alex Certify ಮಗಳ ಎತ್ತರ ಹೆಚ್ಚಿಸಲು ತಾಯಿ ಮಾಡಿದ್ದಾಳೆ ಇಂಥ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಎತ್ತರ ಹೆಚ್ಚಿಸಲು ತಾಯಿ ಮಾಡಿದ್ದಾಳೆ ಇಂಥ ಕೆಲಸ

ಎತ್ತರ ಹೆಚ್ಚಿಸಲು  ಚೀನಾದ ತಾಯಿಯೊಬ್ಬಳು ಮಗಳಿಗೆ ನೀಡಿದ ಹಿಂಸೆ, ಆಘಾತಕಾರಿಯಾಗಿದೆ. ಘಟನೆ ಝೇಜಿಯಾಂಗ್ ಪ್ರಾಂತ್ಯದಲ್ಲಿ ಘಟನೆ ನಡೆದಿದೆ. ಮಗಳು ಎತ್ತರವಾಗಲಿ ಎಂಬ ಕಾರಣಕ್ಕೆ ಆಕೆಗೆ ತಾಯಿ ನಿರಂತರ ವ್ಯಾಯಾಮ ಮಾಡಿಸಿದ್ದಾಳೆ. ತಾಯಿ ಹಿಂಸೆಯಿಂದ ಮಗಳು ಈಗ ಸರಿಯಾಗಿ ನಡೆದಾಡುವುದು ಕಷ್ಟವಾಗಿದೆ.

13 ವರ್ಷದ ಹುಡುಗಿ ಎತ್ತರವಾಗಲಿ ಎಂಬ ಕಾರಣಕ್ಕೆ ತಾಯಿ, ಪ್ರತಿ ದಿನ ಸ್ಕಿಪಿಂಗ್  ಮಾಡಿಸಿದ್ದಾಳೆ. ಪ್ರತಿ ದಿನ ಮಗಳಿಗೆ 3000 ಸ್ಕಿಪಿಂಗ್ ಮಾಡುವಂತೆ ಹೇಳಿದ್ದಾಳೆ. ಅತಿಯಾದ ಸ್ಕಿಪಿಂಗ್ ನಿಂದ ತೊಂದರೆಯಾಗ್ತಿದೆ ಎಂದು ಮಗಳು ತಾಯಿಗೆ ಹೇಳಿದ್ರೂ ತಾಯಿ ಕೇಳಲಿಲ್ಲ.

ಮಗಳ ಎತ್ತರ ಹೆಚ್ಚಿಸುವ ಬಗ್ಗೆ ವೈದ್ಯರ ಬಳಿ ಆಕೆ ಸಲಹೆ ಕೇಳಲಿಲ್ಲ. ಸ್ಕಿಪಿಂಗ್ ಮಾಡಿದ್ರೆ ಮಗಳ ಎತ್ತರ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಸ್ಕಿಪಿಂಗ್ ಶುರು ಮಾಡಿದ್ದಾಳೆ. ಆರಂಭದಲ್ಲಿ 1000 ಬಾರಿ ಮಾಡಿಸ್ತಿದ್ದ ತಾಯಿ ನಂತ್ರ 3 ಸಾವಿರಕ್ಕೆ ಹೆಚ್ಚಿಸಿದ್ದಾಳೆ.

ಮಗಳ ಮೊಳಕಾಲಿನಲ್ಲಿ ಸಮಸ್ಯೆ ಕಾಣಿಸುತ್ತಿದ್ದಂತೆ, ಮಗಳನ್ನು ವೈದ್ಯರ ಬಳಿ ಕರೆದೊಯ್ದಿದ್ದಾಳೆ. ಸತತ ಮೂರು ತಿಂಗಳಿಂದ ಚಿತ್ರ ಹಿಂಸೆ ಅನುಭವಿಸಿದ್ದ ಮಗಳ ಕಾಲಿಗೆ ಅಪೊಫಿಸೈಟಿಸ್ ಸಮಸ್ಯೆ ಶುರುವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...