alex Certify ಕುಖ್ಯಾತ ಡ್ರಗ್ಸ್‌ ದೊರೆಯ ಬಂಗಲೆ ಹರಾಜು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಖ್ಯಾತ ಡ್ರಗ್ಸ್‌ ದೊರೆಯ ಬಂಗಲೆ ಹರಾಜು…!

ಜಗತ್ತಿನ ಮಾದಕ ವಸ್ತುಗಳ ಬೃಹತ್‌ ಜಾಲದ ಚಕ್ರವರ್ತಿಯಾಗಿ ಕುಖ್ಯಾತಿ ಗಳಿಸಿದ್ದ ಮೆಕ್ಸಿಕೊ ಪ್ರಜೆ ಜೊವಾಕ್ವಿನ್‌ ’ಎಲ್‌ ಚಾಪೊ’ ಗುಜ್‌ಮ್ಯಾನ್‌ ಹಲವು ವರ್ಷಗಳ ಕಾಲ ಸುರಕ್ಷಿತ ಅಡಗಿದ್ದ ಮನೆಯನ್ನು ಮೆಕ್ಸಿಕೊ ಸರ್ಕಾರವು ಲಾಟರಿ ಮೂಲಕ ಮಾರಾಟ ಮಾಡಿದೆ. ಕೇವಲ 12 ಡಾಲರ್‌ನ ಲಾಟರಿಗೆ ಮನೆ ಒಲಿದಿದೆ, ಆ ಲಾಟರಿಯ ನಂಬರ್‌ ’1438619’.

ಯಾವ ಲಾಟರಿ ಸಂಖ್ಯೆಗೆ ಮನೆ ಒಲಿದಿದೆ ಎಂದು ಮಾತ್ರವೇ ಬಹಿರಂಗಪಡಿಸಿರುವ ಸರ್ಕಾರವು, ವಿಜೇತರ ಹೆಸರನ್ನು ಗೌಪ್ಯವಾಗಿ ಇರಿಸಿದೆ. ಇದಕ್ಕೆ ಕಾರಣವೂ ಇದು. ಅದೇನೆಂದರೆ, ಚಾಪೊ ಸತ್ತಿಲ್ಲ, ಆತ ಅಮೆರಿಕದ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

BIG NEWS: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಸನ್ಮಾನ; ಇಲ್ಲವಾದರೆ ಸತ್ಯಾಗ್ರಹ; ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಆತನ ಶಿಷ್ಯರು, ಸಹಚರರು, ಡ್ರಗ್‌ ವ್ಯಾಪಾರಿಗಳ ಕಳ್ಳಜಾಲ ಇನ್ನೂ ಕೂಡ ವಿಶ್ವಾದ್ಯಂತ ಸಕ್ರಿಯವಾಗಿದೆ. ಅವರಲ್ಲಿ ಯಾರೂ ಬೇಕಾದರೂ ಚಾಪೊ ಪರವಾಗಿ ನಿಂತು, ಮನೆ ಮಾಲೀಕನನ್ನು ಬೆದರಿಸಬಹುದು. ಇಲ್ಲವೇ, ಆತನ ಮೇಲೆ ಮಾರಣಾಂತಿಕ ದಾಳಿಯನ್ನೇ ನಡೆಸಬಹುದು ಎಂಬ ಆತಂಕವಿದೆ. ಚಾಪೊನ ಬಂಗಲೆಯ ಬೆಲೆ ಬರೋಬ್ಬರಿ 1.33 ಕೋಟಿ ರೂ.

2014ರಲ್ಲಿ ಚಾಪೊನ ಬಂಧನಕ್ಕೆ ಮೆಕ್ಸಿಕೊ ಪೊಲೀಸರ ಪಡೆಯು ಮುಗಿಬಿದ್ದಾಗ, ಆತನ ಬಾತ್‌ ಟಬ್‌ ಕೆಳಗಿನ ರಹಸ್ಯ ಸುರಂಗದಲ್ಲಿ ಇಳಿದು ಮನೆಯ ಒಳಚರಂಡಿ ವ್ಯವಸ್ಥೆ ಮೂಲಕ ಪರಾರಿಯಾಗಿದ್ದ. ಆರು ದಿನಗಳ ತೀವ್ರ ಶೋಧದ ಬಳಿಕ ಆತನನ್ನು ಬಂಧಿಸಲಾಗಿತ್ತು. 2015ರಲ್ಲಿ ಭಾರಿ ಭದ್ರತೆಯ ಕಾರಾಗೃಹದಿಂದಲೇ ಈತ ತಪ್ಪಿಸಿಕೊಂಡ. ಮತ್ತೆ 2016ರಲ್ಲಿ ಪೊಲೀಸರು ಚಾಪೊನನ್ನು ಬಂಧಿಸಿ, ಅಮೆರಿಕಕ್ಕೆ ಗಡಿಪಾರು ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...