alex Certify ಜಗತ್ತಿನ ಅತ್ಯಂತ ಸುಂದರ ಸ್ಥಳಗಳಿವು: ನೋಡಿದರೆ ಬೆರಗಾಗುವುದು ಖಚಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ಸುಂದರ ಸ್ಥಳಗಳಿವು: ನೋಡಿದರೆ ಬೆರಗಾಗುವುದು ಖಚಿತ….!

ಕೊರೊನಾ ಮಹಾಮಾರಿಯಿಂದ ಕಂಗೆಟ್ಟು ಮನೆಯಲ್ಲೇ ಕುಳಿತ ಅದೆಷ್ಟೋ ಮಂದಿ ಈಗಾಗಲೇ 2022 ರ ಕನಸನ್ನು ಕಾಣುತ್ತಿರಬಹುದು. ಮನೆಯಲ್ಲಿ ಕೂತು ಕೂತು ಬೋರ್ ಆಗಿರುವವರು ಜಗತ್ತಿನ ಕೆಲ ಸುಂದರ ಸ್ಥಳಗಳನ್ನು ಸುತ್ತಿ ಬರಬಹುದು. ನ್ಯಾಶನಲ್ ಜಿಯೋಗ್ರಫಿಕ್ ಜಗತ್ತಿನ ಅತ್ಯಂತ ಸುಂದರ ಟೂರಿಸ್ಟ್ ಡೆಸ್ಟಿನೇಶನ್ ಗಳ ಲಿಸ್ಟ್ ಕೊಟ್ಟಿದೆ.

ಬೈಕಾಲ್ ಸರೋವರ, ರೂಸ್: ಸುಮಾರು 12,200 ಮೈಲುಗಳಷ್ಟು ಉದ್ದ ಮತ್ತು 2,442 ಫೂಟ್ ಆಳವಿರುವ ಈ ಸರೋವರ ಪ್ರಕೃತಿಯ ಒಂದು ಅದ್ಭುತ ಸೃಷ್ಟಿ. ಇದನ್ನು ಇಲ್ಲಿನ ನಿವಾಸಿಗಳು ಸಾಗರ ಎಂದು ಹೇಳುತ್ತಾರೆ. ಯುನೆಸ್ಕೋದ ವಿಶ್ವ ಪರಂಪರೆಯ ತಾಣ (1996) ಗಳ ಪಟ್ಟಿಯಲ್ಲಿರುವ ಈ ಸರೋವರ ಕಳೆದ ಕೆಲವು ವರ್ಷಗಳಲ್ಲಿ ಮಲಿನಗೊಂಡಿದೆ. 2020ರಲ್ಲಿ ಇದರ ಕುರಿತು ‘ಇಂಟರ್ ನ್ಯಾಶನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್’ ಕೂಡ ಚಿಂತೆ ವ್ಯಕ್ತಪಡಿಸಿದೆ. ಇಲ್ಲಿನ ವಿಸಿಟರ್ಸ್, ಗ್ರೇಟ್ ಬೈಕಲ್ ಟ್ರಯಲ್ ಅಸೋಸಿಯೇಷನ್ ನ ಸಹಯೋಗದೊಂದಿಗೆ ಈ ಸರೋವರದ ರಕ್ಷಣೆಗೆ ಮುಂದಾಗಿದ್ದಾರೆ.

ಕ್ಯಾಪ್ರಿವಿ ಸ್ಟ್ರಿಪ್, ನಮೀಬಿಯಾ: ನಮೀಬಿಯಾ ಮರುಭೂಮಿ, ಎತ್ತರದ ದಿಬ್ಬ ಮತ್ತು ಒಣಗಿದ ಪರ್ವತಗಳಿಗೆ ಹೆಸರುವಾಸಿ. ಆದರೆ ಕ್ಯಾಪ್ರಿವಿ ಸ್ಟ್ರಿಪ್ ನಲ್ಲಿ ಹಸಿರಾದ ಪರ್ವತ ಮತ್ತು ವನ್ಯಜೀವಿಗಳು ಕಾಣಸಿಗುತ್ತವೆ. ಇಲ್ಲಿ ಓಕಾವಾಂಗೋ, ಕ್ವಾಂಡೋ, ಚೋಬೆ ಮತ್ತು ಜಂಬೋಜಿ ನದಿಗಳು ಅನೇಕ ಜಾತಿಯ ಪ್ರಾಣಿಗಳಿಗೆ ಸೂಕ್ತ ಸ್ಥಳವಾಗಿದೆ. 20 ನೇ ಶತಮಾನದ ದ್ವಿತೀಯಾರ್ಧದಲ್ಲಿ ಈ ಸ್ಥಳ ಮಿಲಿಟರಿ ಚಟುವಟಿಕೆಗಳಿಂದ ಖ್ಯಾತಿ ಪಡೆದಿತ್ತು. ಸಶಸ್ತ್ರ ಸೇನಾಪಡೆಯ ಪ್ರಮುಖ ಸ್ಥಳ ಇದಾಗಿದ್ದರಿಂದ ಎಲ್ಲರಿಗೂ ಅಲ್ಲಿ ಹೋಗಲು ಅನುಮತಿ ಇರಲಿಲ್ಲ. ಆದರೆ 1990 ರಲ್ಲಿ ನಮೀಬಿಯಾಕ್ಕೆ ಸ್ವತಂತ್ರ ಸಿಕ್ಕ ನಂತರ ಇಲ್ಲಿ ಮತ್ತೆ ಶಾಂತಿ ನೆಲೆಸಿತು.

