alex Certify ಕುಕ್ಕೀಸ್​ ತಿನ್ನಲು ಪುಟ್ಟ ಬಾಲಕಿ ಮಾಡಿದ್ದಾಳೆ ಸಖತ್‌ ಸರ್ಕಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಕ್ಕೀಸ್​ ತಿನ್ನಲು ಪುಟ್ಟ ಬಾಲಕಿ ಮಾಡಿದ್ದಾಳೆ ಸಖತ್‌ ಸರ್ಕಸ್

ಬಾಲ್ಯದ ದಿನಗಳಲ್ಲಿ ಎಲ್ಲರೂ ಕೂಡ ಅಡುಗೆ ಮನೆಯೊಳಗೆ ಏನಾದರೂ ತಿಂಡಿಯನ್ನ ಕದ್ದು ತಿಂದಿದ್ದು ಇದೆ. ಅನೇಕರು ಈಗಲೂ ಈ ಅಭ್ಯಾಸವನ್ನ ಮುಂದುವರಿಸುತ್ತಿದ್ದಿರಬಹುದು.

ಮುದ್ದಾದ ವಿಡಿಯೋವೊಂದರಲ್ಲಿ ಬಾಲಕಿ ಕುಕ್ಕಿಯನ್ನ ಕದಿಯೋಕೆ ಮಾಡುವ ಸಾಹಸಗಳು ಸೋಶಿಯಲ್​ ಮೀಡಿಯಾದ ಜನರನ್ನ ನಗೆಗಡಲಲ್ಲಿ ತೇಲಿಸಿದೆ. ಖುರ್ಚಿ ಸಹಾಯದಿಂದ ಎತ್ತರದ ಜಾಗದಲ್ಲಿರುವ ಕುಕ್ಕಿಯನ್ನ ತೆಗೆದುಕೊಳ್ಳುವ ಬದಲು ಈ ಪುಟ್ಟ ಬಾಲಕಿ ಫ್ರಿಡ್ಜ್​ ಬಾಗಿಲನ್ನ ಹಿಡಿದು ಜೋತಾಡಿದ್ದಾಳೆ.

ಪಬ್‌ ಮುಂದಿನ ಚರಂಡಿಯಲ್ಲಿ ವ್ಯಕ್ತಿಯ ಚಿತಾಭಸ್ಮ ವಿಸರ್ಜನೆ…! ಇದರ ಹಿಂದಿದೆ ವಿಚಿತ್ರ ಕಾರಣ

ಈ ವಿಡಿಯೋವನ್ನ ಮೊದಲು ಟಿಕ್​ಟಾಕ್​​ನಲ್ಲಿ ಶೇರ್​ ಮಾಡಲಾಗಿದೆ. ಇದಾದ ಬಳಿಕ ಅಮೆರಿಕದ ಕಲಾವಿದ ಬಿ. ಸ್ಕಾಟ್​ ಎಂಬವರು, ಕುಕ್ಕಿ ತಿನ್ನಬೇಕು ಎಂದು ಬಯಕೆಯಾದ್ರೆ ಯಾವ ಪ್ರಯತ್ನವು ತೀರಾ ಕಷ್ಟ ಎನಿಸೋದಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

ವಿಡಿಯೋದಲ್ಲಿ ಬಾಲಕಿ ಫ್ರಿಡ್ಜ್​​ ಬಾಗಿಲಿನಲ್ಲಿರುವ ಹಿಡಿಕೆಯ ಸಹಾಯದಿಂದ ಮೇಲೇರಿ ಕುಕ್ಕಿ ಪ್ಯಾಕೆಟ್​ನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...