alex Certify ದೈತ್ಯಾಕಾರದ ಶಾರ್ಕ್ ಹಿಡಿದು ದಾಖಲೆ ಬರೆದ ಮೀನುಗಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈತ್ಯಾಕಾರದ ಶಾರ್ಕ್ ಹಿಡಿದು ದಾಖಲೆ ಬರೆದ ಮೀನುಗಾರ..!

ಡೆವೊನ್ ತೀರದಲ್ಲಿ ದೈತ್ಯಾಕಾರದ 7 ಅಡಿ, 250 ಕೆ.ಜಿ. ತೂಕದ ಶಾರ್ಕ್ ಮೀನನ್ನು ಹಿಡಿದ ಯುಕೆ ಮೀನುಗಾರರೊಬ್ಬರು ಹೊಸ ದಾಖಲೆ ಬರೆದಿದ್ದಾರೆ.

ನಾರ್ಥಾಂಪ್ಟನ್‌ಶೈರ್‌ನ ಸೈಮನ್ ಡೇವಿಡ್ಸನ್ ಈ ದೈತ್ಯಾಕಾರದ ಮೀನನ್ನು ಹಿಡಿಯಲು ಸಾಕಷ್ಟು ಪ್ರಯಾಸ ಪಟ್ಟಿದ್ದಾರೆ. ಇವರಿಗೆ ಈ ಮೀನನ್ನು ಹಿಡಿಯಲು ಐವರು ಸಿಬ್ಬಂದಿ ಕೂಡ ಸಹಾಯ ಮಾಡಿದ್ದಾರೆ. ಅಲ್ಲದೆ ಶಾರ್ಕ್ ಅನ್ನು ಹಿಡಿದು ಮತ್ತೆ ಸಾಗರಕ್ಕೆ ಬಿಡಲಾಗಿದೆ. ಶಾರ್ಕ್ ಮೀನು ಡೇವಿಡ್ಸನ್ ದೋಣಿಯ ಹತ್ತಿರ ಚಲಿಸುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ.

SHOCKING NEWS: ಇದೆಂಥ ನೀಚ ಕೃತ್ಯ…..! ರೇಪ್ ಸಂತ್ರಸ್ತೆ ಮೇಲೆಯೇ ಪೊಲೀಸ್ ಕಾನ್ಸ್ ಟೇಬಲ್ ಅತ್ಯಾಚಾರ

ವರದಿಗಳ ಪ್ರಕಾರ, 229 ಕೆ.ಜಿ. ತೂಕದ ಶಾರ್ಕ್ ನ ಈ ಹಿಂದಿನ ದಾಖಲೆಯನ್ನು ಮುರಿಯಲಾಗಿದೆ. ಇದನ್ನು 1993 ರಲ್ಲಿ ಸ್ಕಾಟ್ಸ್ ಮೀನುಗಾರ ಕ್ರಿಸ್ ಬೆನೆಟ್ ಹಿಡಿದಿದ್ದರು. ಈ ಬಗ್ಗೆ ಮಾತನಾಡಿದ ಡೇವಿಡ್ಸನ್, “ಶಾರ್ಕ್ ವಶಪಡಿಸಿಕೊಂಡಾಗ ಅದು ಅಷ್ಟು ದೊಡ್ಡದಾಗಿದೆ ಎಂದು ಊಹಿಸಿಯೇ ಇರಲಿಲ್ಲ” ಎಂಬುದಾಗಿ ಹೇಳಿದ್ದಾರೆ.

ಇನ್ನು ಡೇವಿಡ್ಸನ್ ಮತ್ತು ಆತನ ಸ್ನೇಹಿತರು, ಶಾರ್ಕ್ ಮೀನಿನ ಅಳತೆ ತೆಗೆದುಕೊಂಡು ನಂತರ ಸಮುದ್ರಕ್ಕೆ ಬಿಟ್ಟಿದ್ದಾರೆ.

ಕಳೆದ ವರ್ಷ ಸಂಶೋಧಕರ ತಂಡವು, ಅಕ್ಟೋಬರ್ 2 ರಂದು ಪೂರ್ವ ಕೆನಡಾದ ನೋವಾ ಸ್ಕಾಟಿಯಾ ತೀರದಲ್ಲಿ 3,541 ಪೌಂಡ್ (1,600 ಕಿಲೋಗ್ರಾಂ) ತೂಕದ 17 ಅಡಿಗಳಷ್ಟು ದೊಡ್ಡ ಬಿಳಿ ಶಾರ್ಕ್ ಅನ್ನು ಹಿಡಿದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...