alex Certify ಪುಟ್ಟ ಕಂದನಿಗೆ ಮನಬಂದಂತೆ ಥಳಿಸಿದ ಪಾಪಿ ತಾಯಿ; ವಿಡಿಯೋ ನೋಡಿ ದಂಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಕಂದನಿಗೆ ಮನಬಂದಂತೆ ಥಳಿಸಿದ ಪಾಪಿ ತಾಯಿ; ವಿಡಿಯೋ ನೋಡಿ ದಂಗಾದ ಜನ

18 ತಿಂಗಳ ಪ್ರಾಯದ ಕಂದಮ್ಮನನ್ನು ತಾಯಿ ಮನಸೋ ಇಚ್ಛೇ ತಿಳಿಸಿದ್ದು ಈ ದೃಶ್ಯವನ್ನು ತಾನೇ ರೆಕಾರ್ಡ್ ಮಾಡಿದ ಅಮಾನವೀಯ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವಲ್ಲಿಪುರಂನ ವದಿವಜಗನ್​ ಎಂಬಾತ 4 ವರ್ಷಗಳ ಹಿಂದೆ 22 ವರ್ಷದ ತುಳಸಿ ಎಂಬಾಕೆಯನ್ನು ವಿವಾಹವಾಗಿದ್ದ. ಈ ದಂಪತಿ ತಮಿಳುನಾಡಿನ ಮೊಟ್ಟುರು ಗ್ರಾಮದಲ್ಲಿ ನೆಲೆಸಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಆದರೆ ವದಜಗನ್​ ಹಾಗೂ ತುಳಸಿ ದಾಂಪತ್ಯದಲ್ಲಿ ಪದೇ ಪದೇ ಬಿರುಕು ಮೂಡುತ್ತಿತ್ತು. ಹೀಗಾಗಿ ತುಳಸಿಯನ್ನು ಪತಿ ಆಂಧ್ರಪ್ರದೇಶದಲ್ಲಿರುವ ಆಕೆಯ ತವರು ಮನೆಗೆ ಬಿಟ್ಟು ಬಂದಿದ್ದ.

ಮಗುವಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ನೋಡಿದ ಸಂಬಂಧಿಗಳು ಕೂಡಲೇ ಆಕೆಯ ಪತಿಗೆ ಮಾಹಿತಿ ನೀಡಿದ್ದಾರೆ.

ಈ ಕರುಣಾಜನಕ ವಿಡಿಯೋದಲ್ಲಿ ತುಳಸಿಯು 18 ತಿಂಗಳ ಮಗುವಿಗೆ ಮುಷ್ಠಿ ಕಟ್ಟಿ ಬಾರಿಸಿದ್ದಾಳೆ. ಆಕೆಯ ಹೊಡೆತ ಎಷ್ಟು ಜೋರಿತ್ತು ಅಂದರೆ ಮಗುವಿನ ಮೂಗು ಹಾಗೂ ಬಾಯಿಂದ ರಕ್ತ ಬರಲು ಆರಂಭಿಸಿದೆ. ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡುತ್ತಲೇ ತುಳಸಿ ಮಗುವಿಗೆ ಅಮಾನವೀಯವಾಗಿ ಥಳಿಸಿದ್ದಾಳೆ.

ಇನ್ನೊಂದು ವಿಡಿಯೋದಲ್ಲಿ ತುಳಸಿ ಮಗುವಿನ ಕಾಲಿಗೆ ಮುಷ್ಠಿ ಕಟ್ಟಿ ಬಾರಿಸಿದ್ದಾಳೆ. ಮತ್ತೊಂದು ವಿಡಿಯೋದಲ್ಲಿ ಮಗುವಿಗೆ ನೀಡಿದ ಹೊಡೆತದಿಂದ ಮಗುವಿನ ದೇಹದಲ್ಲಿ ಹೇಗೆ ಕಲೆ ಬಿದ್ದಿದೆ ಅನ್ನೋದನ್ನು ತೋರಿಸಿದ್ದಾಳೆ.

ಈ ವಿಡಿಯೋ ನೋಡಿದ ಮಗುವಿನ ತಂದೆ ಆಂಧ್ರ ಪ್ರದೇಶಕ್ಕೆ ಓಡೋಡಿ ಬಂದಿದ್ದಾನೆ ಹಾಗೂ ಮಕ್ಕಳನ್ನು ತನ್ನೂರಿಗೆ ಕರೆದುಕೊಂಡು ಹೋಗಿದ್ದಾನೆ.

ಈ ನಡುವೆ ತುಳಸಿ ತಂದೆ ಗೋಪಾಲಕೃಷ್ಣ ಈ ಕೃತ್ಯದ ಬಗ್ಗೆ ತಮಗೆ ಅರಿವೇ ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ ತಿಂಗಳ ಹಿಂದೆ ತುಳಸಿ ತನ್ನ ಮಗುವನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...