alex Certify ಕೆಲಸ ಕೊಡಿಸುವುದಾಗಿ ಯುವತಿಯರ ಕರೆತಂದು ಮಾಂಸದಂಧೆ: ವೇಶ್ಯಾವಾಟಿಕೆ ಅಡ್ಡೆಯಲ್ಲಿದ್ದ 17 ಮಹಿಳೆಯರ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕೊಡಿಸುವುದಾಗಿ ಯುವತಿಯರ ಕರೆತಂದು ಮಾಂಸದಂಧೆ: ವೇಶ್ಯಾವಾಟಿಕೆ ಅಡ್ಡೆಯಲ್ಲಿದ್ದ 17 ಮಹಿಳೆಯರ ರಕ್ಷಣೆ

ಮುಂಬೈ: ಉದ್ಯೋಗ ಕೊಡಿಸುವ ಭರವಸೆ ನೀಡಿ ದೇಶದ ವಿವಿಧ ರಾಜ್ಯಗಳಿಂದ ಯುವತಿಯರನ್ನು ನವಿ ಮುಂಬೈಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಅಕ್ರಮ ಮಾಂಸದ ದಂಧೆಯನ್ನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಇತ್ತೀಚೆಗೆ ಭೇದಿಸಿದೆ. ಕಾರ್ಯಾಚರಣೆಯಲ್ಲಿ 17 ಮಹಿಳೆಯರನ್ನು ರಕ್ಷಿಸಿದ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಈ ವರ್ಷದ ಆಗಸ್ಟ್ 4 ರಂದು ಸಂತ್ರಸ್ತರಲ್ಲಿ ಒಬ್ಬರು ಅವರನ್ನು ಸಂಪರ್ಕಿಸಿದಾಗ ಈ ವಿಷಯದ ಬಗ್ಗೆ ಮೊದಲು ತನಿಖೆ ಪ್ರಾರಂಭಿಸಲಾಯಿತು.

ಮಾಹಿತಿ ನೀಡಿದ್ದ ಮಹಿಳೆ ತಾನು ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿದ್ದೇನೆ. ಆರೋಪಿಯು ಮುಂಬೈನಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ ಎಂದು ತಿಳಿಸಿದ್ದಾಳೆ. ಅವಳು ಮುಂಬೈ ತಲುಪಿದ ನಂತರ, ಬಲವಂತದಿಂದ ವೇಶ್ಯಾವಾಟಿಕೆಗೆ ನೂಕಲಾಗಿದೆ. ಅವಳಂತೆಯೇ ಮೋಸ ಹೋದ ಇತರರು ಅಲ್ಲಿದ್ದಾರೆಂದು ಆಕೆಗೆ ಗೊತ್ತಾಗಿದೆ. ಆರೋಪಿಗಳು ಮುಂಬೈ ಮತ್ತು ನವಿ ಮುಂಬೈನ ವಿವಿಧ ಭಾಗಗಳಲ್ಲಿನ ಹೋಟೆಲ್‌ ಗಳು ಮತ್ತು ಲಾಡ್ಜ್‌ ಗಳಲ್ಲಿ ಗ್ರಾಹಕರನ್ನು ಭೇಟಿಯಾಗಲು ಅವರನ್ನು ಬಲವಂತವಾಗಿ ಕಳುಹಿಸುತ್ತಾರೆ. ಅವರ ಎಲ್ಲಾ ಗಳಿಕೆಯನ್ನು ಕಸಿದುಕೊಳ್ಳುತ್ತಾರೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ ಸೆಲ್ ಗೆ ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿದೆ. ಸಂತ್ರಸ್ತರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಸೆಲ್ ನ ನಾಲ್ಕು ತಂಡಗಳು ಆಗಸ್ಟ್ 5 ರಂದು ನೆರೂಲ್‌ ನ ಶಿರೋನಾ ಗ್ರಾಮದ ವಿವಿಧ ಸ್ಥಳಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿವೆ. ಪೊಲೀಸರು ಎಲ್ಲಾ 17 ಸಂತ್ರಸ್ತರನ್ನು ತಮ್ಮ ವಶಕ್ಕೆ ತೆಗೆದುಕೊಂಡರು, ಜೊತೆಗೆ ದಂಧೆ ನಡೆಸುತ್ತಿದ್ದ 9 ಪಿಂಪ್‌ ಗಳನ್ನು ಬಂಧಿಸಲಾಗಿದೆ.

ನಾವು ದಂಧೆಯ ಮಾಸ್ಟರ್‌ ಮೈಂಡ್‌ ಗಳಾದ ಇಬ್ಬರನ್ನು ಗುರುತಿಸಿದ್ದು, ಅವರು ಪರಾರಿಯಾಗಿದ್ದಾರೆ. ಅವರನ್ನು ಕೂಡ ಬಂಧಿಸಲು ಪ್ರಯತ್ನ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ಬಾಲ್ಸಿಂಗ್ ರಜಪೂತ್ ಹೇಳಿದ್ದಾರೆ.

ರಕ್ಷಿಸಿದ ಮಹಿಳೆಯರನ್ನು ಆಶ್ರಯಧಾಮಕ್ಕೆ ಕಳುಹಿಸಲಾಯಿತು. ಅವರು ಭಾರತದ ವಿವಿಧ ರಾಜ್ಯಗಳಿಂದ ಬಂದವರಾಗಿದ್ದು ಅವರ ಕುಟುಂಬಗಳನ್ನು ಸಂಪರ್ಕಿಸುವ ಪ್ರಕ್ರಿಯೆ ನಡೆದಿದೆ. ಆರೋಪಿಗಳ ವಿರುದ್ಧ ವಿವಿಧ ಪ್ರಕರಣಗಳಡಿ ಕೇಸ್ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...