alex Certify ‘ ಆ ರಾತ್ರಿ ಧೋನಿ ಟೀಂ ಇಂಡಿಯಾ ಜೆರ್ಸಿಯಲ್ಲೇ ಮಲಗಿದ್ದರು, ಕಣ್ಣಂಚಲ್ಲಿ ನೀರಿತ್ತು ’ – ಭಾವುಕ ಕ್ಷಣಗಳನ್ನು ನೆನಪಿಸಿಕೊಂಡಿದ್ದ ಆರ್​. ಅಶ್ವಿನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ ಆ ರಾತ್ರಿ ಧೋನಿ ಟೀಂ ಇಂಡಿಯಾ ಜೆರ್ಸಿಯಲ್ಲೇ ಮಲಗಿದ್ದರು, ಕಣ್ಣಂಚಲ್ಲಿ ನೀರಿತ್ತು ’ – ಭಾವುಕ ಕ್ಷಣಗಳನ್ನು ನೆನಪಿಸಿಕೊಂಡಿದ್ದ ಆರ್​. ಅಶ್ವಿನ್​

2014ರಲ್ಲಿ ಟೆಸ್ಟ್​ ಕ್ರಿಕೆಟ್​ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಇಡೀ ಕ್ರಿಕೆಟ್​ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೇ ನೀಡಿದ್ದರು ಮಹೇಂದ್ರ ಸಿಂಗ್‌ ಧೋನಿ. ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಮೂರನೇ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ನೇತೃತ್ವವನ್ನು ವಹಿಸಿದ್ದ ಧೋನಿ ಟೆಸ್ಟ್​ ಜೀವನಕ್ಕೆ ನಿವೃತ್ತಿ ಘೋಷಿಸುವ ಮೂಲಕ ವಿರಾಟ್​ ಕೊಹ್ಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದರು.

ಈ ರೀತಿ ನಿವೃತ್ತಿ ಘೋಷಣೆ ಮಾಡುವ ಮುನ್ನ ಧೋನಿ ಒಂದೇ ಒಂದು ಸುಳಿವನ್ನೂ ಸಹ ನೀಡಿರಲಿಲ್ಲ. ಹೀಗಾಗಿ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ವಿಚಾರ ಅಭಿಮಾನಿಗಳನ್ನು ದಿಗ್ಬ್ರಮೆಗೊಳಿಸಿತ್ತು. ಟೆಸ್ಟ್​ ಸರಣಿಯ ಬಳಿಕ ಟೀಂ ಇಂಡಿಯಾವು ತ್ರಿಕೋನ ಸರಣಿ ಹಾಗೂ 2015ರ ವಿಶ್ವಕಪ್​ ಆಡಬೇಕಾದ್ದರಿಂದ ಧೋನಿ ಮುಂದಿನ ಮೂರು ತಿಂಗಳು ಆಸ್ಟ್ರೇಲಿಯಾದಲ್ಲೇ ಉಳಿದಿದ್ದರು.

ಧೋನಿ ಟೆಸ್ಟ್​ ಜೀವನಕ್ಕೆ ವಿದಾಯ ಹೇಳಿದ ದಿನಗಳನ್ನು ಮೆಲಕು ಹಾಕಿರುವ ಟೀಂ ಇಂಡಿಯಾ ಆಟಗಾರ ಆರ್​. ಅಶ್ವಿನ್​​ ಕೆಲ ವಿಚಾರಗಳನ್ನು ಶೇರ್​ ಮಾಡಿದ್ದಾರೆ. ಮಹೇಂದ್ರ ಸಿಂಗ್​ ಧೋನಿ ಇಡೀ ರಾತ್ರಿ ಟೆಸ್ಟ್​ ಕ್ರಿಕೆಟ್​ನ ಜೆರ್ಸಿಯನ್ನೇ ಧರಿಸಿದ್ದರು ಹಾಗೂ ಕಣ್ಣೀರು ಕೂಡ ಹಾಕಿದ್ದರು ಎಂದು ಅಶ್ವಿನ್​ ಹೇಳಿದ್ದಾರೆ. ಅಶ್ವಿನ್​ ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ಕಳೆದ ವರ್ಷ ಆಗಸ್ಟ್​ 15ರಂದು ಈ ವಿಡಿಯೋ ರಿಲೀಸ್​ ಮಾಡಿದ್ದರು. ಇದೇ ದಿನದಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.

2014ರಲ್ಲಿ ಧೋನಿ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ ದಿನ ನನಗೆ ಇನ್ನೂ ನೆನಪಿದೆ. ಮೆಲ್ಬೋರ್ನ್​ನಲ್ಲಿ ಪಂದ್ಯವನ್ನು ಉಳಿಸಿಕೊಳ್ಳಲು ನಾನು ಕೂಡ ಧೋನಿ ಜೊತೆ ಸೇರಿ ಹೋರಾಡುತ್ತಿದ್ದೆ, ಆದರೆ ನಾವು ಸೋತ ಬಳಿಕ ಸ್ಟಂಪ್​​ ಹಿಡಿದುಕೊಂಡ ಧೋನಿ ಆಯ್ತು ನನ್ನ ಕೆಲಸ ಎಂದು ಹೇಳಿದ್ದರು. ಅದು ಅವರಿಗೆ ತುಂಬಾ ಭಾವನಾತ್ಮಕ ಘಳಿಗೆಯಾಗಿತ್ತು. ಇಶಾಂತ್​ ಶರ್ಮಾ, ಸುರೇಶ್​ ರೈನಾ ಹಾಗೂ ನಾನು ಸಂಜೆ ಧೋನಿ ಕೋಣೆಯಲ್ಲೇ ಕುಳಿತಿದ್ದೆವು. ಅವರು ಅದೇ ಟೆಸ್ಟ್​ ಜೆರ್ಸಿಯನ್ನು ಇಡೀ ರಾತ್ರಿ ಧರಿಸಿದ್ದರು ಹಾಗೂ ಹನಿ ಕಣ್ಣೀರನ್ನೂ ಸುರಿಸಿದ್ದರು ಎಂದು ಅಶ್ವಿನ್​ ಹೇಳಿದ್ದಾರೆ.

2005ರಲ್ಲಿ ಚೆನ್ನೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದ ಮೂಲಕ ಟೆಸ್ಟ್​ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ಧೋನಿ 90 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. 2008 ರಲ್ಲಿ ಅನಿಲ್​ ಕುಂಬ್ಳೆ ನಿವೃತ್ತಿ ಬಳಿಕ ಧೋನಿ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿದ್ದರು. ಟೀಂ ಇಂಡಿಯಾದ ಯಶಸ್ವಿ ಟೆಸ್ಟ್​ ಕ್ರಿಕೆಟ್​ ನಾಯಕ ಎಂಬ ಹೆಗ್ಗಳಿಕೆಯನ್ನೂ ಸಂಪಾದಿಸಿದ್ದ ಧೋನಿ 60 ಪಂದ್ಯಗಳ ನಾಯಕತ್ವದಲ್ಲಿ 27 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...