ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಧನೆ ಬಗ್ಗೆ ಮತ್ತೆ ಹೇಳುವ ಅಗತ್ಯವಿಲ್ಲ. ಭಾರತಕ್ಕೆ ಐಸಿಸಿಯ ಅನೇಕ ಟ್ರೋಫಿ ತಂದುಕೊಟ್ಟಿರುವ ಧೋನಿ, ಐಪಿಎಲ್ ನಲ್ಲೂ ಕಮಾಲ್ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿ ಚಾಂಪಿಯನ್ ಮಾಡಿದ್ದಾರೆ ಧೋನಿ. ನಾಯಕತ್ವವನ್ನು ಅತ್ಯುತ್ತಮವಾಗಿ ನಿಭಾಯಿಸಿರುವ ಧೋನಿ, ಮುಂದಿನ ಐಪಿಎಲ್ ಆಡ್ತಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.
ಅಪ್ಪನನ್ನು ಸ್ವಾಗತಿಸಲು ಓಡೋಡಿ ಬಂದ ಪುಟ್ಟ ಕಂದ..! ಭಾವುಕರಾಗಿ ಬಾಲ್ಯ ಸ್ಮರಿಸಿಕೊಂಡ ಜನ
ಮುಂದಿನ ಐಪಿಎಲ್ ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದಕ್ಕಿಂತ ಮೊದಲು, ಧೋನಿ ಸಿಎಸ್ಕೆನಲ್ಲಿ ಮುಂದುವರೆಯಬೇಕಾ, ಬೇಡ್ವಾ ಎಂಬುದನ್ನು ಸಿಎಸ್ಕೆ ನಿರ್ಧರಿಸಲಿದೆ. ಆದ್ರೆ ಸಿಎಸ್ಕೆ ನಾಯಕತ್ವ ಮಾತ್ರವಲ್ಲ, ಕ್ರಿಕೆಟ್ ಗೆ ಧೋನಿ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ. ಮುಂದಿನ ಐಪಿಎಲ್ ಧೋನಿ ಆಡುವುದಿಲ್ಲ ಎಂಬುದಕ್ಕೆ ಅನೇಕ ಕಾರಣವಿದೆ.
ಧೋನಿ ಈ ವರ್ಷ ಬ್ಯಾಟಿಂಗ್ ನಲ್ಲಿ ಮಿಂಚಲಿಲ್ಲ. 16 ಪಂದ್ಯಗಳನ್ನು ಆಡಿರುವ ಧೋನಿ, 16.28ರ ಸರಾಸರಿಯಲ್ಲಿ ಕೇವಲ 114 ರನ್ ಗಳಿಸಿದ್ದಾರೆ. ಹೆಚ್ಚುತ್ತಿರುವ ವಯಸ್ಸು ಅವರ ಆಟದ ಮೇಲೆ ಸ್ಪಷ್ಟವಾಗಿ ಕಾಣ್ತಿದೆ.
ಮಂಡೇಲಾ ಉಡುಪುಗಳನ್ನು ಹರಾಜಿಗಿಟ್ಟ ಕುಟುಂಬ…!
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈವರೆಗೆ 9 ಬಾರಿ ಫೈನಲ್ ತಲುಪಿದೆ. ನಾಲ್ಕು ಬಾರಿ ಕಪ್ ಎತ್ತಿ ಹಿಡಿದಿದೆ. ನಾಯಕತ್ವದ ವಿಷ್ಯದಲ್ಲಿ ಧೋನಿ ಬಗ್ಗೆ ಎರಡು ಪ್ರಶ್ನೆಯಿಲ್ಲ. ಆದ್ರೆ ಸಿಎಸ್ಕೆಗೆ ಈಗ ದೀರ್ಘಕಾಲಕ್ಕೆ ನಾಯಕರ ಅಗತ್ಯವಿದೆ. 40 ವರ್ಷದ ಧೋನಿ ಹೆಚ್ಚೆಂದ್ರೂ ಇನ್ನು 2 ವರ್ಷ ನಾಯಕತ್ವ ನಿಭಾಯಿಸಬಹುದು. ಅದಕ್ಕೂ ಹೆಚ್ಚು ವರ್ಷ ಅವರನ್ನು ಮೈದಾನದಲ್ಲಿ ನೋಡಲು ಸಾಧ್ಯವಿಲ್ಲ.
ಇನ್ನೊಮ್ಮೆ ಚೆನ್ನೈಗೆ ಟ್ರೋಫಿ ನೀಡಬೇಕೆಂಬುದು ಧೋನಿ ಆಸೆಯಾಗಿತ್ತು. ಅದು ಈ ಬಾರಿ ನೆರವೇರಿದೆ. ಹಾಗಾಗಿ ಈ ಟ್ರೋಫಿ ಜೊತೆ ಧೋನಿ, ವಿದಾಯ ಹೇಳುವ ಸಾಧ್ಯತೆಯಿದೆ.