alex Certify ʼಬ್ರಹ್ಮಾಸ್ತ್ರʼದಲ್ಲಿನ ಮೌನಿ ರಾಯ್​ ಅಭಿನಯಕ್ಕೆ ಪ್ರಶಂಸೆಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ರಹ್ಮಾಸ್ತ್ರʼದಲ್ಲಿನ ಮೌನಿ ರಾಯ್​ ಅಭಿನಯಕ್ಕೆ ಪ್ರಶಂಸೆಗಳ ಸುರಿಮಳೆ

ರಣಬೀರ್​ ಕಪೂರ್​- ಆಲಿಯಾ ಭಟ್​ ಅಭಿನಯದ ಬ್ರಹ್ಮಾಸ್ತ್ರ ಬಿಡುಗಡೆಗೆ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿತ್ತು. ಹಾಗೆಯೇ ವಿವಾದದಲ್ಲಿ ಮುಳುಗಿತ್ತು.

ಟ್ವಿಟ್ಟರ್​ನಲ್ಲಿ ಈ ಚಲನಚಿತ್ರದ ಬಹಿಷ್ಕಾರದ ಪ್ರಚಾರಗಳು ಕಂಡುಬಂದವು. ಈಗ ಅದು ಅಂತಿಮವಾಗಿ ತೆರೆಗೆ ಬಂದಿದ್ದು, ಟ್ವಿಟರ್​ನಲ್ಲಿ ಜನರಿಂದ ಮಿಶ್ರ ವಿಮರ್ಶೆಯನ್ನು ಪಡೆದಿದೆ.

ಒಟ್ಟಾರೆ ಚಿತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ಟ್ವಿಟರ್​ ಬಳಕೆದಾರರಿಗೆ, ಚಿತ್ರದಲ್ಲಿ ಮೌನಿ ರಾಯ್​ ಅವರ ಅಭಿನಯವು ಇಷ್ಟವಾಗಿದೆ.

ಮೌನಿ ರಾಯ್​ ಅವರ ಜುನೂನ್​ ಟಿವಿ ಸೀರಿಯಲ್​ ಪಾತ್ರವನ್ನು ಕೆಲವರಿಗೆ ನೆನಪಿಸಿದೆ. ಸಹಜವಾಗಿ ಅವರ ಅಭಿಮಾನಿಗಳು, ಉತ್ಸಾಹದಲ್ಲಿದ್ದಾರೆ ಎಂದು ಹೇಳಬೇಕಾಗಿಲ್ಲ.

ಮೌನಿ ಅದ್ಭುತವಾಗಿ ನಟಿಸಿದ್ದಾರೆ. ಆಕೆಯ ಸ್ಕ್ರೀನ್​ ಪ್ರೆಸೆನ್ಸ್​ ಉತ್ತಮವಾಗಿತ್ತು. ಆಕೆಯ ಪ್ರತಿಯೊಂದು ವಿಷಯವೂ ಪರಿರ್ಪೂಣವಾಗಿತ್ತು. ಜುನೂನ್​ ಪಾತ್ರವು ಅತ್ಯುತ್ತಮವಾಗಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ. ಒಟ್ಟಾರೆ ಮೌನಿರಾಯ್​ ನಟನೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ಚಿತ್ರದ ನೆಗೆಟಿವ್​ ಕಾಮಂಟ್​ ಹೊರತಾಗಿಯೂ ಮೊದಲ ದಿನದಂದು ವಿಶ್ವಾದ್ಯಂತ 75 ಕೋಟಿ ರೂಪಾಯಿಗಳ ದಾಖಲೆಯ ಓಪನಿಂಗ್​ ಮಾಡಿದೆ.

ಎರಡು ದಿನದಲ್ಲಿ ತನ್ನ ಕಲೆಕ್ಷನ್​ನಲ್ಲಿ ಭಾರಿ ಜಿಗಿತವನ್ನು ಕಂಡಿದೆ. ವಿಶ್ವಾದ್ಯಂತ ರೂ. 85 ಕೋಟಿ ಗಳಿಸಿದ್ದು, ಇದುವರೆಗಿನ ಒಟ್ಟು ಕಲೆಕ್ಷನ್​ ರೂ. 160 ಕೋಟಿಗಳಿಗೆ ತಲುಪಿದೆ.

ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್​ ಪ್ರಕಾರ, ಬ್ರಹ್ಮಾಸ್ತ್ರದ ಹಿಂದಿ ಆವೃತ್ತಿಯು ಶನಿವಾರ ದೇಶೀಯವಾಗಿ 37.5 ರಿಂದ ರೂ. 38.5 ಕೋಟಿಗಳಷ್ಟು ಸಂಗ್ರಹಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...