alex Certify ಮದುವೆಯಾಗಿರುವ ಹಿಂದು ಯುವತಿ ಮುಸ್ಲಿಂ ಯುವಕನಿಗೆ ಭದ್ರತೆ ನೀಡಿ: ಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗಿರುವ ಹಿಂದು ಯುವತಿ ಮುಸ್ಲಿಂ ಯುವಕನಿಗೆ ಭದ್ರತೆ ನೀಡಿ: ಕೋರ್ಟ್ ಆದೇಶ

ಹಿಂದು ಯುವತಿಯನ್ನು ಅಪಹರಿಸಿದ ಆರೋಪದಲ್ಲಿ ಮುಸ್ಲಿಂ ಯುವಕನನ್ನು ಬಂಧಿಸುವುದಕ್ಕೆ ಮಧ್ಯ ಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಆ ವ್ಯಕ್ತಿ ಬಯಸಿದರೆ ಭದ್ರತೆ ನೀಡುವಂತೆ ಪೊಲೀಸರಿಗೆ ಆದೇಶ ನೀಡಿದೆ.

ದಿಂಡೋರಿ ನಿವಾಸಿ ಆಸಿಫ್ ಖಾನ್ ತನ್ನ ಮನೆಯ ಹತ್ತಿರದಲ್ಲೇ ವಾಸಿಸುತ್ತಿದ್ದ ಸಾಕ್ಷಿ ಸಾಹು ಎಂಬ ಯುವತಿಯೊಂದಿಗೆ ಪರಾರಿಯಾಗಿ ಚತ್ತೀಸ್ ಘಡದ ದಂತೇವಾಡದಲ್ಲಿ ವಿವಾಹವಾಗಿದ್ದ. ಈ ಬಗ್ಗೆ ಯುವತಿಯ ಪೋಷಕರು ಆಸಿಫ್ ಖಾನ್ ಮತ್ತವರ ಕುಟುಂಬದ ವಿರುದ್ಧ ಪೊಲೀಸರಲ್ಲಿ ಪ್ರಕರಣ ದಾಖಲಿಸಿ, ಇದೊಂದು ಕಾನೂನು ಬಾಹಿರ ಮದುವೆ ಎಂದು ದೂರಿದ್ದರು. ವಿಚಾರಣೆ ವೇಳೆ ಸಾಕ್ಷಿ ತನ್ನ ಸಹಮತದಿಂದಲೇ ಮದುವೆಯಾಗಿದೆ. ನನ್ನನ್ನು ಯಾರೂ ಅಪಹರಿಸಿಲ್ಲ ಎಂದು ಹೇಳಿಕೆ ನೀಡಿದ್ದಳು.

ದೋಸೆ ಮಾರಾಟಗಾರನ ಅಸಾಧಾರಣ ಕೌಶಲ್ಯಕ್ಕೆ ಪ್ರಭಾವಿತರಾದ ಉದ್ಯಮಿ ಹರ್ಷ್ ಗೋಯೆಂಕಾ; ಅಷ್ಟಕ್ಕೂ ಅಂಥದ್ದೇನಿದೆ ಗೊತ್ತಾ..?

ಇತ್ತ ನನ್ನ ವಿರುದ್ಧ ವಿನಾಕಾರಣ ಅಪಹರಣ ಆರೋಪದಲ್ಲಿ ದಿಂಡೋರಿ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಖಾನ್ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದ. ಅಲ್ಲದೇ, ಕಾನೂನು ಬಾಹಿರವಾಗಿ ನನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದು ಮಾಡಬೇಕೆಂದು ಮನವಿ ಮಾಡಿದ್ದ.

ಈ ನಡುವೆ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಕ್ರಿಮಿನಲ್ ಗಳ ವಿರುದ್ಧ ಜಾರಿಗೆ ತಂದಿರುವ ಬುಲ್ಡೋಜರ್ ಅಭಿಯಾನದ ಅಡಿಯಲ್ಲಿ ಖಾನ್ ಮನೆಯನ್ನು ನೆಲಸಮ ಮಾಡಲಾಗಿತ್ತು.

ಈ ವಿಷಯವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಂದಿತಾ ದುಬೆ, ರಾಜ್ಯ ಸರ್ಕಾರ, ಪೊಲೀಸರು ಮತ್ತು ಇತರರಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೇ, ನೆಲಸಮ ಅಭಿಯಾನದ ಬಗ್ಗೆ ಮಾಹಿತಿ ನೀಡುವಂತೆ ದಿಂಡೋರಿ ಆಡಳಿತಕ್ಕೆ ಆದೇಶ ನೀಡಿದೆ. ಅಲ್ಲದೇ, ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗುವಂತೆ ಖಾನ್ ಮತ್ತು ಸಾಕ್ಷಿಗೆ ಸೂಚನೆ ನೀಡಿದ್ದು, ಖಾನ್ ಬಯಸಿದರೆ ಭದ್ರತೆಯನ್ನೂ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...