alex Certify 15 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ: ಸಚಿವರು, ಪಕ್ಷ ಸೇರದವರ ಹೆಸರೂ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ: ಸಚಿವರು, ಪಕ್ಷ ಸೇರದವರ ಹೆಸರೂ ಸೇರ್ಪಡೆ

ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ. ಪಟ್ಟಿಯಲ್ಲಿ ಕೆಲವು ಸಚಿವರ ಹೆಸರುಗಳು ಕೂಡ ಇದ್ದು, ಇದರೊಂದಿಗೆ ಪಕ್ಷ  ಸೇರದ ಇಬ್ಬರ ಹೆಸರೂ ಇದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಚಿವರು ಹಿಂದೇಟು ಹಾಕಿದ್ದಾರೆ. ಆರೇಳು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ತೀವ್ರ ಪೈಪೋಟಿ ಇದೆ. ಕಾಂಗ್ರೆಸ್ ನಾಯಕರು 15 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಒಂದೇ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ -ಡಿ.ಕೆ. ಸುರೇಶ್

ಕೋಲಾರ –ಕೆ.ಹೆಚ್. ಮುನಿಯಪ್ಪ

ಚಾಮರಾಜನಗರ –ಡಾ.ಹೆಚ್.ಸಿ. ಮಹದೇವಪ್ಪ

ಬಳ್ಳಾರಿ –ಬಿ. ನಾಗೇಂದ್ರ

ಬೆಳಗಾವಿ -ಸತೀಶ್ ಜಾರಕಿಹೊಳಿ

ತುಮಕೂರು -ಮುದ್ದಹನುಮೇಗೌಡ

ಚಿತ್ರದುರ್ಗ –ಬಿ.ಎನ್. ಚಂದ್ರಪ್ಪ

ಹಾಸನ -ಶ್ರೇಯಸ್ ಪಟೇಲ್

ಉತ್ತರ ಕನ್ನಡ -ಅಂಜಲಿ ನಿಂಬಾಳ್ಕರ್

ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್ ಹೆಗಡೆ

ದಾವಣಗೆರೆ -ಪ್ರಭಾ ಮಲ್ಲಿಕಾರ್ಜುನ

ಬೀದರ್ -ರಾಜಶೇಖರ ಪಾಟೀಲ್

ರಾಯಚೂರು -ಕುಮಾರನಾಯಕ ಸೇರಿದಂತೆ 15 ಕ್ಷೇತ್ರಗಳಿಗೆ ಒಂದು ಹೆಸರಿನ ಪಟ್ಟಿ ಸಿದ್ದಪಡಿಸಲಾಗಿದೆ. ಕಾಂಗ್ರೆಸ್ ಸೇರದ ಇಬ್ಬರ ಹೆಸರು ಕೂಡ ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...