alex Certify ಮಾಜಿ ಪತ್ನಿ ಎಂದು ತಪ್ಪಾಗಿ ತಿಳಿದು ಬ್ಯಾಂಕ್​ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪತ್ನಿ ಎಂದು ತಪ್ಪಾಗಿ ತಿಳಿದು ಬ್ಯಾಂಕ್​ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ….!

ವ್ಯಕ್ತಿಯೊಬ್ಬ 32 ವರ್ಷದ ಮಹಿಳೆಯನ್ನು ತನ್ನ ಮಾಜಿ ಪತ್ನಿ ಎಂದು ತಪ್ಪಾಗಿ ತಿಳಿದು ಬ್ಯಾಂಕಿನ ಒಳಗೆ ಆಕೆಯನ್ನು ಕೊಲ್ಲಲು ಯತ್ನಿಸಿದ ಘಟನೆಯು ಕೋಜಿಕೋಡ ಜಿಲ್ಲೆಯಲ್ಲಿ ನಡೆದಿದೆ. ಮದ್ಯಪಾನ ಮಾಡಿದ್ದ 47 ವರ್ಷದ ಬಿಜು ಎಂಬಾತ ನನ್ಮಂಡದ ಸಹಕಾರಿ ಗ್ರಾಮೀಣ ಬ್ಯಾಂಕ್​ನ ಒಳಗೆ ನುಗ್ಗಿದ್ದ. ಬ್ಯಾಂಕ್​ನ ಒಳಗೆ ನುಗ್ಗಿ ಶ್ರೀಷ್ಮಾ ಎಂಬವರ ಮೇಲೆ ದಾಳಿ ನಡೆಸಿದ್ದನು. ಗಾಯಗೊಂಡಿರುವ ಶ್ರೀಷ್ಮಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

BIG BREAKING: ಕಳೆದ 287 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಸೋಂಕಿತರು ಪತ್ತೆ; ದೇಶದಲ್ಲಿ ಕೋವಿಡ್ ಕೇಸ್ ದಾಖಲೆ ಪ್ರಮಾಣದಲ್ಲಿ ಕುಸಿತ

ಅಂದಹಾಗೆ ಬಿಜು ಮಾಜಿ ಪತ್ನಿ ಸುಷ್ಮಿತಾ ಕೂಡ ಇದೇ ಬ್ಯಾಂಕ್​ನ ಸಿಬ್ಬಂದಿಯಾಗಿದ್ದರು. ಹೀಗಾಗಿ ಈ ಬ್ಯಾಂಕ್​ನ ಮತ್ತೋರ್ವ ಉದ್ಯೋಗಿ ಶ್ರೀಷ್ಮಾರನ್ನು ಸುಷ್ಮಿತಾ ಎಂದು ತಪ್ಪಾಗಿ ಅರ್ಥೈಸಿಕೊಂಡು ಅವರ ಮೇಲೆ ಬಿಜು ದಾಳಿ ನಡೆಸಿದ್ದಾರೆ. ಸುಷ್ಮಿತಾಳನ್ನು ಕೊಲ್ಲಬೇಕೆಂದು ಪ್ಲಾನ್​ ಮಾಡಿ ಬ್ಯಾಂಕ್​ನ ಒಳಗೆ ನುಗ್ಗಿದ್ದ ಬಿಜು ಕ್ಯಾಶಿಯರ್​ ಕ್ಯಾಬಿನ್​ನಲ್ಲಿರುವ ಶ್ರೀಷ್ಮಾ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಆದರೆ ಶ್ರೀಷ್ಮಾ ಹೇಗೋ ಆತನ ಕೈನಿಂದ ತಪ್ಪಿಸಿಕೊಂಡಿದ್ದಾರೆ.

ಬ್ಯಾಂಕ್​ನ ಇತರೆ ಸಿಬ್ಬಂದಿ ಶ್ರೀಷ್ಮಾ ನೆರವಿಗೆ ಧಾವಿಸಿದ್ದಾರೆ. ಬಿಜುವನ್ನು ಹಿಡಿದ ಬ್ಯಾಂಕ್​ ಸಿಬ್ಬಂದಿ ಆತನನ್ನು ಪೊಲೀಸ್​ ವಶಕ್ಕೆ ನೀಡಿದ್ದಾರೆ.
ಬ್ಯಾಂಕ್​ನ ಕ್ಯಾಶಿಯರ್​ ಆಗಿದ್ದ ಸುಷ್ಮಿತಾ ಸೋಮವಾರ ರಜೆಯಲ್ಲಿದ್ದರು. ಹೀಗಾಗಿ ಶ್ರೀಷ್ಮಾ ಸುಷ್ಮಿತಾ ಜಾಗದಲ್ಲಿ ಕುಳಿತಿದ್ದರು. ಆದರೆ ಇದರ ಅರಿವು ಇಲ್ಲದ ಬಿಜುಗೆ ಶ್ರೀಷ್ಮಾ ಮಾಸ್ಕ್​ ಹಾಕಿಕೊಂಡಿದ್ದರಿಂದ ಸರಿಯಾಗಿ ಗುರುತು ಸಿಕ್ಕಿರಲಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...