alex Certify ಪರಿಸರ ಸ್ನೇಹಿ ಉಡುಗೆಗಳ ಪ್ರಚಾರ ರಾಯಭಾರಿಯಾದ ಧೋನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಸರ ಸ್ನೇಹಿ ಉಡುಗೆಗಳ ಪ್ರಚಾರ ರಾಯಭಾರಿಯಾದ ಧೋನಿ

ಪರಿಸರ ಸ್ನೇಹಿ ಉಡುಗೆ-ತೊಡುಗೆಯ ’ಕೂಲ್’ ಟ್ರೆಂಡ್ ಸೃಷ್ಟಿ ಮಾಡಲು ಮುಂದಾಗಿರುವ ಭಾರತೀಯ ಕ್ರಿಕೆಟ್ ತಂಡದ ’ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್ ಧೋನಿ ಹೊಸದೊಂದು ಬ್ರಾಂಡ್‌ನ ರಾಯಭಾರಿಯಾಗಲು ಸಜ್ಜಾಗಿದ್ದಾರೆ.

’ಇಂಡಿಯನ್ ಟೆರೇನ್’ ಹೆಸರಿನ ಬ್ರಾಂಡ್‌ ರಾಯಭಾರಿಯಾಗಿ ನೇಮಕವಾಗಿರುವ ಧೋನಿ, ಬಹುವಿಧದ ಕ್ಯಾಶುವಲ್, ಸ್ಲೀಕ್ ಸೇರಿದಂತೆ ಅನೇಕ ರೀತಿಯ ವಸ್ತ್ರಗಳನ್ನು ಪರಿಚಯಿಸಲಿದ್ದಾರೆ.

“ಬದಲಾಗುತ್ತಿರುವ ಕಾಲಮಾನದಂತೆ ಫ್ಯಾಶನ್ ಸಹ ಮಾರ್ಪಾಡಾಗುತ್ತಿದೆ. ನಮಗೆ ಹಿತವಾಗುವ ಶೈಲಿಯ ಫ್ಯಾಶನ್ ಆಯ್ದುಕೊಳ್ಳುವುದರೊಂದಿಗೆ ಭೂಮಂಡಲದ ಹಿತದತ್ತಲೂ ಸ್ವಲ್ಪ ಗಮನ ಕೊಡುವ ಆಯ್ಕೆ ನಮ್ಮದು,” ಎಂದು ಧೋನಿ ಹೇಳಿದ್ದಾರೆ.

BIG NEWS: ಕೇರಳದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ; ಭಯ ಹುಟ್ಟಿಸಿದ ಸೋಂಕಿತರ ಸಂಖ್ಯೆ

ಬಿಳಿ ಟೀ-ಶರ್ಟ್ ಹಾಗೂ ನೀಲಿ ಪ್ಯಾಂಟ್‌ನಲ್ಲಿ ಮಿಂಚುತ್ತಿರುವ ಧೋನಿ ಖುದ್ದು ತಮ್ಮದೇ ಫ್ಯಾಶನ್ ಹಾಗೂ ಲುಕ್ಸ್‌ಗಳ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲು ಇಚ್ಛಿಸುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇರುವ ಸಂಗತಿಯಾಗಿದೆ.

ಪರಿಸರ ಸ್ನೇಹಿಯಾದ ಟೀ-ಶರ್ಟ್‌ಗಳು, ಪ್ಯಾಂಟ್‌ಗಳು ಹಾಗೂ ಶರ್ಟ್‌ಗಳ ವೈವಿಧ್ಯಮಯ ಆಯ್ಕೆಗಳನ್ನು ಇಂಡಿಯನ್ ಟೆರೇನ್ ಕೊಡಮಾಡುತ್ತಿದೆ. ಗ್ರಾಹಕರಿಗೆ ತಮ್ಮ ಖರೀದಿಯೊಂದಿಗೆ ಪರಿಸರದ ಮೇಲೂ ಅಲ್ಪ ಸ್ವಲ್ಪ ಕಾಳಜಿ ಮಾಡುವುದನ್ನು ಧೋನಿ ಈ ಜಾಹೀರಾತುಗಳ ಮೂಲಕ ತಿಳಿ ಹೇಳಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...