alex Certify BIG NEWS: ಏಪ್ರಿಲ್‌ನಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಕೇಂದ್ರ ಅನುದಾನಿತ ಯೋಜನೆಗಳ ಸಂಪೂರ್ಣ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಏಪ್ರಿಲ್‌ನಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಕೇಂದ್ರ ಅನುದಾನಿತ ಯೋಜನೆಗಳ ಸಂಪೂರ್ಣ ಹಣ

Central scheme: Money for 100% central schemes likely to go directly to beneficiaries from April - The Economic Times

ಭಾರತ್‌ನೆಟ್, ನಮಾಮಿ ಗಂಗೆ-ರಾಷ್ಟ್ರೀಯ ಗಂಗಾ ಯೋಜನೆ, ಮೆಟ್ರೋ ಯೋಜನೆಗಳು, ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ, ಬೆಳೆ ವಿಮೆ, ಕಾರ್ಮಿಕ ಕಲ್ಯಾಣ ಯೋಜನೆಗಳು ಇತ್ಯಾದಿಗಳಂತಹ 500 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ 100% ಕೇಂದ್ರ ಅನುದಾನಿತ ಯೋಜನೆಗಳಿಗೆ ಏಪ್ರಿಲ್ 1 ರಿಂದ ನೇರವಾಗಿ ಹಣ ವರ್ಗಾಯಿಸಲು ಕೇಂದ್ರ ಯೋಜಿಸಿದೆ.

ರಾಜ್ಯದ ಮಧ್ಯವರ್ತಿಗಳನ್ನ ಕೈಬಿಟ್ಟು, ಯೋಜನೆಗಳ ಉತ್ತಮ ಅನುಷ್ಠಾನ ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತವಾಗಿ ಹಣವನ್ನು ಸಂಬಂಧಿತ ಸಚಿವಾಲಯವು ಆರ್‌ಬಿಐನಿಂದ ಪಡೆದು, ರಾಜ್ಯದ ಖಜಾನೆಗೆ ವರ್ಗಾಯಿಸುತ್ತಿದೆ. ಇದು ನಂತರ ಆಯಾ ರಾಜ್ಯದ ಉಸ್ತುವಾರಿ ಕಮಿಷನರ್ ಮತ್ತು ರಾಜ್ಯ ಸಂಸ್ಥೆಗಳಿಗೆ ಸಾಗುತ್ತದೆ. ನಂತರ ಜಿಲ್ಲೆ ಅಥವಾ ಉಪ-ವಿಭಾಗ ಮಟ್ಟದಲ್ಲಿ, ಕ್ಷೇತ್ರ ಮಟ್ಟಕ್ಕೆ ಹಣವನ್ನು ವರ್ಗಾಯಿಸಲಾಗುತ್ತಿದೆ. ಇಲ್ಲಿಂದ, ಹಣವನ್ನು ಅಂತಿಮವಾಗಿ ಉದ್ದೇಶಿತ ಫಲಾನುಭವಿಗಳಿಗೆ ಅಥವಾ ಮಾರಾಟಗಾರರಿಗೆ ವಿತರಿಸಲಾಗುತ್ತಿದೆ.

ಆದರೆ ಈ ಹೊಸ ಸೆಟಪ್ ಮಧ್ಯವರ್ತಿಗಳನ್ನು ಮತ್ತು ಹಣ ಚಲಿಸುವ ಹಂತಗಳನ್ನು ಕಡಿಮೆ ಮಾಡಲು ಜೊತೆಗೆ, ಆಡಳಿತಾತ್ಮಕ ಅಡೆತಡೆಗಳನ್ನು ಕಡಿತಗೊಳಿಸುವ ಉದ್ದೇಶವನ್ನು ಹೊಂದಿದ್ದು, ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾದಿಂದ ನೇರವಾಗಿ ಫಲಾನುಭವಿ ಅಥವಾ ಅನುಷ್ಠಾನ ಮಾಡುವ ಏಜೆನ್ಸಿಗೆ ಹಣ ವಿತರಿಸುವುದನ್ನು ಅಥವಾ ತಲುಪಿಸುವುದನ್ನು ನಿರೀಕ್ಷಿಸಲಾಗಿದೆ. ಇದರಿಂದ ಯೋಜನೆಗಳ ಅನುಷ್ಠಾನವು ನಿಧಿಯ ಹರಿವಿನೊಂದಿಗೆ ಸಿಂಕ್ ಆಗಿರುತ್ತದೆ.

