alex Certify ಜೂನ್ ನಲ್ಲಿ 16 ವಿಧಾನ ಪರಿಷತ್ ಸದಸ್ಯರು ನಿವೃತ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್ ನಲ್ಲಿ 16 ವಿಧಾನ ಪರಿಷತ್ ಸದಸ್ಯರು ನಿವೃತ್ತಿ

ಬೆಂಗಳೂರು: ಜೂನ್ ವೇಳೆಗೆ 16 ವಿಧಾನ ಪರಿಷತ್ ಸದಸ್ಯರು ನಿವೃತ್ತರಾಗಲಿದ್ದು, ಗುರುವಾರ ನಡೆದ ಅಧಿವೇಶನದಲ್ಲಿ ಬೀಳ್ಕೊಡುಗೆ ಮಾತುಗಳೊಂದಿಗೆ ಅವರ ಕಾರ್ಯ ವೈಖರಿಯನ್ನು ಸದಸ್ಯರು ಪ್ರಸ್ತಾಪಿಸಿದ್ದಾರೆ.

ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ, ನಾನು ಪತ್ರಕರ್ತೆಯಾಗಿದ್ದೆ. ರಾಜಕೀಯಕ್ಕೆ ಬರುವ ಕನಸು ನನಗಿರಲಿಲ್ಲ. ಠೇವಣಿ ಹಣ ಪಾವತಿಸಲು ಕೂಡ ನನಗೆ ಹಣ ಇರಲಿಲ್ಲ. ಪಕ್ಷದ ಸದಸ್ಯರು ಸ್ಪರ್ಧೆಗೆ ಸಹಾಯ ಮಾಡಿದರು. 2004 ರಿಂದ 2024ರ ವರೆಗೆ 20 ವರ್ಷಗಳು ಕಳೆದು ಹೋಗಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಭಾವುಕರಾಗಿ ಹೇಳಿದ್ದಾರೆ.

ಪ್ರತಿ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ನಾನು ಬೇರೆಯವರ ಮನೆಗೆ ಹೋಗಿ ಕೂಲಿ ಕೆಲಸ ಮಾಡಿದ್ದೇನೆ. ಕೂಲಿಗೆ ಹೋಗದಿದ್ದರೆ ಮನೆಯಲ್ಲಿ ಊಟಕ್ಕೆ ಇರುತ್ತಿರಲಿಲ್ಲ. 11 ರೂಪಾಯಿ ಕೂಲಿಗಾಗಿ ಕೆಲಸ ಮಾಡಿದ್ದೇನೆ. ಪದವಿ ಓದುವಾಗ ಎಬಿವಿಪಿಗೆ ಸೇರಿದೆ. ವಿವೇಕಾನಂದರ ಪುಸ್ತಕಗಳನ್ನು ಮಾರಾಟ ಮಾಡಿ ರಾಮಕೃಷ್ಣ ಟ್ರಸ್ಟಿಗೆ ಒಂದು ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದೇನೆ. ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಶೀರ್ವಾದದಿಂದ ನಾನು ಈ ಹುದ್ದೆ ಅಲಂಕರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ, ವಿಧಾನಸೌಧದಲ್ಲಿ ಕೆಲಸದ ನಿಮಿತ್ತ ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡಲು ಬಂದಾಗ ನಾನು ಇಲ್ಲಿ ಸ್ಥಾನಮಾನ ಪಡೆದುಕೊಳ್ಳಬೇಕೆಂಬ ಆಸೆಯಾಗಿತ್ತು. ನನ್ನ ಕನಸು ನನಸಾಯಿತು ಎಂದು ಹೇಳಿದ್ದಾರೆ.

ರಾಜಕೀಯ ದಿನಗಳನ್ನು ಮೆಲುಕು ಹಾಕುವಾಗ ಭಾವುಕರಾದ ಜೆಡಿಎಸ್ ಸದಸ್ಯ ಬಿ.ಎಂ. ಫಾರೂಕ್. ಜೆಡಿಎಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ನಿವೃತ್ತರಾಗಲಿರುವ ಸದಸ್ಯರು

ರಘುನಾಥರಾವ್ ಮಲ್ಕಾಪುರೆ

ಕೆ. ಗೋವಿಂದರಾಜ್

ಅರವಿಂದ ಕುಮಾರ್ ಅರಳಿ

ತೇಜಸ್ವಿನಿ ಗೌಡ

ಕೆ.ಪಿ. ನಂಜುಂಡಿ ವಿಶ್ವಕರ್ಮ

ಎಸ್. ರುದ್ರೇಗೌಡ

ಕೆ. ಹರೀಶ್ ಕುಮಾರ್

ಪಿ.ಎಂ. ಮುನಿರಾಜುಗೌಡ

ಎನ್.ಎಸ್. ಭೋಸರಾಜು,

ಆ. ದೇವೇಗೌಡ

ಡಾ. ಚಂದ್ರಶೇಖರ ಬಿ. ಪಾಟೀಲ

ಮರಿತಿಬ್ಬೇಗೌಡ

ವೈ.ಎ. ನಾರಾಯಣಸ್ವಾಮಿ

ಎಸ್.ಎಲ್. ಭೋಜೇಗೌಡ

ಬಿ.ಎಂ. ಫಾರೂಕ್,

ಎನ್. ರವಿಕುಮಾರ್

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...