alex Certify ಮಾಡೆಲ್ ಜೊತೆ ರಾತ್ರಿ ಕಳೆಯಲು ಇಷ್ಟೊಂದು ಹಣ ಆಫರ್ ಮಾಡಿದ್ರಂತೆ ಈ ಆಟಗಾರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡೆಲ್ ಜೊತೆ ರಾತ್ರಿ ಕಳೆಯಲು ಇಷ್ಟೊಂದು ಹಣ ಆಫರ್ ಮಾಡಿದ್ರಂತೆ ಈ ಆಟಗಾರ…..!

ಕಲಾವಿದರು, ಆಟಗಾರರು ಸೇರಿದಂತೆ ಸೆಲೆಬ್ರಿಟಿಗಳು ಆಗಾಗ ತಮ್ಮ ಜೀವನದಲ್ಲಾದ ಕಹಿ ಘಟನೆಗಳನ್ನು ಹೊರ ಹಾಕ್ತಿರುತ್ತಾರೆ. ಹಾಗೆ ಕೆಲವೊಂದು ಆಘಾತಕಾರಿ ವಿಷ್ಯವನ್ನು ಹೊರ ಹಾಕ್ತಾರೆ. ಈಗ ಫ್ರೆಂಚ್ ಮಾಡೆಲ್ ನಟಾಲಿ ಆಂಡ್ರಿಯಾನಿ ಬಾಂಬ್ ಸಿಡಿಸಿದ್ದಾರೆ. ಫುಟ್ಬಾಲ್ ಆಟಗಾರರೊಬ್ಬರು ನಟಾಲಿಗೆ ಒಂದು ರಾತ್ರಿ ಕಳೆಯುವಂತೆ ಆಫರ್ ಮಾಡಿದ್ದರಂತೆ. ಇದಕ್ಕೆ ಲಕ್ಷಗಟ್ಟಲೆ ಹಣ ನೀಡುವುದಾಗಿ ಹೇಳಿದ್ದರಂತೆ.

50 ವರ್ಷದ ಆಂಡ್ರಿಯಾನಿ, ಫ್ರೆಂಚ್ ನಿಯತಕಾಲಿಕೆಯೊಂದಕ್ಕೆ ಈ ಕೇಳಿಕೆ ನೀಡಿದ್ದಾರೆ. ಅನೇಕ ಅಸಭ್ಯ ಆಫರ್ ಗಳು ಬಂದಿದ್ದವು. ಆದ್ರೆ ಫುಟ್ಬಾಲ್ ಆಟಗಾರ ಇಟ್ಟ ಆಫರ್ ಭಿನ್ನವಾಗಿತ್ತೆಂದು ಹೇಳಿದ್ದಾರೆ. ನಟಾಲಿ ಆಂಡ್ರಿಯಾನಿ ಜೊತೆ ರಾತ್ರಿ ಕಳೆಯಲು ಫುಟ್ಬಾಲ್ ಆಟಗಾರ 50 ಸಾವಿರ ಯೂರೋ  ಅಂದ್ರೆ ಸುಮಾರು 43,25,676 ರೂಪಾಯಿ ಆಫರ್ ಇಟ್ಟಿದ್ದರಂತೆ.

ಒಣ ಕೆಮ್ಮಿನ ಕಿರಿಕಿರಿಗೆ ಹೀಗೆ ಹೇಳಿ ʼಗುಡ್‌ ಬೈʼ

ಆದ್ರೆ ನಾನು ಈ ಆಫರ್ ಅಲ್ಲಗಳೆದೆ ಎಂದು ನಟಾಲಿ ಹೇಳಿದ್ದಾರೆ. ಆಟಗಾರ, ಫ್ರೆಂಚ್ ರಾಷ್ಟ್ರೀಯ ತಂಡದೊಂದಿಗೆ ಸಂಬಂಧ ಹೊಂದಿದ್ದರು ಎಂದು ಮಾಡೆಲ್ ಹೇಳಿದ್ದಾರೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ. ಅವರು ಇಂಥ ಕೆಲಸ ಮಾಡ್ತಾರೆಂದು ನಾನು ಎಂದೂ ಭಾವಿಸಿರಲಿಲ್ಲವೆಂದು ನಟಾಲಿ ಹೇಳಿದ್ದಾರೆ.

ʼಕಂಕಣ ಭಾಗ್ಯʼ ಕೂಡಿ ಬರಲು ನವರಾತ್ರಿಯಲ್ಲಿ ಮಾಡಿ ಈ ಕೆಲಸ

2014 ರಲ್ಲಿ ಫ್ರೆಂಚ್ ಟಿವಿ ಶೋ ಸೀಕ್ರೆಟ್ ಸ್ಟೋರಿ ಮತ್ತು ಎರಡು ವರ್ಷಗಳ ನಂತರ ಹಾರ್ಟ್ ಬ್ರೇಕ್ ವಿಲ್ಲಾದಲ್ಲಿ ನಟಾಲಿ ಕಾಣಿಸಿಕೊಂಡಿದ್ದರು. ಪ್ಯಾರಿಸ್ ನಲ್ಲಿ ಜನಿಸಿದ ನಟಾಲಿಯಾ ಆಗಾಗ ಸುದ್ದಿಯಲ್ಲಿರುತ್ತಾರೆ.

ತನಗಿಂತ ಅರ್ಧದಷ್ಟು ವಯಸ್ಸಿನ ಪುರುಷರ ಜೊತೆ ಸಂಬಂಧ ಹೊಂದಿದ್ದ ನಟಾಲಿ ಸುದ್ದಿಯಲ್ಲಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ 3,41,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...