alex Certify BSP ನಾಯಕಿ ಮಾಯಾವತಿ ಉತ್ತರಾಧಿಕಾರಿ ಹುದ್ದೆಯಿಂದ ಆನಂದ್ ವಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSP ನಾಯಕಿ ಮಾಯಾವತಿ ಉತ್ತರಾಧಿಕಾರಿ ಹುದ್ದೆಯಿಂದ ಆನಂದ್ ವಜಾ

ಲಖನೌ: ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಮತ್ತು ಅವರ ರಾಜಕೀಯ ಉತ್ತರಾಧಿಕಾರಿ ಹುದ್ದೆಯಿಂದ ಮಾಯಾವತಿ ವಜಾಗೊಳಿಸಿದ್ದಾರೆ.

ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆಯಾಗಿರುವ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ಎರಡು ಪ್ರಮುಖ ಹುದ್ದೆಗಳಿಂದ ತೆಗೆದುಹಾಕಿದ್ದಾರೆ. ಅವರನ್ನು ಅಪಕ್ವ ಎಂದು ಬಣ್ಣಿಸಿದ್ದಾರೆ. ನಾನು ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಮತ್ತು ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದೆ. ಆದರೆ ಪಕ್ಷ ಮತ್ತು ಚಳವಳಿಯ ಹಿತಾಸಕ್ತಿಯಿಂದ ಆನಂದ್ ಅವರು ರಾಜಕೀಯ ಪ್ರಬುದ್ಧತೆ ಪಡೆಯುವವರೆಗೆ ಈ ಎರಡೂ ಪ್ರಮುಖ ಜವಾಬ್ದಾರಿಗಳಿಂದ ಅವರನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...