alex Certify ಕಾಬೂಲ್​​ನ ವಿವಿಧ ಪ್ರದೇಶಗಳಲ್ಲಿ ದಿಢೀರ್​ ರಾಕೆಟ್​ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಬೂಲ್​​ನ ವಿವಿಧ ಪ್ರದೇಶಗಳಲ್ಲಿ ದಿಢೀರ್​ ರಾಕೆಟ್​ ದಾಳಿ

ಅಫ್ಘಾನಿಸ್ತಾನದ ಕಾಬೂಲ್​​ನ ವಿವಿಧ ಸ್ಥಳಗಳಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ರಾಕೆಟ್​ ದಾಳಿ ನಡೆಸಲಾಗಿದೆ.

ಕಾಬೂಲ್​ನ ಪೂರ್ವದ ಖ್ವಾಜಾ ರವಾಶ್​ ಪ್ರದೇಶದಲ್ಲಿರುವ ಮನೆಗಳ ಬಳಿ ನಡೆದ ರಾಕೆಟ್​ ಲ್ಯಾಂಡ್​ ಆಗಿದ್ದು, ಘಟಮೆಯಲ್ಲಿ ಓರ್ವ ಮೃತಪಟ್ಟಿದ್ದರೆ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ.

ಹಮೀದ್​​ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಾಬೂಲ್​​ನ ಖ್ವಾಜಾ ರಮಾಶ್​ ಪ್ರದೇಶದ ಬಳಿ ಕನಿಷ್ಟ ನಾಲ್ಕು ರಾಕೆಟ್​ಗಳನ್ನ ಹಾರಿಸಲಾಗಿದೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯ ವರದಿ ಮಾಡಿದೆ. ಕಳೆದ ಒಂದು ತಿಂಗಳಲ್ಲಿ ನಗರದಲ್ಲಿ ನಡೆದ ಎರಡನೇ ರಾಕೆಟ್​ ದಾಳಿ ಇದಾಗಿದೆ. ಕಳೆದ ತಿಂಗಳು ಕಾಬೂಲ್​ನ ಉತ್ತರದ ಲ್ಯಾಬ್​ ಎ ಜಾರ್​ ಪ್ರದೇಶದಿಂದ ರಾಕೆಟ್​ಗಳನ್ನ ಹಾರಿಸಲಾಗಿತ್ತು. ಈವರೆಗೆ ಯಾವುದೇ ಉಗ್ರ ಗುಂಪು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...