alex Certify ಪುತ್ರಿ ಶಾಲೆಗೆ ಭೇಟಿ ನೀಡಲು ಹೋಗಿ ಜೈಲುಪಾಲಾದ ತಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರಿ ಶಾಲೆಗೆ ಭೇಟಿ ನೀಡಲು ಹೋಗಿ ಜೈಲುಪಾಲಾದ ತಾಯಿ..!

13 ವರ್ಷದ ಮಗಳಂತೆ ವೇಷ ಧರಿಸಿ ತಾಯಿ ಆಕೆಯ ಶಾಲೆಯಲ್ಲಿ ಒಂದು ದಿನ ಕಳೆಯಲು ಹೋಗಿ ಜೈಲುಪಾಲಾದ ಘಟನೆ ಟೆಕ್ಸಾಸ್​​ನಲ್ಲಿ ವರದಿಯಾಗಿದೆ.
ತನ್ನ ಪುತ್ರಿ ಓದುತ್ತಿರುವ ಶಾಲೆಯಲ್ಲಿ ಭದ್ರತೆ ಹೇಗಿದೆ ಎಂದು ಪರಿಶೀಲನೆ ಮಾಡಲು ಹೋಗಿ 30 ವರ್ಷದ ಕ್ಯಾಸೆ ಗಾರ್ಸಿಯಾ ಈ ಪೇಚಿಗೆ ಸಿಲುಕಿದ್ದಾಳೆ ಎನ್ನಲಾಗಿದೆ.

ಹೀಗಾಗಿ ತನ್ನ ಮಗಳು ಜೂಲಿಯಂತೆಯೇ ಶಾಲೆ ಸಮವಸ್ತ್ರ ಧರಿಸಿ ಕೂದಲಿಗೆ ಕಪ್ಪು ಬಣ್ಣವನ್ನ ಹಚ್ಚಿ ಗಾರ್ಸಿಯಾ ಶಾಲೆಗೆ ತಯಾರಾಗಿದ್ದಳು. ವಿದ್ಯಾರ್ಥಿಯಂತೆ ಶಾಲೆಗೆ ತೆರಳಿದ್ದ ಈಕೆ ಶಿಕ್ಷಕರೊಂದಿಗೂ ಮಾತನಾಡಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆದ ಆರು ನಿಮಿಷಗಳ ವಿಡಿಯೋದಲ್ಲಿ ಗಾರ್ಸಿಯಾ ಹಳದಿ ಬಣ್ಣದ ಜಾಕೆಟ್​ ಧರಿಸಿರೋದನ್ನ ನೀವು ಕಾಣಬಹುದಾಗಿದೆ. ಮಾಸ್ಕ್ ಧರಿಸಿಯೇ ಇದ್ದ ಗಾರ್ಸಿಯಾ ಶೌಚಾಲಯದಲ್ಲಿ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದಾಳೆ.

ಆದರೆ ಆಕೆ ಅಂದುಕೊಂಡಂತೆ ಪ್ಲಾನ್​ ವರ್ಕೌಟ್​ ಆಗಲಿಲ್ಲ. ಈಕೆಯನ್ನ ಶಾಲಾ ಆಡಳಿತ ಮಂಡಳಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದೆ. ವರದಿಗಳ ಪ್ರಕಾರ ಈಕೆಯನ್ನ 7808 ಡಾಲರ್​ ಮೌಲ್ಯದ ಬಾಂಡ್​ನ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.

ಈಕೆ ಎಲ್ಲರನ್ನ ಯಾಮಾರಿಸುವಲ್ಲಿ ಯಶಸ್ವಿಯಾಗಿದ್ದಳು. ಆದರೆ ಕೊನೆಯ ತರಗತಿಯಲ್ಲಿ ಶಿಕ್ಷಕರು ಈಕೆ ಜ್ಯೂಲಿ ಅಲ್ಲ ಅನ್ನೋದನ್ನ ಗಮನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...