲ್ಲಿರುವುದು ಮೆಂಟಿ ಎಂಬುದನ್ನು ಖಚಿತಪಡಿಸಿಕೊಂಡರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

“ಯೂಟ್ಯೂಬ್‌ನಲ್ಲಿ ಮೆಂಟಿ ಹೇಳಿದ್ದ ಜಾಹೀರಾತನ್ನು ಪತ್ತೆ ಮಾಡಿ, ಪ್ಲೇ ಮಾಡಿ ನೋಡಿದ್ದೇವೆ. ಅದರಲ್ಲಿ ಮೆಂಟಿ ಇರುವುದನ್ನು ಖಚಿತಪಡಿಸಿದ್ದೇವೆ. ಆದರೆ ಈ ತೀರ್ಮಾನಕ್ಕೆ ಬರುವ ಮೊದಲು ಸಾಕಷ್ಟು ವಿಚಾರಣೆ ನಡೆಸಿದ್ದೇವೆ ಎಂದು ಆಜಾದ್ ಮೈದಾನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...