ಸಾಂಕ್ರಾಮಿಕದಲ್ಲೂ ಕೆಲಸ ನಿರ್ವಹಿಸಿದ್ದಕ್ಕೆ ವಿಭಿನ್ನವಾಗಿ ಧನ್ಯವಾದ ಅರ್ಪಿಸಿದ ಕಂಪನಿ; ಉದ್ಯೋಗಿಗಳಿಗೆ ಒಂದು ಕೋಟಿ ವೆಚ್ಚದ ಟ್ರಿಪ್..!

ಪ್ರಸ್ತುತವಾಗಿರುವ ಕಾರ್ಯ ವಿಧಾನದಲ್ಲಿ ವಿವಿಧ ಹಂತಗಳಲ್ಲಿ ಹಣವನ್ನು ಹೆಚ್ಚಾಗಿ ಹಿಡಿದಿಟ್ಟುಕೊಳ್ಳಲಾಗುತ್ತದೆ ಅಥವಾ ನಿಲುಗಡೆ ಮಾಡಲಾಗುತ್ತದೆ ಎಂದು ವಿವಿಧ ಅಧ್ಯಯನಗಳು ಸೂಚಿಸಿವೆ. ಪರಿಣಾಮವಾಗಿ, ಕೇಂದ್ರದಿಂದ ಹಣ ಬಿಡುಗಡೆಯಾದ ನಂತರ ಕಾರ್ಯ ಅನುಷ್ಠಾನವು ಹೆಚ್ಚಾಗಿ ವಿಳಂಬವಾಗುತ್ತದೆ. ಹೊಸ ಮಾರ್ಗಸೂಚಿಗಳು ವಿತರಣಾ ಸಮಯವನ್ನು ಕಡಿತಗೊಳಿಸುವುದರ ಜೊತೆಗೆ, ಅಂದುಕೊಂಡ ಸಮಯದಲ್ಲಿ ನಿಧಿಯ ಪ್ರವೇಶ ಮತ್ತು ಬಳಕೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿವೆ.‌

ಹಣಕಾಸು ಸಚಿವಾಲಯವು ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಈ ಬಗ್ಗೆ ಎಚ್ಚರಿಸಿದೆ. ಜೊತೆಗೆ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಹೊಸ ಸ್ವರೂಪದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದೆ ಎಂದು ತಿಳಿದು ಬಂದಿದೆ. ಕೇಂದ್ರ ಮತ್ತು ರಾಜ್ಯಗಳಿಂದ ಜಂಟಿಯಾಗಿ ಧನಸಹಾಯ ನೀಡುವ ಯೋಜನೆಗಳಿಗೆ ಕಳೆದ ವರ್ಷ ಇದೇ ರೀತಿಯ ಪ್ರಕ್ರಿಯೆಯ ಬಿಗಿಗೊಳಿಸುವಿಕೆಯನ್ನು ಪರಿಚಯಿಸಲಾಯಿತು.

500 ಕೋಟಿಗಿಂತ ಹೆಚ್ಚಿನ ವಾರ್ಷಿಕ ವೆಚ್ಚದ ಎಲ್ಲಾ ಕೇಂದ್ರ ವಲಯದ ಯೋಜನೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಖಜಾನೆ ಏಕ ಖಾತೆ (TSA) ಮಾದರಿಯ ಮೂಲಕ ಜಾರಿಗೊಳಿಸಲಾಗುವುದು. ಇದರಿಂದಾಗಿ ಯೋಜನೆಗಳಿಗೆ ಹಣವನ್ನು ಭಾರತದ ಕನ್ಸಾಲಿಡೇಟೆಡ್ ಫಂಡ್‌ನಿಂದ ಫಲಾನುಭವಿಗಳು ಮತ್ತು ಮಾರಾಟಗಾರರಿಗೆ ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಲಾಗುತ್ತದೆ. ಪ್ರತಿಯೊಂದು ಸಚಿವಾಲಯವು ಈ ಉದ್ದೇಶಕ್ಕಾಗಿ ಕೇಂದ್ರೀಯ ನೋಡಲ್ ಏಜೆನ್ಸಿ (CNA) ಎಂದು ಸ್ವಾಯತ್ತ ಸಂಸ್ಥೆಯನ್ನು ಗೊತ್ತುಪಡಿಸುತ್ತದೆ. ಇದು RBI ನೊಂದಿಗೆ ಖಾತೆಯನ್ನು ತೆರೆಯುತ್ತದೆ, ಇದು TSA ಮತ್ತು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ ಮಾದರಿಗಳಿಗೆ ಮ್ಯಾಪ್ ಮಾಡುತ್ತದೆ. ಆರ್‌ಬಿಐ ಯಾವುದೇ ಏಜೆನ್ಸಿ ಬ್ಯಾಂಕ್‌ನ ಒಳಗೊಳ್ಳದೆ ಸಚಿವಾಲಯಗಳಿಗೆ ಪ್ರಾಥಮಿಕ ಹೊದಿಕೆಯಾಗುತ್ತದೆ. ಅಗತ್ಯ ಪರಿಶೀಲನೆಗಳ ನಂತರ ಹಣವನ್ನು ನೇರವಾಗಿ ವಿತರಿಸಲು ಇವುಗಳು ‘ನಿಯೋಜನೆ ಖಾತೆಗಳು’ ಆಗುತ್ತವೆ.

