alex Certify ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹಿಸಲು ಮುಂದಾದ ಪಾಲಿಕೆ ಮಾರ್ಷಲ್ ​ಗೆ ಥಳಿತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹಿಸಲು ಮುಂದಾದ ಪಾಲಿಕೆ ಮಾರ್ಷಲ್ ​ಗೆ ಥಳಿತ..!

ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿ ಇರುವ ಹಿನ್ನೆಲೆಯಲ್ಲಿ ಮಾಸ್ಕ್​ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಸಾರ್ವಜನಿಕರಿಗೆ ಪದೇ ಪದೇ ಜ್ಞಾಪಿಸಲಾಗುತ್ತಿದೆ. ಈ ನಡುವೆ ಮುಂಬೈನ ಜುಹು ಎಂಬಲ್ಲಿ ಮಾಸ್ಕ್​ ಧರಿಸದ ವ್ಯಕ್ತಿಯಿಂದ ದಂಡ ಸಂಗ್ರಹ ಮಾಡಲು ಮುಂದಾದ ಮಾರ್ಷಲ್​​ಗೆ ಥಳಿಸಿದ ಘಟನೆಯು ಬೆಳಕಿಗೆ ಬಂದಿದೆ.

ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಎಂದು ವಾರ್ಡ್​ನ ಘನ ತ್ಯಾಜ್ಯ ವಿಭಾಗದ ನಾಗರಿಕ ಅಧಿಕಾರಿ ಮಾಹಿತಿ ನೀಡಿದ್ರು. ಮಾಸ್ಕ್​ ಧರಿಸದ ಕಾರಣಕ್ಕೆ ದಂಡ ನೀಡಲು ನಿರಾಕರಿಸುವವರ ಫೋಟೋ ತೆಗೆದುಕೊಳ್ಳುವಂತೆ ನಾವು ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದ್ರು.

ಈ ವರ್ಷದ ಆರಂಭದಲ್ಲೂ ಸಹ ಕೊರೊನಾ ಪ್ರಕರಣಗಳು ಮಿತಿಮೀರುತ್ತಿದ್ದ ಸಂದರ್ಭದಲ್ಲಿ ಮುಂಬೈನ ಕಾಂಡಿವಲಿ ಪ್ರದೇಶದಲ್ಲಿ ಮಾಸ್ಕ್​ ಇಲ್ಲದ ಮಹಿಳೆಯನ್ನು ತಡೆಯಲು ಯತ್ನಿಸಿದ ಬಿಎಂಸಿ ಅಧಿಕಾರಿಗೆ ಥಳಿಸಿದ ಘಟನೆ ವರದಿಯಾಗಿತ್ತು. ಈ ಘಟನೆಯ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...