ವಿಕ್ಟೋರಿಯಾ, ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಗ್ರೇಟ್ ಓಶಿಯನ್ ರೋಡ್ ಈಗ ಮತ್ತೆ ಹಸಿರಾಗಿ ಕಂಗೊಳಿಸುತ್ತಿದೆ. ಈ ಸ್ಥಳ 2019-20 ರಲ್ಲಿ ಬುಶ್ ಫೈರ್ ಗೆ ಒಳಗಾಗಿ ಸುಟ್ಟು ಕರಕಲಾಗಿತ್ತು. ಈ ಸ್ಥಳದ ಸುಮಾರು 72,000 ಚದರ ಮೈಲುಗಳು ಬೆಂಕಿಗೆ ಆಹುತಿಯಾಗಿತ್ತು. ಈ ಅವಘಡದಲ್ಲಿ ಹಲವಾರು ಜನರು ಮತ್ತು ಕೋಟಿಗಟ್ಟಲೆ ಪ್ರಾಣಿಗಳು ಸತ್ತಿದ್ದವು.

ಬೆಲಿಜ್ ಮಾಯಾ ಕಾಡು: ಇತ್ತೀಚೆಗೆ ಅಮೆರಿಕಾದಲ್ಲಿ ಅತಿ ದೊಡ್ಡ ಉಷ್ಣವಲಯದ ಕಾಡುಗಳನ್ನು ಉಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 2021ರಲ್ಲಿ ಸಂರಕ್ಷಣೆ ಸಂಘಟನೆಗಳು ನಾರ್ಥ್ ಬೆಲೀಜ್ ನಲ್ಲಿ ‘ಬೆಲೀಜ್ ಮಾಯಾ ಮೀಸಲು ಅರಣ್ಯ’ ನಿರ್ಮಿಸಲು 2,36,000 ಎಕರೆಯಷ್ಟು ಉಷ್ಣವಲಯದ ಕಾಡನ್ನು ಖರೀದಿಸಿತ್ತು. ಈ ಪ್ರದೇಶದಲ್ಲಿ ಬೆಲೀಜ್ ನ ರಾಷ್ಟ್ರೀಯ ಪ್ರಾಣಿ ಟ್ಯಾಪಿರ್, ಕಪ್ಪು ಹೌಲರ್, ಮಂಗ ಮತ್ತು 400ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳಿವೆ. ಇದರೊಂದಿಗೆ ಮಧ್ಯ ಅಮೆರಿಕದಲ್ಲಿ ನಶಿಸುತ್ತಿರುವ ಜಾಗ್ವಾರ್ ಗಳನ್ನು ಕೂಡ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ನಾರ್ಥರ್ನ್ ಮಿನೆಸೋಟಾ: ಕೆನಡಾದ ಒಂಟಾರಿಯೊ ಪ್ರಾಂತ್ಯದ ಗಡಿಯಲ್ಲಿರುವ  ಪ್ರದೇಶ ನೋಡುವವರನ್ನು ಬೆರಗುಗೊಳಿಸುತ್ತದೆ. ಏಕೆಂದರೆ ಈ ಪ್ರದೇಶ ಸಂಪೂರ್ಣವಾಗಿ ಮಾಲಿನ್ಯ ಮುಕ್ತವಾಗಿದೆ. ಹಾಗಾಗಿ ಇಲ್ಲಿ ರಾತ್ರಿಯಾದೊಡನೆ ಲಕ್ಷಾಂತರ ನಕ್ಷತ್ರಗಳನ್ನು ನೋಡಬಹುದಾಗಿದೆ. ಇದನ್ನು ಭೂಮಿಯ ಮೇಲಿನ ದೊಡ್ಡ ಡಾರ್ಕ್ ಸ್ಕೈ ತಾಣವಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದರ ಎರಡು ಭಾಗಗಳು ಮಿನೆಸೋಟಾದಲ್ಲೇ ಇದೆ.

ಮೊದಲನೆಯದು ಮಿನೆಸೋಟಾದಲ್ಲಿ ‘ಬೌಂಡರಿ ವಾಟರ್ಸ್ ಕೆನೋಯ್ ಏರಿಯಾ ವೈಲ್ಡರ್ನೆಸ್’ ಅರಣ್ಯ. ಇದು ಲಕ್ಷಾಂತರ ಎಕರೆಯಲ್ಲಿ ನಿರ್ಮಿಸಲಾದ ಜಗತ್ತಿನ ಅತಿದೊಡ್ಡ ಡಾರ್ಕ್ ಸ್ಕೈ ಅಭಯಾರಣ್ಯವಾಗಿದೆ. ಎರಡನೆಯದು ವಾಯೇಜರ್ಸ್ ರಾಷ್ಟ್ರೀಯ ಉದ್ಯಾನವನ’. ಇದು ದೇಶದ ಮೊದಲ ಅಂತರಾಷ್ಟ್ರೀಯ ಡಾರ್ಕ್ ಸ್ಕೈ ಉದ್ಯಾನವಾಗಿದೆ. ಈ ಎರಡೂ ಸ್ಥಳಗಳಿಗೆ 2020ರಲ್ಲಿ ಡಾರ್ಕ್ ಸ್ಕೈ ಸರ್ಟಿಫಿಕೇಟ್ ದೊರಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...