40 ವರ್ಷದ ರಾಜಕೀಯ ಜೀವನದಲ್ಲಿ ಇಂದು ದುಃಖದ ದಿನ; ಬೇಸರ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್

500 ಕೋಟಿಗಿಂತ ಕಡಿಮೆ ಮೊತ್ತದ ಯೋಜನೆಗಳ ಸಂದರ್ಭದಲ್ಲಿ, ಅನುಷ್ಠಾನ ಖಾತ್ರಿಗೊಳಿಸಲು ರಾಜ್ಯ ಸರ್ಕಾರಿ ಸಂಸ್ಥೆಗಳನ್ನ‌ ತೊಡಗಿಸಿಕೊಳ್ಳಬಹುದು. ಆದರೆ ಸಂಬಂಧಪಟ್ಟ ಕೇಂದ್ರ ಸಚಿವಾಲಯವು ಮತ್ತೊಮ್ಮೆ ಕೇಂದ್ರೀಯ ನೋಡಲ್ ಏಜೆನ್ಸಿಯನ್ನು ಅನುಷ್ಠಾನಕ್ಕೆ ನೇಮಿಸುತ್ತದೆ. ಇದು ನಿಗದಿತ ವಾಣಿಜ್ಯ ಬ್ಯಾಂಕ್‌ನಲ್ಲಿ ಕೇಂದ್ರ ನೋಡಲ್ ಖಾತೆಯನ್ನು ತೆರೆಯುತ್ತದೆ. ಅದು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಮಿತಿಗಳೊಂದಿಗೆ CNA ಖಾತೆಯನ್ನು ಬಳಸುತ್ತದೆ. ಸಚಿವಾಲಯಗಳು CNA ಖಾತೆಗೆ ಹಣವನ್ನು ಕಟ್ಟುನಿಟ್ಟಾಗಿ ಅಗತ್ಯದ ಆಧಾರದ ಮೇಲೆ ಬಿಡುಗಡೆ ಮಾಡುತ್ತವೆ.

ನಿಧಿಯ ಬಿಡುಗಡೆಯು ಸಾಧ್ಯವಾದಷ್ಟು ‘ಸರಿಯಾದ ಅಥವಾ ಸೂಕ್ತ ಸಮಯದಲ್ಲಿ’ ಇರುತ್ತದೆ. ಯೋಜನೆಗೆ ಮೀಸಲಿಟ್ಟ ವಾರ್ಷಿಕ ಮೊತ್ತದ 25% ಕ್ಕಿಂತ ಹೆಚ್ಚಿಲ್ಲದ ಮೊತ್ತವನ್ನು ಒಂದೇ ಬಾರಿಗೆ ಬಿಡುಗಡೆ ಮಾಡಲಾಗುವುದಿಲ್ಲ. ಈ ಹಿಂದೆ ಬಿಡುಗಡೆ ಮಾಡಿದ ನಿಧಿಯ ಕನಿಷ್ಠ 75% ಮೊತ್ತದ ಸರಿಯಾದ ಬಳಕೆಯ ದಾಖಲೆ ನೀಡಿದರೆ ಮಾತ್ರ ಉಳಿದ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ ಖರ್ಚು ಮಾಡದ ಹಣವನ್ನು CNA ಖಾತೆಗೆ ಹಿಂತಿರುಗಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...