alex Certify ದೊಡ್ಡವನಾದ ಮೇಲೆ ಸ್ತ್ರೀವಾದಿಯಾಗುವೆ: ವಾಹನದ ಹಿಂಭಾಗದಲ್ಲಿ ಹೀಗೊಂದು ಬರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡವನಾದ ಮೇಲೆ ಸ್ತ್ರೀವಾದಿಯಾಗುವೆ: ವಾಹನದ ಹಿಂಭಾಗದಲ್ಲಿ ಹೀಗೊಂದು ಬರಹ

ವಾಹನದ ಹಿಂಭಾಗದಲ್ಲಿ ಅಸಾಮಾನ್ಯ ಸಂದೇಶಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಮನಸ್ಸಿನಲ್ಲಿ ಇರುವ ಭಾವನೆಗಳನ್ನು ತಮ್ಮ ತಮ್ಮ ವಾಹನಗಳ ಹಿಂಭಾಗ ಅಥವಾ ಮುಂಭಾಗದಲ್ಲಿ ಅಕ್ಷರ ರೂಪಕ್ಕೆ ಇಳಿಸುವುದು ಸಾಮಾನ್ಯ.

ಅಂಥದ್ದೇ ಒಂದು ಬರಹದ ಫೋಟೋ ಈಗ ವೈರಲ್​ ಆಗಿದೆ. ಆದರೆ ಇಲ್ಲಿರುವ ಬರಹ ನೀವು ನಿರೀಕ್ಷಿಸಿದಂತೆ ಅಲ್ಲ. ಚಿತ್ರವು ಬಿಳಿ ಮಿನಿ ಟ್ರಕ್ ಅನ್ನು ತೋರಿಸುತ್ತದೆ. ಅದರ ಹಿಂಭಾಗದಲ್ಲಿ “ಬಡೆ ಹೋಕರ್ ಫೆಮಿನಿಸ್ಟ್ ಬನುಂಗಾ” ಎಂದು ಬರೆಯಲಾಗಿದೆ. ಇದರ ಅರ್ಥ “ನಾನು ದೊಡ್ಡವನಾದಾಗ, ನಾನು ಸ್ತ್ರೀವಾದಿಯಾಗುತ್ತೇನೆ” ಎಂದು !

ವಾಹನವನ್ನು ಯಾರು ಹೊಂದಿದ್ದಾರೆ ಅಥವಾ ಚಿತ್ರವನ್ನು ಎಲ್ಲಿ ತೆಗೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಒಂದು ವಿಷಯ ಖಚಿತವಾಗಿದೆ – ಈ ವಾಹನವು ಅನಿರೀಕ್ಷಿತ ಇಂಟರ್ನೆಟ್ ಸಂವೇದನೆಯಾಗಿದೆ. ಈ ಸ್ನ್ಯಾಪ್ ಅನ್ನು ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರರು, ನನಗೂ ಇದೇ ಆಸೆ ಇದೆ ಎಂದು ಬರೆದುಕೊಂಡಿದ್ದು, ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...