alex Certify ‘ನಿಮ್ಮ ಆಟಗಾರರನ್ನು ಗೌರವಿಸಿ’ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಪಾಕ್​ ಕ್ರಿಕೆಟಿಗನ ಕಿವಿಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಿಮ್ಮ ಆಟಗಾರರನ್ನು ಗೌರವಿಸಿ’ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಪಾಕ್​ ಕ್ರಿಕೆಟಿಗನ ಕಿವಿಮಾತು

ಭಾನುವಾರ ನಡೆದ ಐಸಿಸಿ ವರ್ಲ್ಡ್​​ ಕಪ್​ ಟಿ 20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ಮುಂದೆ ಸೋತಿರುವ ಘಟನೆಯನ್ನು ಮರೆಯಲು ಟೀಂ ಇಂಡಿಯಾ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಪಂದ್ಯ ಮುಗಿದು ಮೂರು ದಿನಗಳೇ ಕಳೆದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಪರ – ವಿರೋಧದ ಚರ್ಚೆ ಮುಂದುವರಿದಿದೆ.

10 ವಿಕೆಟ್​ಗಳ ಅಂತರದಲ್ಲಿ ಟೀಂ ಇಂಡಿಯಾ ಸೋಲನ್ನು ಕಂಡ ಬಳಿಕ ಟೀಂ ಇಂಡಿಯಾದ ಸಾಕಷ್ಟು ಅಭಿಮಾನಿಗಳು ಮಹಮ್ಮದ್​ ಶಮಿ ಆಟದ ಬಗ್ಗೆ ಅಸಮಾಧಾನ ಹೊರಹಾಕ್ತಿದ್ದಾರೆ. ಶಮಿ ವಿರುದ್ಧ ನಡೆಯುತ್ತಿರುವ ಟೀಕೆಗಳು ಸೋಶಿಯಲ್​ ಮೀಡಿಯಾದ ಹೊಸ ಟ್ರೆಂಡ್​ ಎಂಬಂತೆ ಆಗಿಬಿಟ್ಟಿದೆ. ಶಮಿ ಬೆಂಬಲಕ್ಕೆ ಟೀಂ ಇಂಡಿಯಾದ ಆಟಗಾರರು ನಿಂತಿರುವ ಬೆನ್ನಲ್ಲೇ ಪಾಕ್​​ ಆಟಗಾರರೂ ಸಹ ಶಮಿಗೆ ಬೆಂಬಲ ಸೂಚಿಸಿದ್ದಾರೆ.

BIG NEWS: ಧಮ್ ಇದ್ರೆ ಒಂದೇ ವೇದಿಕೆ ಮೇಲೆ ಚರ್ಚೆಗೆ ಬನ್ನಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಬಹಿರಂಗ ಸವಾಲು

ಪಾಕಿಸ್ತಾನ ತಂಡದ ಆರಂಭಿಕ ಆಟಗಾರ, ಮಹಮ್ಮದ್​ ರಿಜ್ವಾನ್​, ಶಮಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಶಮಿ ಹೇಟರ್ಸ್​ಗಳಿಗೆ ನಾಟುವಂತೆ ರಿಜ್ವಾನ್​ ಸೋಶಿಯಲ್​ ಮೀಡಿಯಾದಲ್ಲಿ ಸುಂದರ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ಕ್ರಿಕೆಟ್​ ಆಟವು ಜನರನ್ನು ಒಂದು ಮಾಡಬೇಕೇ ಹೊರತು ಒಡೆಯಬಾರದು ಎಂದು ರಿಜ್ವಾನ್​ ಹೇಳಿದ್ದಾರೆ.

ದೇಶಕ್ಕಾಗಿ ಹಾಗೂ ತನ್ನ ದೇಶದ ಜನತೆಗಾಗಿ ಒಬ್ಬ ಆಟಗಾರನಿಗೆ ಎದುರಾಗುವ ಒತ್ತಡ, ಹೋರಾಟ ಹಾಗೂ ತ್ಯಾಗವನ್ನು ತುಲನೆ ಮಾಡಲು ಸಾಧ್ಯವಿಲ್ಲ. ಮಹಮ್ಮದ್​ ಶಮಿ ಒಬ್ಬ ಸ್ಟಾರ್​​ ಹಾಗೂ ವಿಶ್ವ ಕ್ರಿಕೆಟ್​ ಕಂಡ ಉತ್ತಮ ಬೌಲರ್​ ಕೂಡ. ನಿಮ್ಮ ಆಟಗಾರರನ್ನು ಗೌರವಿಸಿ. ಆಟವು ಜನರನ್ನು ಒಂದು ಮಾಡಬೇಕೇ ಹೊರತು ಬೇರೆ ಮಾಡಬಾರದು ಎಂದು ರಿಜ್ವಾನ್​ ಟ್ವೀಟಾಯಿಸಿದ್ದಾರೆ.

ಪಂದ್ಯದಲ್ಲಿ 3.5 ಓವರ್​ನಲ್ಲಿ 43 ರನ್​ ಕೊಟ್ಟಿದ್ದ ಶಮಿ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಅವಹೇಳನ ವ್ಯಕ್ತವಾಗುತ್ತಿದ್ದಂತೆಯೇ ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹ್ವಾಗ್​ ಸೇರಿದಂತೆ ಸಾಕಷ್ಟು ಆಟಗಾರರು ಶಮಿ ಬೆನ್ನಿಗೆ ನಿಂತಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...