alex Certify ಮನೆಗೆ ಹೋಗ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್, ಇಬ್ಬರು ಅಪ್ರಾಪ್ತರು ಸೇರಿ ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಹೋಗ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್, ಇಬ್ಬರು ಅಪ್ರಾಪ್ತರು ಸೇರಿ ಮೂವರು ಅರೆಸ್ಟ್

ಮುಂಬೈ: ಅಡುಗೆ ಸಂಸ್ಥೆಯೊ0ದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿ ಮೇಲೆ ಶುಕ್ರವಾರ ಮುಂಜಾನೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ.

ಬೆಳಗ್ಗೆ 4 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಯುವತಿ ಮನೆಗೆ ಮರಳುತ್ತಿದ್ದಾಗ ಗೋವಂಡಿಯ ಶಿವಾಜಿ ನಗರ ಪ್ರದೇಶದಲ್ಲಿ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಮೂವರನ್ನು ಬಂಧಿಸಲಾಗಿದೆ, ಅವರಲ್ಲಿ ಇಬ್ಬರು ಅಪ್ರಾಪ್ತರು, ನಾಲ್ಕನೇ ಶಂಕಿತನನ್ನು ಬಂಧಿಸಲು ಪೊಲೀಸರ ತಂಡವು ಉತ್ತರ ಪ್ರದೇಶಕ್ಕೆ ತೆರಳಿದೆ. ನಾಲ್ವರು ಹಳೆಯ ಬೆಸ್ಟ್ ಡಿಪೋ ಬಳಿ ಯುವತಿಯನ್ನು ನೋಡಿದ್ದಾರೆ.

ಆಕೆಗೆ ತಿಳಿದಿರುವ ವ್ಯಕ್ತಿಯೊಬ್ಬ ಆ ಸಮಯದಲ್ಲಿ ಮನೆಗೆ ಹಿಂದಿರುಗುವ ಬಗ್ಗೆ ಪ್ರಶ್ನಿಸಿದ್ದಾನೆ. ಅವಳೊಂದಿಗೆ ಮಾತನಾಡಬೇಕಿದೆ ಎಂದು ಹೇಳುತ್ತಾ ಖಾಲಿ ಮನೆಯ ಮಹಡಿಗೆ ಕರೆದೊಯ್ದಿದ್ದಾನೆ. ಆತನ ಸ್ನೇಹಿತರು ಅವರನ್ನು ಹಿಂಬಾಲಿಸಿದ್ದಾರೆ. ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆಕೆ ಸಹಾಯಕ್ಕಾಗಿ ಕೂಗಲು ಪ್ರಯತ್ನಿಸಿದಾಗ, ಅವಳ ಬಾಯಿಯನ್ನು ಬಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಘಾತಕ್ಕೊಳಗಾದ ಯುವತಿ ಫೋನ್ ಮೂಲಕ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಮಹಿಳಾ ಅಧಿಕಾರಿಗಳ ತಂಡವು ಆಕೆಯ ಹೇಳಿಕೆ ಪಡೆದು ಎಫ್ಐಆರ್ ಅನ್ನು ದಾಖಲಿಸಿದೆ. ಅದೇ ಸುತ್ತಮುತ್ತಲಿನ ನಾಲ್ವರು ಆರೋಪಿಗಳನ್ನು ಗುರುತಿಸಲಾಗಿದೆ.

ಕೂಡಲೇ ಪೊಲೀಸ್ ತಂಡಗಳು ಕಾರ್ಯಪ್ರವೃತ್ತರಾಗಿ ರೈಲು ಹತ್ತಿ ಪರಾರಿಯಾಗಲೆತ್ನಿಸಿದ್ದ ಮೂವರನ್ನು ಲೋಕಮಾನ್ಯ ತಿಲಕ್ ಟರ್ಮಿನಸ್‌ ನಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಶಿವಾಜಿ ನಗರ ಪೊಲೀಸ್ ಹಿರಿಯ ಇನ್ಸ್‌ ಪೆಕ್ಟರ್ ಅರ್ಜುನ್ ರಾಜನೆ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...