alex Certify ಈ ಊರಿನಲ್ಲಿ ನಿರ್ಮಾಣವಾಗಿದೆ ಥೇಟ್‌ ʼತಾಜ್‌ ಮಹಲ್‌ʼ ಮಾದರಿಯ ಮನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಊರಿನಲ್ಲಿ ನಿರ್ಮಾಣವಾಗಿದೆ ಥೇಟ್‌ ʼತಾಜ್‌ ಮಹಲ್‌ʼ ಮಾದರಿಯ ಮನೆ

ಮೊಘಲರ ರಾಜ ಶೆಹಜಹಾನ್​ನಿಂದ ನಿರ್ಮಾಣಗೊಂಡ ತಾಜ್​​ಮಹಲ್​​ ಪ್ರೀತಿಯ ಸಂಕೇತವಾಗಿದೆ. ಸುಪ್ರಸಿದ್ಧ ತಾಜ್​​ಮಹಲ್​ನ್ನೇ ಹೋಲುವ ಮನೆಯೊಂದನ್ನು ಮಧ್ಯ ಪ್ರದೇಶದ ಬುರ್ಹಾನ್​ಪುರದಲ್ಲಿ ನಿರ್ಮಾಣ ಮಾಡಲಾಗಿದೆ. ಶೆಹಜಹಾನ್ ತನ್ನ ಪತ್ನಿಯ ಮೇಲಿನ ಪ್ರೇಮದ ಸಂಕೇತವಾಗಿ ಈ ತಾಜ್​ಮಹಲ್​ನ್ನು ನಿರ್ಮಿಸಿದ್ದರೆ ಇಲ್ಲೊಬ್ಬ ವ್ಯಕ್ತಿಯು ತನ್ನ ಸಂಗಾತಿಗೆ ಉಡುಗೊರೆಯ ರೂಪದಲ್ಲಿ ಈ ತಾಜ್​ಮಹಲ್​ ಮಾದರಿಯ ಮನೆಯನ್ನು ನೀಡಿದ್ದಾರೆ .

ಬುರ್ಹಾನ್​​ಪುರ ನಿವಾಸಿಯಾದ ಆನಂದ್​ ಚೋಕ್ಸೆ ಶೆಹಜಹಾನ್​ ಪತ್ನಿ ಮುಮ್ತಾಜ್​ ಬುರ್ಹಾನ್​ಪುರದಲ್ಲೇ ಸಾವನ್ನಪ್ಪಿದ್ದರೂ ಸಹ ಯಾಕೆ ತಮ್ಮ ಊರಿನಲ್ಲಿ ತಾಜ್​ಮಹಲ್​ ನಿರ್ಮಾಣ ಮಾಡಿಲ್ಲ ಎಂದು ಎಂದಿಗೂ ಯೋಚಿಸುತ್ತಿದ್ದರಂತೆ. ಮೊದಲು ತಾಜ್​ಮಹಲ್​ನ್ನು ತಪ್ತಿ ನದಿಯ ದಡದಲ್ಲೇ ನಿರ್ಮಾಣ ಮಾಡೋದಾಗಿ ಪ್ಲಾನ್​ ಮಾಡಿದ್ದರಂತೆ. ಬಳಿಕ ಆಗ್ರಾದಲ್ಲಿ ನಿರ್ಮಾಣ ಮಾಡುವ ಮನಸ್ಸು ಮಾಡಲಾಯ್ತು.

4 ಮಲಗುವ ಕೋಣೆಯನ್ನು ಹೊಂದಿರುವ ಈ ತಾಜ್​ ಮಹಲ್​ ಮಾದರಿಯ ಮನೆಯನ್ನು ನಿರ್ಮಾಣ ಮಾಡಲು ಮೂರು ವರ್ಷ ತೆಗೆದುಕೊಳ್ಳಲಾಗಿದೆ.
ಈ ಮನೆಯನ್ನು ನಿರ್ಮಾಣ ಮಾಡಲು ಇಂಜಿನಿಯರ್​ಗಳಿಗೆ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಅವರು ನಿಜವಾದ ತಾಜ್​ಮಹಲ್​ನ್ನು ತುಂಬಾ ಗಾಢವಾಗಿ ಅಧ್ಯಯನ ಮಾಡಿದ್ದರು. ಬಂಗಾಳ ಹಾಗೂ ಇಂದೋರ್​ನ ಕಲಾವಿದರ ಸಹಾಯವನ್ನು ಪಡೆದು ಈ ತಾಜ್​ ಮಹಲ್​ ಮನೆಯನ್ನು ನಿರ್ಮಿಸಲಾಗಿದೆ.

ಇಲ್ಲಿ ದೊಡ್ಡ ಹಾಲ್​, ಕೆಳಗಿನ ಅಂತಸ್ತಿನಲ್ಲಿ 2 ಮಲಗುವ ಕೋಣೆ , ಮೇಲಿನ ಅಂತಸ್ತಿನಲ್ಲಿ 2 ಮಲಗುವ ಕೋಣೆ, 1 ಲೈಬ್ರರಿ ಹಾಗೂ ಒಂದು ಪ್ರಾರ್ಥನಾ ಮಂದಿರವನ್ನು ಇಡಲಾಗಿದೆ. ಈ ಮನೆಯ ಲೈಟಿಂಗ್ ವ್ಯವಸ್ಥೆ ಯಾವ ರೀತಿ ಮಾಡಲಾಗಿದೆ ಅಂದರೆ ಅದು ರಾತ್ರಿ ವೇಳೆ ತಾಜ್​ಮಹಲ್​ನಂತೆಯೇ ಪ್ರಜ್ವಲಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...