alex Certify ಮುಖ್ಯಮಂತ್ರಿಯನ್ನೇ ಸೋಲಿಸಿದ ಮೊಬೈಲ್ ರಿಪೇರಿ ಕೆಲಸಗಾರ, ಎಎಪಿ ಶಾಸಕನ ತಾಯಿ ಸರ್ಕಾರಿ ಶಾಲೆ ಸ್ವೀಪರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ್ಯಮಂತ್ರಿಯನ್ನೇ ಸೋಲಿಸಿದ ಮೊಬೈಲ್ ರಿಪೇರಿ ಕೆಲಸಗಾರ, ಎಎಪಿ ಶಾಸಕನ ತಾಯಿ ಸರ್ಕಾರಿ ಶಾಲೆ ಸ್ವೀಪರ್

ನವದೆಹಲಿ: ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಗ ಗೆದ್ದ ನಂತರವೂ ಆಮ್ ಆದ್ಮಿ ಪಕ್ಷದ ಶಾಸಕ ಲಭ್ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಅವರು ಶನಿವಾರ ಸರ್ಕಾರಿ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮುಂದುವರೆಸಿದ್ದಾರೆ.

ನಿರ್ಗಮಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಭದೌರ್ ಕ್ಷೇತ್ರದಿಂದ 37,550 ಮತಗಳ ಅಂತರದಿಂದ ಸೋಲಿಸಿದ ಉಗೋಕೆ, ಮೊಬೈಲ್ ರಿಪೇರಿ ಮಾಡುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ನಾವು ಯಾವಾಗಲೂ ಹಣ ಸಂಪಾದಿಸಲು ಶ್ರಮಿಸಿದ್ದೇವೆ. ನನ್ನ ಮಗನ ಸ್ಥಾನವನ್ನು ಲೆಕ್ಕಿಸದೆ, ನಾನು ಶಾಲೆಯಲ್ಲಿ ನನ್ನ ಕರ್ತವ್ಯವನ್ನು ಮುಂದುವರಿಸುತ್ತೇನೆ ಎಂದು ಕೌರ್ ಹೇಳಿದರು

ಪಕ್ಷದ ಚಿಹ್ನೆ ಪೊರಕೆಯಾಗಿರುವ ಎಎಪಿ ಅಭ್ಯರ್ಥಿಯಾಗಿ ತನ್ನ ಪುತ್ರನ ಗೆಲುವಿನಿಂದ ಸಂತೋಷಗೊಂಡ ಕೌರ್, ಪೊರಕೆ ನನ್ನ ಜೀವನದ ಪ್ರಮುಖ ಭಾಗವಾಗಿದೆ. ಮಗಅವರು ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ್ದರೂ, ನನ್ನ ಮಗ ಗೆಲ್ಲುತ್ತಾನೆ ಎಂದು ವಿಶ್ವಾಸ ಹೊಂದಿದ್ದೆ ಎಂದು ಅವರು ಹೇಳಿದರು.

ಉಗೋಕೆ ಅದೇ ಶಾಲೆಯಲ್ಲಿ ಓದಿ ಅನೇಕ ಪ್ರಶಸ್ತಿಗಳನ್ನು ತಂದಿದ್ದಾರೆ ಎಂದು ಶಾಲೆಯ ಪ್ರಿನ್ಸಿಪಾಲ್ ಅಮೃತ್ ಪಾಲ್ ಕೌರ್ ಎಎನ್‌ಐಗೆ ತಿಳಿಸಿದ್ದಾರೆ.

ಲಭ್ ಸಿಂಗ್ ಅವರು ಈ ಶಾಲೆಯಲ್ಲಿ ಓದಿದ್ದಾರೆ. ಅವರ ತಾಯಿ ಬಹಳ ಸಮಯದಿಂದ ಈ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಮೃತ್ ಪಾಲ್ ಕೌರ್ ಹೇಳಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ ಸಿಂಗ್ ಅವರ ತಂದೆ ದರ್ಶನ್ ಸಿಂಗ್, ಕುಟುಂಬವು ಮೊದಲಿನಂತೆಯೇ ಬದುಕುತ್ತದೆ ಎಂದು ಹೇಳಿದರು. ತನ್ನ ಮಗ ಕುಟುಂಬದ ಬದಲು ಜನರ ಕಲ್ಯಾಣದತ್ತ ಗಮನ ಹರಿಸಬೇಕೆಂದು ಅವರು ಬಯಸುತ್ತಾರೆ.

ಜನರು ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕೆಂದು ನಾವು ಬಯಸುತ್ತೇವೆ. ನಾವು ಮೊದಲಿನಂತೆಯೇ ನಾವು ಬದುಕುತ್ತೇವೆ ಎಂದು ದರ್ಶನ್ ಸಿಂಗ್ ಹೇಳಿದರು.

ಉಗೋಕೆ 2013 ರಲ್ಲಿ ಎಎಪಿಗೆ ಸೇರಿದರು. ಅವರು 2017 ರಲ್ಲೂ ಭದೌರ್ ಕ್ಷೇತ್ರದಿಂದ ಎಎಪಿ ಟಿಕೆಟ್ ಕೋರಿದ್ದರು ಆದರೆ ಪಕ್ಷವು ಬೇರೆಯದೇ ನಿರ್ಧಾರಕ್ಕೆ ಬಂದಿತ್ತು. ಅವರ ಗೆಲುವಿನಿಂದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ಇಷ್ಟು ದಿನ ಗೊತ್ತಿದ್ದ ಉಗೋಕೆ ಈಗ ಎಂಎಲ್‌ಎ ಆಗಿದ್ದಾರೆ ಎಂದು ನಂಬಲಾಗುತ್ತಿಲ್ಲ. ಹಗಲಿರುಳು ಪಕ್ಷಕ್ಕಾಗಿ ದುಡಿಯುತ್ತಿದ್ದ ಅವರು ಪಕ್ಷದಿಂದ ಟಿಕೆಟ್ ಪಡೆದು ಶಾಸಕರಾಗುತ್ತಾರೆ ಎಂದು ನಾವು ಅಂದುಕೊಂಡಿರಲಿಲ್ಲ. ಆತನಿಂದ ನಮಗೆ ಸಂತಸವಾಗಿದೆ’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...