alex Certify ಬಾಹ್ಯಾಕಾಶದಲ್ಲಿ ಮೊದಲ ಬ್ಯೂಟಿ ಕ್ವೀನ್​ ಆಗುವ ಹಂಬಲದಲ್ಲಿ ʼಮಿಸ್​ ಇಂಗ್ಲೆಂಡ್ʼ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಲ್ಲಿ ಮೊದಲ ಬ್ಯೂಟಿ ಕ್ವೀನ್​ ಆಗುವ ಹಂಬಲದಲ್ಲಿ ʼಮಿಸ್​ ಇಂಗ್ಲೆಂಡ್ʼ​

ಮಿಸ್​ ಇಂಗ್ಲೆಂಡ್​ ಕಿರೀಟ ಧರಿಸಿ, 2023ರಲ್ಲಿ ಸುಂದರಿ ಪಟ್ಟಕ್ಕಾಗಿ ತಯಾರಿ ನಡೆಸಿರುವ ಜೆಸ್ಸಿಕಾ ಗ್ಯಾಗನ್​ ಈಗ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಇದು ಅವರ ಗುರಿಯೂ ಹೌದಂತೆ. ಅದೇನೆಂದರೆ ಈಕೆಗೆ ಗಗನಯಾತ್ರಿಯಾಗುವ ಹಂಬಲವಿದೆಯಂತೆ.

ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಮಿಸ್​ ಇಂಗ್ಲೆಂಡ್​ ಆಗುವ ಆಸೆ ನನ್ನದು ಎಂದು ಜೆಸ್ಸಿಕಾ ಹೇಳಿಕೊಂಡಿದ್ದಾರೆ.

ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಈಕೆ, ಅಕ್ಟೋಬರ್‌ನಲ್ಲಿ ಮಿಸ್ ಇಂಗ್ಲೆಂಡ್‌ ಆಗಿ ಹೊರಹೊಮ್ಮಿದ್ದರು. ಸೌಂದರ್ಯ ಸ್ಪರ್ಧೆ ವೇದಿಕೆಯಲ್ಲಿಯೂ ಇವರು, ಗಗನಯಾತ್ರಿಯಾಗುವ ಹಂಬಲ ವ್ಯಕ್ತಪಡಿಸಿದ್ದರು.

ಸದ್ಯ ಈಕೆ ಲಿವರ್‌ಪೂಲ್ ವಿಶ್ವವಿದ್ಯಾಲಯದಲ್ಲಿ ಸಮಗ್ರ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಗಗನಯಾತ್ರಿಯಾಗಲು ಅವರು ಅರ್ಜಿ ಸಲ್ಲಿಸಲು ಯೋಜಿಸಿದ್ದಾರೆ. “ನಾನು ಮಿಸ್ ಇಂಗ್ಲೆಂಡ್ ಮತ್ತು ನನ್ನ ಏರೋಸ್ಪೇಸ್ ಉತ್ಸಾಹವನ್ನು ಗೆದ್ದಿದ್ದೇನೆ ಎಂದು ನಾನು ಭಾವಿಸುತ್ತೇನೆ, ಹುಡುಗಿಯರು ತಮ್ಮ ಕನಸುಗಳು ಮತ್ತು ಗುರಿಗಳನ್ನು ಅನುಸರಿಸಿಕೊಂಡು ಹೋಗಿ ಆ ಗುರಿಯನ್ನು ತಲುಪಬೇಕು ಎನ್ನುವುದು ನನ್ನ ಆಸೆ” ಎಂದಿದ್ದಾರೆ ಜೆಸಿಕಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...