alex Certify ಕೊರೊನಾ ಲಸಿಕೆ ಕೊಡಿಸಲು ತಂದೆಯನ್ನು ಹೆಗಲಮೇಲೆ ಹೊತ್ತೊಯ್ದ ’’ಆಧುನಿಕ ಶ್ರವಣಕುಮಾರ’’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಕೊಡಿಸಲು ತಂದೆಯನ್ನು ಹೆಗಲಮೇಲೆ ಹೊತ್ತೊಯ್ದ ’’ಆಧುನಿಕ ಶ್ರವಣಕುಮಾರ’’

ನೀವು ತಂದೆ-ತಾಯಿಯರನ್ನು ಪ್ರೀತಿಸುತ್ತೀರಿ, ನಿಜ. ಆದರೆ ಎಷ್ಟರ ಮಟ್ಟಿಗೆ ಎಂದು ಪ್ರಶ್ನಿಸಿದಲ್ಲಿ, ಉತ್ತರಿಸಲು ಕಷ್ಟವಾಗಬಹುದು. ಬೆಟ್ಟದಷ್ಟು, ಸಾಗರದಷ್ಟು ಎಂಬ ಹೋಲಿಕೆಗಳು ಶುರುವಾಗಬಹುದು.

ಶ್ರವಣ ಕುಮಾರ್‌ ತಂದೆ-ತಾಯಿಯರನ್ನು ಭಕ್ತಿಯಿಂದ, ಪ್ರೀತಿಯಿಂದ ಹೊತ್ತೊಯ್ದು ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಿದ್ದ ಎಂಬ ಕತೆ ಕೇಳಿದ್ದೇವೆ. ಅದೇ ರೀತಿ, ಬ್ರೆಜಿಲ್‌ನ ಅಮೆಜಾನ್‌ ಕಾಡುಗಳಲ್ಲಿ ಆಧುನಿಕ ಶ್ರವಣಕುಮಾರನೊಬ್ಬ ಪತ್ತೆಯಾಗಿದ್ದಾನೆ.

ಕೊರೊನಾ ಮಹಾಮಾರಿಗೆ ತಂದೆ ಬಲಿಯಾಗಬಾರದು ಎಂಬ ಏಕೈಕ ಕಾಳಜಿಯಿಂದ ಸುಮಾರು 6 ಗಂಟೆಗಳ ಕಾಲ ಬೆನ್ನಹಿಂದೆ ಹೊತ್ತು ಲಸಿಕಾ ಕೇಂದ್ರಕ್ಕೆ ಕರೆದೊಯ್ದಿದ್ದಾನೆ ಬುಡಕಟ್ಟು ಯುವಕ.

ಆತನ ಹೆಸರು ತಾವಿ (24), ಆತನ ತಂದೆಯ ಹೆಸರು ವಾಹು (67 ವರ್ಷ) ಎಂದು ಟ್ವಿಟರ್‌ನಲ್ಲಿ ಎರಿಕ್‌ ಜೆನ್ನಿಂಗ್ಸ್‌ ಸಿಮೊಯಿಸ್‌ ಎಂಬ ವೈದ್ಯರು ಬರೆದುಕೊಂಡಿದ್ದಾರೆ. ವಾಹುಗೆ ಮೂತ್ರಕೋಶದ ತೀವ್ರ ಸಮಸ್ಯೆಯಿರುವ ಕಾರಣ ನಡೆಯಲಾಗಲ್ಲ.

ʼಭ್ರಷ್ಟಾಚಾರʼ ಎಂಬುದು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ: ಮದ್ರಾಸ್ ಹೈಕೋರ್ಟ್ ಹೇಳಿಕೆ

ತಂದೆಯನ್ನು ಮಗ ಬೆನ್ನ ಮೇಲೆ ಹೊತ್ತೊಯ್ಯುತ್ತಿರುವ ಫೋಟೊವನ್ನು ಜೆನ್ನಿಂಗ್ಸ್‌ ಟ್ವಿಟರ್‌ ಖಾತೆಯಲ್ಲಿ ಹಾಕಿದ್ದಾರೆ. ಇದು ಭಾರಿ ವೈರಲ್‌ ಆಗಿದೆ ಕೂಡ. 2021ರ ಜನವರಿಯಲ್ಲಿ ಕ್ಲಿಕ್ಕಿಸಿದ ಫೋಟೊ ಇದಂತೆ. ಆರ್ಥಿಕವಾಗಿ ಸದೃಢವಾದ ದೇಶಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ಸರಾಗವಾಗಿ ನಡೆಯುತ್ತಿದೆ. ಅಲ್ಲಿಯ ಎಲ್ಲ ಜನರಿಗೂ ಲಸಿಕೆ ಸಿಗುತ್ತಿದೆ. ಅವರಲ್ಲಿ ಆತಂಕವಿಲ್ಲ. ಆದರೆ, ಆರ್ಥಿಕವಾಗಿ ದುರ್ಬಲವಾದ ಆಫ್ರಿಕಾ ಖಂಡದ ದೇಶಗಳಲ್ಲಿನ ಪರಿಸ್ಥಿತಿಯನ್ನು ಫೋಟೊ ಅನಾವರಣಗೊಳಿಸುತ್ತದೆ ಎಂದು ಜೆನ್ನಿಂಗ್ಸ್‌ ಬರೆದಿದ್ದಾರೆ.

ಅಂದಹಾಗೆ, ತಾವಿ ಮತ್ತು ವಾಹಿ ಅವರು ಜೊಯಿ ಎಂಬ ಅಮೆಜಾನ್‌ ಕಾಡುಗಳಲ್ಲಿ ವಾಸಿಸುವ ಆದಿವಾಸಿಗರು. ಒಟ್ಟು 853 ಆದಿವಾಸಿಗಳು ಕೊರೊನಾದಿಂದ ಇದುವರೆಗೂ ಸತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...