alex Certify ಲೈಂಗಿಕ ಕಾರ್ಯಕರ್ತೆಯರೊಂದಿಗೆ ಸೆಕ್ಸ್ ಬಳಿಕ ಘೋರ ಕೃತ್ಯ: ಮಕ್ಕಳಿಲ್ಲದ ದಂಪತಿ ಸೇರಿ ಐವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಕಾರ್ಯಕರ್ತೆಯರೊಂದಿಗೆ ಸೆಕ್ಸ್ ಬಳಿಕ ಘೋರ ಕೃತ್ಯ: ಮಕ್ಕಳಿಲ್ಲದ ದಂಪತಿ ಸೇರಿ ಐವರು ಅರೆಸ್ಟ್

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ನಡೆದ ಆಘಾತಕಾರಿ ಡಬಲ್ ಮರ್ಡರ್ ಪ್ರಕರಣದಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಮಕ್ಕಳಿಲ್ಲದ ದಂಪತಿ ಒಂದೇ ವಾರದಲ್ಲಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ, ಮಾಟ ಮಂತ್ರವಾದಿಯೊಬ್ಬರು ಮಕ್ಕಳನ್ನು ಪಡೆಯಲು ‘ನರಬಲಿ’ ಮಾಡಲು ಪ್ರೇರೇಪಿಸಿದ್ದರಿಂದ ಇಂತಹ ಕೃತ್ಯವೆಸಗಿದ್ದಾರೆ.

ದಂಪತಿ ಹಾಗೂ ಮಾಟಮಂತ್ರ ಮಾಡುತ್ತಿದ್ದ ವ್ಯಕ್ತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸ್ವಯಂ ಘೋಷಿತ ಮಂತ್ರವಾದಿ ಗಿರ್ವಾರ್ ಯಾದವ್, ಬಂಟು ಭದೌರಿಯಾ, ಆತನ ಪತ್ನಿ ಮಮತಾ, ಆಕೆಯ ಸಹೋದರಿ ಮೀರಾ ರಾಜಾವತ್ ಮತ್ತು ಆಕೆಯ ಸ್ನೇಹಿತ ನೀರಜ್ ಪರ್ಮಾರ್ ಎಂದು ಗುರುತಿಸಲಾಗಿದೆ.

ಮೊದಲ ಹತ್ಯೆ ಅಕ್ಟೋಬರ್ 13 ರಂದು ಮತ್ತು ಎರಡನೆಯದು ಅಕ್ಟೋಬರ್ 20 ರಂದು ನಡೆಯಿತು. ಅಲ್ಲದೆ, ಇಬ್ಬರು ಬಲಿಪಶುಗಳನ್ನು ಬಲಿ ಕೊಡುವ ಮೊದಲು, ನೀರಜ್ ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ಅಕ್ಟೋಬರ್ 21 ರಂದು ಗ್ವಾಲಿಯರ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಅದರ ನಂತರ ತನಿಖೆ ಕೈಗೊಳ್ಳಲಾಗಿದೆ. ಮೃತಳನ್ನು ಲೈಂಗಿಕ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ. ನಂತರದಲ್ಲಿ ನೀರಜ್ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಆರೋಪಿ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಟು ಮತ್ತು ಆತನ ಪತ್ನಿ ಮಮತಾ ಮದುವೆಯಾಗಿ 18 ವರ್ಷಗಳಾಗಿದ್ದರೂ ಮಕ್ಕಳಾಗಲಿಲ್ಲ. ಅವರನ್ನು ನೀರಜ್ ಸ್ವಯಂ ಘೋಷಿತ ದೇವಮಾನವನಾದ ಯಾದವ್‌ ಬಳಿಗೆ ಕರೆದೊಯ್ದರು. ಬಂಟು ಮತ್ತು ಮಮತಾ ನರಬಲಿ ಕೊಟ್ಟರೆ ಪೋಷಕರಾಗಬಹುದು ಎಂದು ಯಾದವ್ ಹೇಳಿದ್ದಾನೆ.

ಲೈಂಗಿಕ ಕಾರ್ಯಕರ್ತೆಗೆ ನೀರಜ್ 10,000 ರೂ. ಕೊಟ್ಟು ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ನಂತರ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ, ಆರೋಪಿಯು ಮಹಿಳೆಯ ಶವವನ್ನು ಮೋಟರ್‌ ಸೈಕಲ್‌ನಲ್ಲಿಟ್ಟುಕೊಂಡು ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಲು ಯಾದವ್ ಬಳಿಗೆ ತರುತ್ತಾನೆ ದಾರಿಯಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಶವವನ್ನು ರಸ್ತೆಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಒಂದು ವಾರದ ಹಿಂದೆ ಇದೇ ಉದ್ದೇಶಕ್ಕಾಗಿ ಅವರು ಇನ್ನೊಬ್ಬ ಲೈಂಗಿಕ ಕಾರ್ಯಕರ್ತೆಯನ್ನು ಕೊಂದಿದ್ದಾರೆ ಎಂಬುದು ಬಹಿರಂಗವಾಗಿದೆ. ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ನೀರಜ್ ಆಕೆಯ ಕತ್ತು ಹಿಸುಕಿದ್ದ. ಆಕೆಯ ಶವ ಅಕ್ಟೋಬರ್ 14 ರಂದು ಮೊರೆನಾದಲ್ಲಿ ಪತ್ತೆಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...