alex Certify ಹೊಸ ಲುಕ್ ನಲ್ಲಿ ಕಾಣಿಸಿಕೊಂಡ `ಕ್ಯಾಪ್ಟನ್ ಕೂಲ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಲುಕ್ ನಲ್ಲಿ ಕಾಣಿಸಿಕೊಂಡ `ಕ್ಯಾಪ್ಟನ್ ಕೂಲ್’

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮೈದಾನದಿಂದ ದೂರವಿದ್ರೂ ಕೂಲ್ ಕ್ಯಾಪ್ಟನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಈಗ ಮತ್ತೆ ಧೋನಿ,‌ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ಹೇರ್ ಸ್ಟೈಲ್.

ಹೇರ್ ಸ್ಟೈಲರ್ ಆಲಿಮ್ ಹಕೀಮ್, ಶುಕ್ರವಾರ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದ್ರಲ್ಲಿ ಮಹೇಂದ್ರ ಸಿಂಗ್ ಧೋನಿ ಹೊಸ ಹೇರ್ ಸ್ಟೈಲ್ ಫೋಟೋ ಇದೆ.

ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ಮಹೇಂದ್ರ ಸಿಂಗ್ ಧೋನಿ ಸುದ್ದಿ ಮಾಡ್ತಿದ್ದರು. ವೃತ್ತಿ ಆರಂಭದಿಂದಲೂ ಧೋನಿ ಹೇರ್ ಸ್ಟೈಲ್ ಚರ್ಚೆಯಲ್ಲಿದೆ. ಹಾಗಾಗಿ ಹೊಸ ಹೊಸ ಹೇರ್ ಕಟ್ ಮಾಡಿ ಧೋನಿ, ಅಭಿಮಾನಿಗಳ ಮನ ಗೆದ್ದಿದ್ದಾರೆ.

ಯುಎಇನಲ್ಲಿ ನಡೆಯುವ ಐಪಿಎಲ್ ಮುಂದುವರಿದ ಭಾಗದಲ್ಲಿ ಧೋನಿ, ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ. ಶೀಘ್ರವೇ ಚೆನ್ನೈ ತಂಡ ಸೇರಲಿರುವ ಧೋನಿ, ಅಭ್ಯಾಸ ನಡೆಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...