alex Certify ಲಜ್ಜೆ ಬಿಟ್ಟು ಅಸಹ್ಯದ ವರ್ತನೆ: ಕಾಮದ ಮದದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದವ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಜ್ಜೆ ಬಿಟ್ಟು ಅಸಹ್ಯದ ವರ್ತನೆ: ಕಾಮದ ಮದದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದವ ಅರೆಸ್ಟ್

ಮುಂಬೈ: ಮುಂಬೈನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪ್ರತಿಯೊಬ್ಬ ನಾಯಿಗಳೊಂದಿಗೆ ಸಂಭೋಗ ನಡೆಸಿದ್ದಾನೆ.

65 ವರ್ಷದ ತರಕಾರಿ ಮಾರಾಟಗಾರ ಅಹಮದ್ ಶಾಹಿ ಇಂತಹ ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ. ನಾಯಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಅಂಧೇರಿ ವೆಸ್ಟ್ ನಲ್ಲಿ ಘಟನೆ ನಡೆದಿದೆ. ಆರೋಪಿ ನಾಯಿಗಳೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ ವಿಡಿಯೋ ಬಾಂಬೆ ಅನಿಮಲ್ ರೈಟ್ಸ್ ಎನ್.ಜಿ.ಒ. ಗಮನಕ್ಕೆ ಬಂದಿದ್ದು, ಅವರು ವಿಡಿಯೋ ಪೊಲೀಸರಿಗೆ ನೀಡಿ ದೂರು ಕೊಟ್ಟಿದ್ದಾರೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಅಂಧೇರಿಯ ಡಿಎನ್ ನಗರ ಠಾಣೆ ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ. ಆರೋಪಿ ನಾನು ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಲಜ್ಜೆ ಬಿಟ್ಟು ಹೇಳಿದ್ದಾನೆ. ಆತನ ವರ್ತನೆ ಅಸಹ್ಯ ತರುವಂತಿದೆ ಎಂದು ಎನ್.ಜಿ.ಒ. ಸಂಸ್ಥಾಪಕ ವಿಜಯ ಮೋಹನಿ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಆರೋಪಿ ಅಂಧೇರಿ ಪಶ್ಚಿಮದ ಗಿಲರ್ಬರ್ಟ್ ಪ್ರದೇಶದ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...