alex Certify ಮಂಗಗಳಿಗೂ ಭರ್ಜರಿ ಭೋಜನ: ಮಂಕಿ ಫೀಸ್ಟ್​ನಲ್ಲಿ ಹೊಟ್ಟೆ ತುಂಬ ತಿಂದ ವಾನರ ಸೈನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಗಳಿಗೂ ಭರ್ಜರಿ ಭೋಜನ: ಮಂಕಿ ಫೀಸ್ಟ್​ನಲ್ಲಿ ಹೊಟ್ಟೆ ತುಂಬ ತಿಂದ ವಾನರ ಸೈನ್ಯ

ಸೆಂಟ್ರಲ್ ಥೈಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಾರ್ಷಿಕ ಕೋತಿಗಳ ಹಬ್ಬದಲ್ಲಿ (ಮಂಕಿ ಫೀಸ್ಟ್ ಫೆಸ್ಟಿವಲ್‌) ಕೋತಿಗಳಿಗೆ ಭರ್ಜರಿ ಊಟ ನೀಡಲಾಯಿತು. ಬ್ಯಾಂಕಾಕ್‌ನಿಂದ ಉತ್ತರಕ್ಕೆ 150 ಕಿಲೋಮೀಟರ್ ದೂರದಲ್ಲಿರುವ ಪ್ರಾಂತ್ಯದಲ್ಲಿ ಈ ಹಬ್ಬ ನಡೆದಿದೆ.

ಬೆಳಗಿನ ದಟ್ಟಣೆಯ ನಡುವೆ, ಲೋಪ್​ಬುರಿ ಎನ್ನುವ ಪ್ರದೇಶದಲ್ಲಿ ಟ್ರೇಗಳನ್ನು ಹಿಡಿದಿರುವ ಕೋತಿಗಳ ಪ್ರತಿಮೆಗಳನ್ನು ಸಾಲು ಸಾಲಾಗಿ ಕಾಂಪೌಂಡ್‌ನ ಹೊರಗೆ ಜೋಡಿಸಲಾಗಿತ್ತು. ಆದರೆ ಸಮೀಪದಲ್ಲಿ ಸ್ವಯಂಸೇವಕರು ನಿಜವಾದ ಕೋತಿಗಳಿಗಾಗಿ ರಸ್ತೆಯುದ್ದಕ್ಕೂ ಆಹಾರವನ್ನು ಸಿದ್ಧಪಡಿಸಿದರು,

ಮಕಾಕ್ ಕೋತಿಗಳ ಗುಂಪುಗಳು ಆಹಾರ ತಿನ್ನಲು ಓಡೋಡಿ ಬರುವುದನ್ನು ವಿಡಿಯೋದಲ್ಲಿ ನೋಡಬಹುದು. “ಈ ಮಂಕಿ ಫೀಸ್ಟ್ ಫೆಸ್ಟಿವಲ್ ಒಂದು ಯಶಸ್ವಿ ಕಾರ್ಯಕ್ರಮವಾಗಿದ್ದು, ಇದು ಪ್ರತಿ ವರ್ಷ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆಚರಿಸಲಾಗುತ್ತದೆ” ಎಂದು ಉತ್ಸವದ ಸಂಸ್ಥಾಪಕ ಯೋಂಗ್ಯುತ್ ಕಿಟ್ವಾತನುಸೊಂಟ್ ಹೇಳಿದರು.

“ಹಿಂದೆ, ಲೋಪ್‌ಬುರಿಯಲ್ಲಿ ಸುಮಾರು 300 ಮಂಗಗಳು ಇದ್ದವು, ಇಂದು ಅವುಗಳ ಸಂಖ್ಯೆ ಸುಮಾರು 4,000 ಕ್ಕೆ ಏರಿದೆ. ಇದೇ ಕಾರಣಕ್ಕೆ ಈ ನಗರವನ್ನು ಮಂಕಿ ಸಿಟಿ ಎಂದು ಕರೆಯಲಾಗುತ್ತದೆ, ಕೋತಿಗಳು ಮತ್ತು ಜನರು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶ ಎಂದಿದ್ದಾರೆ.

ಮಂಗಗಳ ಜತೆ ಸೆಲ್ಫೀ ತೆಗೆಸಿಕೊಳ್ಳಲು ಪ್ರವಾಸಿಗರು ಮುಗಿಬಿದ್ದರು. ಕೆಲವರ ಮೇಲೆ ಮಂಗಗಳ ದಾಳಿ ಮಾಡಿದ ಘಟನೆಗಳೂ ನಡೆದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...