alex Certify Watch Video : ವಿಮಾನದಲ್ಲಿ M.S. ಧೋನಿ ವಿಡಿಯೋ ವೈರಲ್; ಕೇವಲ 3 ಗಂಟೆಯೊಳಗೆ ‘ಕ್ಯಾಂಡಿ ಕ್ರಶ್’ 30 ಲಕ್ಷ ಮಂದಿಯಿಂದ ಡೌನ್ಲೋಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video : ವಿಮಾನದಲ್ಲಿ M.S. ಧೋನಿ ವಿಡಿಯೋ ವೈರಲ್; ಕೇವಲ 3 ಗಂಟೆಯೊಳಗೆ ‘ಕ್ಯಾಂಡಿ ಕ್ರಶ್’ 30 ಲಕ್ಷ ಮಂದಿಯಿಂದ ಡೌನ್ಲೋಡ್

ಧೋನಿ ಕ್ಯಾಂಡಿ ಕ್ರಶ್ ಆಡುತ್ತಿರುವ ವಿಡಿಯೋ ವೈರಲ್ ಆಗಿದ ಬೆನ್ನಲ್ಲೇ 3 ಮಿಲಿಯನ್ ಬಳಕೆದಾರರು ಕ್ಯಾಂಡಿ ಕ್ರಶ್ ಡೌನ್ ಲೋಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಭಾರತ ಕಂಡ ಹೆಮ್ಮೆಯ ನಾಯಕ, ಆದರೆ ಅವರ ನಿವೃತ್ತಿಯ ಬಳಿಕ ಐಪಿಎಲ್ ನಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಜನಪ್ರಿಯತೆ ಇನ್ನೂ ಕುಸಿದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಇತ್ತೀಚೆಗೆ ಧೋನಿ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಎಂಎಸ್ ಧೋನಿ ವಿಂಡೋ ಸೀಟ್ ನಲ್ಲಿ ಕೂತಿದ್ದರು. ಧೋನಿ ಅಭಿಮಾನಿ ಗಗನಸಖಿ ಒಂದು ಟ್ರೇನಲ್ಲಿ ಚಾಕೋಲೇಟ್ ಸೇರಿದಂತೆ ಇನ್ನಿತರ ತಿನಿಸುಗಳೊಂದಿಗೆ ಧೋನಿಯ ಬಳಿ ಹೋಗುತ್ತಾರೆ. ಧೋನಿ ಗಗನಸಖಿಯಿಂದ ಚಾಕೊಲೇಟ್ ಸ್ವೀಕರಿಸಿ ಥ್ಯಾಂಕ್ಸ್ ಹೇಳುತ್ತಾರೆ.

ಇದೇ ವೇಳೆ ಧೋನಿ ಕ್ಯಾಂಡಿ ಕ್ರಶ್ ಗೇಮ್ ಆಡಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ. ಇದನ್ನು ಗಮನಿಸಿದ ಅಭಿಮಾನಿಗಳು ನಾನು ಇನ್ನು ಕ್ಯಾಂಡಿ ಕ್ರಶ್ ಆಡುತ್ತೇನೆ ಎಂದು ಬರೆದು ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಹುತೇಕ ಅಭಿಮಾನಿಗಳು ಕ್ಯಾಂಡಿ ಕ್ರಶ್ ಡೌನ್ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ 3 ಮಿಲಿಯನ್ ಬಳಕೆದಾರರು ಕ್ಯಾಂಡಿ ಕ್ರಶ್ ಡೌನ್ ಲೋಡ್ ಮಾಡಿದ್ದಾರೆ ಎನ್ನಲಾಗಿದೆ.

ಧೋನಿ, ವೀಡಿಯೊ ಗೇಮ್ ಗಳ ಕಟ್ಟಾ ಅಭಿಮಾನಿ ಕೂಡ. ಧೋನಿ ಕಾಲ್ ಆಫ್ ಡ್ಯೂಟಿ, ಫಿಫಾ ಮತ್ತು ಪಬ್ಜಿ ಆಡುವುದಕ್ಕೆ ಇಷ್ಟ ಪಡುತ್ತಾರೆ. ಈ ತಿಂಗಳ ಆರಂಭದಲ್ಲಿ, ಭಾರತದ ಮಾಜಿ ನಾಯಕ ಮುಂಬೈ ಆಸ್ಪತ್ರೆಯಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...