alex Certify ಮೈಕ್​ ಟೈಸನ್​ ಬಳಸುತ್ತಿದ್ದ ಫೆರಾರಿ ಎಫ್​50 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಕ್​ ಟೈಸನ್​ ಬಳಸುತ್ತಿದ್ದ ಫೆರಾರಿ ಎಫ್​50 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿ

ಫೆರಾರಿ ಕಾರ್ ಬ್ರ್ಯಾಂಡ್ ಜಗತ್ತಿನ ಗಮನ ಸೆಳೆದಿದೆ. ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರೂ ಸಹ ಹೌದು. 1996 ರಲ್ಲಿ ಬಾಕ್ಸಿಂಗ್​ ದಂತಕಥೆ ಮೈಕ್​ ಟೈಸನ್​ ಕೂಡ ಅತಿ ಅಪರೂಪದ ಫೆರಾರಿ ಎಫ್50 ಅನ್ನು ಖರೀದಿಸಿದ್ದರು.

ಫೆರಾರಿ ಎಫ್​50 ಉತ್ಪಾದನೆಯು ಕೇವಲ 349 ಯೂನಿಟ್​ಗೆ ಮಾತ್ರ ಸೀಮಿತವಾಗಿತ್ತು ಮತ್ತು ಇವುಗಳಲ್ಲಿ ಕೇವಲ 73 ಮಾತ್ರ ಯುಎಸ್​ ಮಾರುಕಟ್ಟೆಗೆ ಕಾಯ್ದಿರಿಸಲಾಗಿತ್ತು.

ಇತ್ತೀಚೆಗೆ ಈ ಕಾರನ್ನು ಹರಾಜಿಗೆ ಇಡಲಾಗಿತ್ತು. ಕುತೂಹಲಕಾರಿ ಎಂದರೆ, ಇದು 4.2 ಮಿಲಿಯನ್​ ಯುಎಸ್​ ಡಾಲರ್​ಗೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. 33 ಕೋಟಿ ರೂ. ಬೆಲೆಯ ಫೆರಾರಿ ಎಫ್50 ಕುರಿತು ಮಾತನಾಡುವುದಾದರೆ, ಇದು 60-ವಾಲ್ವ್​ 4.7ಎಲ್​ 65-ಡಿಗ್ರಿ 12 ಪವರ್​ ಪ್ಲಾಂಟ್​ ಅನ್ನು ಒಳಗೊಂಡಿದೆ, ಇದು 8,500 ಆರ್​ಪಿಎಂನಲ್ಲಿ 513 ಹಾರ್ಸ್​ ಪವರ್​ ಗರಿಷ್ಠ ಶಕ್ತಿಯ ಉತ್ಪಾದನೆ ಮಾಡುತ್ತದೆ.

ಎಫ್50 ಕಾರು ಚಾಲನೆಯಾದ ಕೇವಲ 3.6 ಸೆಕೆಂಡುಗಳಲ್ಲಿ 100 ಕಿಮೀ ಪ್ರತಿ ಗಂಟೆಯ ಲೆಕ್ಕದಲ್ಲಿ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ.
ಬಾಕ್ಸರ್​ ಟೈಸನ್​ನ ಅತ್ಯಂತ ಜನಪ್ರಿಯ ಕಾರು ಖರೀದಿಗಳಲ್ಲಿ ಲಂಬೋರ್ಗಿನಿ​, ಫೆರಾರಿ​ ಮತ್ತು ಬೆಂಟ್ಲಿ ಸೇರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...