alex Certify ಕೊರೊನಾ ಲಸಿಕೆ ಅಭಿಯಾನದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ ಬಿಎಂಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಅಭಿಯಾನದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ ಬಿಎಂಸಿ

ಮಹಿಳೆಯರಿಗೆಂದೇ ವಿಶೇಷವಾಗಿ ಕೋವಿಡ್​ ಲಸಿಕೆ ಅಭಿಯಾನವನ್ನು ಆರಂಭಿಸುವ ಮೂಲಕ ಬೃಹತ್​ ಮುಂಬೈ ಮುನ್ಸಿಪಾಲ್​ ಕಾರ್ಪೋರೇಷನ್ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಈ ಅಭಿಯಾನದ ಲಾಭ ಪಡೆದ ಅನೇಕ ಮಹಿಳೆಯರು ಸರ್ಕಾರದ ಈ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಬಿಕೆಸಿ ಲಸಿಕಾ ಕೇಂದ್ರದಲ್ಲಿ ಎರಡನೇ ಡೋಸ್​ ಸ್ವೀಕರಿಸಿ ಮಾತನಾಡಿದ ಸ್ನೇಹಲ್, ದೈನಂದಿನ ಜೀವನದಲ್ಲಿ ಮಹಿಳೆಯರಿಗೆ ಬಿಡುವೇ ಸಿಗದ ಕಾರಣ ನಮಗೆ ಲಸಿಕೆಯ ಸ್ಲಾಟ್​ ಸಮಯಕ್ಕೆ ಸರಿಯಾಗಿ ತೆರಳಲು ಆಗುತ್ತಿರಲಿಲ್ಲ. ಅಲ್ಲದೇ ಅನೇಕ ಸಂದರ್ಭಗಳಲ್ಲಿ ಲಸಿಕೆಗೆ ಪೂರ್ವ ನೋಂದಣಿ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಅನೇಕ ಮಹಿಳೆಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ವೆಚ್ಚವನ್ನು ಭರಿಸುವುದು ಸಾಧ್ಯವಿರಲಿಲ್ಲ. ಇಂತಹ ಸಂದರ್ಭದಲ್ಲಿ ಬಿಎಂಸಿ ಮಾಡಿರುವ ಈ ವಿನೂತನ ಪ್ರಯತ್ನ ನಿಜಕ್ಕೂ ಸಹಕಾರಿ ಎಂದು ಹೇಳಿದರು.

ಮಹಿಳೆಯರಿಗೆಂದೆ ಮೀಸಲಿರುವ ಈ ವಿಶೇಷ ಲಸಿಕಾ ಅಭಿಯಾನವು ಬೆಳಗ್ಗೆ 10:30ರಿಂದ 6:30ರ ವರೆಗೆ 24 ವಾರ್ಡ್​ಗಳಲ್ಲಿ ನಡೆದಿದೆ. ಇಲ್ಲಿ ಸ್ಲಾಟ್​ಗೆ ಮುಂಗಡ ನೋಂದಣಿ ಮಾಡುವ ಅಗತ್ಯವಿಲ್ಲ. ಯಾವುದೇ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಮಹಿಳೆಯರು ಬಂದು ಮೊದಲ ಹಾಗೂ ಎರಡನೇ ಡೋಸ್​ ಲಸಿಕೆಯನ್ನು ಪಡೆಯಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...