ಹಳೆ ವಾಹನ ಮಾರಾಟ ಮಾಡಿ ಹೊಸ ವಾಹನ ಖರೀದಿಗೆ ಪ್ಲಾನ್ ಮಾಡ್ತಿದಿರಾ? ನಿಮಗೊಂದು ಗುಡ್ ನ್ಯೂಸ್ ಇದೆ. ಹಳೆಯ ವಾಹನಗಳನ್ನು ಮಾರಾಟ ಮಾಡಿ, ಹೊಸ ವಾಹನಗಳ ಖರೀದಿ ಮಾಡಿದ್ರೆ, ರಾಷ್ಟ್ರೀಯ ವಾಹನ ಸ್ಕ್ರಾಪಿಂಗ್ ನೀತಿಯ ಅಡಿಯಲ್ಲಿ ರಸ್ತೆ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಶೇಕಡಾ 25 ರಷ್ಟು ರಿಯಾಯಿತಿ ನೀಡಲು ಸರ್ಕಾರ ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ.
ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!
ಪರಿಸರ ಮಾಲಿನ್ಯ ನಿಯಂತ್ರಣ ಇದ್ರ ಹಿಂದಿರುವ ದೊಡ್ಡ ಉದ್ದೇಶವಾಗಿದೆ. ವಾಹನ ಸ್ಕ್ರ್ಯಾಪ್ ನೀತಿಯ ಅಡಿಯಲ್ಲಿ, ಹಳೆಯ ವಾಹನವನ್ನು ಮಾರಾಟ ಮಾಡುವಂತೆ ಜನರಿಗೆ ಸಲಹೆ ನೀಡಲಾಗ್ತಿದೆ. ವಾಹನವನ್ನು ಸ್ಕ್ರ್ಯಾಪ್ ಗೆ ಹಾಕಿದಾಗ, ಮಾಲೀಕರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಪ್ರಮಾಣ ಪತ್ರದ ಆಧಾರದ ಮೇಲೆ ವಿನಾಯಿತಿ ನೀಡಲಾಗುವುದು.
ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಮದಗಜ’ ಸಿನಿಮಾದ ಮೊದಲ ಹಾಡು
ಈ ರಿಯಾಯಿತಿ ಖಾಸಗಿ ವಾಹನಗಳ ಮೇಲೆ ಶೇಕಡಾ 25ರಷ್ಟಿರಲಿದೆ. ವಾಣಿಜ್ಯ ವಾಹನಗಳ ಮೇಲೆ ಶೇಕಡಾ 15ರಷ್ಟು ವಿನಾಯಿತಿ ಸಿಗಲಿದೆ.
ಫಿಟ್ನೆಸ್ ಪರೀಕ್ಷೆ ಮತ್ತು ಸ್ಕ್ರ್ಯಾಪಿಂಗ್ ಕೇಂದ್ರಕ್ಕೆ ಸಂಬಂಧಿಸಿದ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ. 15 ವರ್ಷ ಹಳೆಯ ಖಾಸಗಿ ವಾಹನಗಳು ಏಪ್ರಿಲ್ 1, 2022ರಿಂದ ರಸ್ತೆಗಿಳಿಯುವಂತಿಲ್ಲ. ವಾಣಿಜ್ಯ ವಾಹನಗಳಿಗೆ, ಈ ನಿಯಮಗಳು ಏಪ್ರಿಲ್ 1, 2023 ರಿಂದ ಅನ್ವಯವಾಗಲಿವೆ.