alex Certify BIG NEWS: ಕಾಬೂಲ್ ನ ಗುರುದ್ವಾರದಲ್ಲಿ ಸರಣಿ ಸ್ಫೋಟ; ಓರ್ವ ಭದ್ರತಾ ಸಿಬ್ಬಂದಿ ಬಲಿ, ನಾಲ್ವರು ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಬೂಲ್ ನ ಗುರುದ್ವಾರದಲ್ಲಿ ಸರಣಿ ಸ್ಫೋಟ; ಓರ್ವ ಭದ್ರತಾ ಸಿಬ್ಬಂದಿ ಬಲಿ, ನಾಲ್ವರು ನಾಪತ್ತೆ

ಕಾಬೂಲ್: ಅಪ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಕರ್ತೆ ಪರ್ವಾನ್ ಗುರುದ್ವಾರದ ಬಳಿ ಉಗ್ರರು ಸರಣಿ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಓರ್ವ ಬಲಿಯಾಗಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಗುರುದ್ವಾರವನ್ನು ಗುರಿಯಾಗಿಸಿಕೊಂಡು ಸರಣಿ ಸ್ಫೋಟ ನಡೆಸಲಾಗಿದೆ. ಸ್ಫೋಟಕ್ಕೂ ಮುನ್ನ ಬಂದೂಕುದಾರಿಯೊಬ್ಬ ಗುರುದ್ವಾರಕ್ಕೆ ಧಾವಿಸಿದ್ದು, ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ ಮಂದಿರದೊಳಗೆ ನುಗ್ಗಿದ್ದಾನೆ. ಉಗ್ರನ ಗುಂಡೇಟಿಗೆ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದಾದ ಕೆಲವೇ ಕ್ಷಣಗಳಲ್ಲಿ ಗುರುದ್ವಾರದ ಸಾಹೀಬ್ ಆವರಣದ ಬಳಿ ಸರಣಿ ಸ್ಫೋಟ ನಡೆಸಲಾಗಿದ್ದು, ಸಾವು ನೋವುಗಳ ಬಗ್ಗೆ ಆತಂಕ ಶುರುವಾಗಿದೆ. ಘಟನೆಯಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಇನ್ನು ದಾಳಿಯ ವೇಳೆ 30 ಜನರು ಗುರುದ್ವಾರದ ಒಳಗೆ ಸಿಲುಕಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...