alex Certify ಶಾಕಿಂಗ್…! ವಿದ್ಯಾರ್ಥಿನಿ ಮೇಲೆ 30 ಮಂದಿಯಿಂದ ಅತ್ಯಾಚಾರ – ವಿಡಿಯೋ ಮಾಡಿ ಸ್ನೇಹಿತರಿಗೂ ಸಾಥ್ ನೀಡಿದ ಕಿಡಿಗೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್…! ವಿದ್ಯಾರ್ಥಿನಿ ಮೇಲೆ 30 ಮಂದಿಯಿಂದ ಅತ್ಯಾಚಾರ – ವಿಡಿಯೋ ಮಾಡಿ ಸ್ನೇಹಿತರಿಗೂ ಸಾಥ್ ನೀಡಿದ ಕಿಡಿಗೇಡಿ

ಚಿಕ್ಕಮಗಳೂರು: ಶಿಗ್ಗಾವಿ ಮೂಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೇಲೆ 30 ಕ್ಕೂ ಅಧಿಕ ಮಂದಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.

ತಾಯಿ ನಿಧನರಾದ ನಂತರ ಚಿಕ್ಕಮ್ಮ ಎಂದು ಹೇಳಿಕೊಳ್ಳುತ್ತಿದ್ದ ಮಹಿಳೆಯೊಂದಿಗೆ ಶೃಂಗೇರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ವಿದ್ಯಾರ್ಥಿನಿ ವಾಸವಾಗಿದ್ದಾಳೆ. 2020 ರ ಸೆಪ್ಟೆಂಬರ್ ನಿಂದ ಮೂವತ್ತಕ್ಕೂ ಅಧಿಕ ಮಂದಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ.

ಬಾಲಕಿಯನ್ನು ರಕ್ಷಿಸಿ ಸಾಂತ್ವಾನ ಕೇಂದ್ರದಲ್ಲಿ ಇರಿಸಲಾಗಿದ್ದು, ಬಳಿಕ ಚಿಕ್ಕಮಗಳೂರಿನ ಸ್ವಾಧಾರ ಕೇಂದ್ರಕ್ಕೆ ಕಳುಹಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಶೃಂಗೇರಿ ಪೊಲೀಸರಿಗೆ ದೂರು ದಾಖಲಿಸಿಕೊಳ್ಳಲು ತಿಳಿಸಿದೆ.

ಬಾಲಕಿ ಮನೆಯಲ್ಲಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದುಕೊಂಡಿದ್ದಾನೆ. ನಂತರದಲ್ಲಿ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಿ ಪದೇಪದೇ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ತನ್ನ ಸ್ನೇಹಿತರು ಮತ್ತು ಪರಿಚಿತರನ್ನು ಬಾಲಕಿ ಮೇಲೆ ಅತ್ಯಾಚಾರ ಎಸಗಲು ಸಹಕಾರ ನೀಡಿದ್ದಾನೆ. ಆಕೆಗೆ 15 ಕ್ಕೂ ಹೆಚ್ಚು ಮಂದಿಯ ಹೆಸರು ಗೊತ್ತಿದೆ. ಹೆಸರು ಗೊತ್ತಿಲ್ಲದ ಅನೇಕರು ಕೂಡ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...