alex Certify “ಪ್ರತಿ ದಿನ 5 ನಿಮಿಷ ಮಹಿಳೆಯರು ಶಾರೀರಿಕ ಸಂಬಂಧ ಬೆಳೆಸಬೇಕು’’ ವಿವಾದಕ್ಕೆ ಕಾರಣವಾಗಿದೆ ಮಾಡೆಲ್ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

“ಪ್ರತಿ ದಿನ 5 ನಿಮಿಷ ಮಹಿಳೆಯರು ಶಾರೀರಿಕ ಸಂಬಂಧ ಬೆಳೆಸಬೇಕು’’ ವಿವಾದಕ್ಕೆ ಕಾರಣವಾಗಿದೆ ಮಾಡೆಲ್ ಹೇಳಿಕೆ

ಅಮೆರಿಕದ ಪ್ರಸಿದ್ಧ ಮಾಡೆಲ್ ಕ್ಯಾಪ್ರಿಸ್ ಬೌರೆಟ್ ಹೇಳಿಕೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ, ಕ್ಯಾಪ್ರಿಸ್ ಸೆಕ್ಸ್ ಮತ್ತು ಗಂಡ-ಹೆಂಡತಿ ಸಂಬಂಧದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕ್ಯಾಪ್ರಿಸ್ ಹೇಳಿಕೆ ಅನೇಕರ ಕೋಪಕ್ಕೆ ಕಾರಣವಾಗಿದೆ.

49 ವರ್ಷದ ಮಾಡೆಲ್ ಕ್ಯಾಪ್ರಿಸ್, ಮಹಿಳೆಯರು ತಮ್ಮ ಗಂಡನೊಂದಿಗೆ ಶಾರೀರಿಕ ಸಂಬಂಧ ಬೆಳೆಸಲು ಎಂದಿಗೂ ಅಲ್ಲಗಳೆಯಬಾರದು ಎಂದಿದ್ದಾರೆ. ಮಹಿಳೆಯರು ಗಂಡನ ಜೊತೆ ನಿಯಮಿತವಾಗಿ ಶಾರೀರಿಕ ಸಂಬಂಧ ಬೆಳೆಸಬೇಕೆಂದು ಸಲಹೆ ನೀಡಿದ್ದಾರೆ. ಇದಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುವ ಅಗತ್ಯವಿಲ್ಲ. ಇದು ಒತ್ತಡ ನಿವಾರಕವಾಗಿದೆ ಎಂದಿದ್ದಾರೆ.

ಓಕೆ ಮ್ಯಾಗ್ಸಿನ್ ಗೆ ಸಂದರ್ಶನ ನೀಡಿದ ಮಾಡೆಲ್, ನೀವು ದಣಿದಿದ್ದೀರಿ ಅಥವಾ ನಿಮಗೆ ತಲೆನೋವು ಇದೆ ಎಂದು ತಪ್ಪಿಸಿಕೊಳ್ಳಬೇಡಿ. ಇದಕ್ಕಾಗಿ ನೀವು 5 ರಿಂದ 10 ನಿಮಿಷಗಳನ್ನು ಮೀಸಲಿಡಿ. ಎರಡು ಮಕ್ಕಳ ತಾಯಿಯಾದ ಕ್ಯಾಪ್ರಿಸ್, ಬೆಡ್ ರೂಮ್ ಬಗ್ಗೆ ಯಾವುದೇ ದೂರಿರಬಾರದು ಎಂದು ಹೇಳಿದ್ದಾರೆ. ಪುರುಷರು ತುಂಬಾ ನಿಷ್ಕಪಟರಾಗಿರುತ್ತಾರೆ. ಅವರನ್ನು ಮೆಚ್ಚಿಸುವುದು ತುಂಬಾ ಸುಲಭ. ಆಹಾರ, ಹೊಗಳಿಕೆ ಮತ್ತು ಸೆಕ್ಸ್ ನಿಂದ ಅವರ ಹೃದಯವನ್ನು ಸುಲಭವಾಗಿ ಗೆಲ್ಲಬಹುದು ಎಂದಿದ್ದಾರೆ.

ಸಂಬಂಧವನ್ನು ಜೀವಂತವಾಗಿಡಲು ಸೆಕ್ಸ್ ಅತ್ಯಗತ್ಯ ಎಂದು ಮಾಡೆಲ್ ಕ್ಯಾಪ್ರಿಸ್ ಬೌರೆಟ್ ಹೇಳಿದ್ದಾರೆ. ಮೊದಲ ಲಾಕ್‌ಡೌನ್ ಸಮಯದಲ್ಲಿ ನಾನು ತುಂಬಾ ಸಕ್ರಿಯ ಮತ್ತು ಸೃಜನಶೀಲನಾಗಿದ್ದೆ. ಆದರೆ ಎರಡನೇ ಲಾಕ್‌ಡೌನ್ ನಲ್ಲಿ ಒತ್ತಡವಿತ್ತು. ಒತ್ತಡವನ್ನು ಕಡಿಮೆ ಮಾಡಲು ಸೆಕ್ಸ್ ತುಂಬಾ ಉಪಯುಕ್ತವಾಗಿತ್ತು ಎಂದಿದ್ದಾರೆ.

ಕ್ಯಾಪ್ರಿಸ್ 2011 ರಲ್ಲಿ ಫೈನಾನ್ಶಿಯರ್ ಟೈ ಕಂಫರ್ಟ್ ಅವರನ್ನು ಭೇಟಿಯಾಗಿದ್ದರು. ಇಬ್ಬರ ಮಧ್ಯೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. 2019 ರಲ್ಲಿ ವಿವಾಹವಾದರು. ದಂಪತಿಗೆ ಜೆಟ್ ಮತ್ತು ಜಾಕ್ಸ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮದುವೆಯ ನಂತರ ತನ್ನ ಜೀವನದ ದೃಷ್ಟಿಕೋನ ಸಂಪೂರ್ಣ ಬದಲಾಗಿದೆ ಎಂದು ಇವರು ಹೇಳ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...