alex Certify ದಾರಿ ತಪ್ಪಿದ ಆಂಟಿ, ತನಗಿಂತ ಕಿರಿಯನೊಂದಿಗೆ ದೈಹಿಕ ಸಂಬಂಧ, ಆಘಾತಕಾರಿ ಮಾಹಿತಿ ನೀಡಿದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಆಂಟಿ, ತನಗಿಂತ ಕಿರಿಯನೊಂದಿಗೆ ದೈಹಿಕ ಸಂಬಂಧ, ಆಘಾತಕಾರಿ ಮಾಹಿತಿ ನೀಡಿದ ಬಾಲಕ

ಕೊರ್ಬಾ/ನೀಲಂ ಪಡ್ವಾರ್: ಛತ್ತಿಸ್ ಗಢದ ಕೊರ್ಬಾ ಜಿಲ್ಲೆಯ ದಾದರ್ಖುರ್ಡ್ ಗ್ರಾಮದ ಮಹಿಳೆಯೊಬ್ಬಳು ತನಗಿಂತ ಅರ್ಧದಷ್ಟು ಸಣ್ಣ ವಯಸ್ಸಿನ ಬಾಲಕನೊಂದಿಗೆ ಪರಾರಿಯಾಗಿದ್ದಾಳೆ. ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ರಾತ್ರೋರಾತ್ರಿ ಹುಡುಗನೊಂದಿಗೆ ಪರಾರಿಯಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ದಾದರ್ಖುರ್ಡ್ ಗ್ರಾಮದಲ್ಲಿ ನಡೆದ ವಿಚಿತ್ರ ಪ್ರೇಮ ಪ್ರಕರಣದಲ್ಲಿ ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ಅಪ್ರಾಪ್ತ ಪ್ರೇಮಿಯೊಂದಿಗೆ ಪರಾರಿಯಾಗಿದ್ದಾಳೆ. ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾನೆ. ಹುಡುಕಾಟದ ನಂತರ ಪೊಲೀಸರು ಇಬ್ಬರನ್ನು ಪತ್ತೆಮಾಡಿ ಕರೆತಂದಿದ್ದಾರೆ. ಮಹಿಳೆ ಮೊಬೈಲ್ ನಲ್ಲಿ ಅಶ್ಲೀಲ ಫೋಟೊಗಳು ಕಂಡುಬಂದಿದೆ. ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ದಾದರ್ಖುರ್ಡ್ ಗ್ರಾಮದಲ್ಲಿ ವಿವಾಹಿತೆ ವಾಸವಾಗಿದ್ದ ಮನೆಯ ಸಮೀಪವೇ 14 ವರ್ಷದ ಹುಡುಗ ನೆಲೆಸಿದ್ದು ಆತನನ್ನು ಪ್ರೀತಿಸುತ್ತಿದ್ದಳು. ಇವರ ನಡುವೆ ಪ್ರೀತಿ ಬೆಳೆದು ದೈಹಿಕ ಸಂಬಂಧಕ್ಕೆ ತಿರುಗಿದೆ. ಸಂಬಂಧ ಗಾಢವಾಗಿದ್ದು, ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ.

ಮೇ 25 ರಂದು ಇಬ್ಬರು ಮನೆಯಿಂದ ಪರಾರಿಯಾಗಿದ್ದಾರೆ. ಮನೆಗೆ ಬಂದ ಪತಿ ಮನೆಯಲ್ಲಿ ಪತ್ನಿ ಇಲ್ಲದಿರುವುದನ್ನು ತಿಳಿದು, ಪೊಲೀಸ್ ಠಾಣೆಗೆ ತೆರಳಿ ಪತ್ನಿ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದಾನೆ. ಪ್ರೇಮಿಗಳು ಜಂಜಗೀರ್ ಜಿಲ್ಲೆಯ ಜಂಜಗಢದಲ್ಲಿ ಬಾಲಕನ ಚಿಕ್ಕಪ್ಪನ ಮನೆಯಲ್ಲಿದ್ದರು. ಅವರನ್ನು ಕರೆತರಲಾಗಿದೆ. ವಿಚಾರಣೆ ಸಂಬಂಧದಲ್ಲಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದಾಗಿ ಬಾಲಕ ತಿಳಿಸಿದ್ದಾನೆ. ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಬಾಲಕ ಪೋಷಕರ ಜೊತೆ ಹೋಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...