alex Certify ರೊನಾಲ್ಡೋ ಲೈಕ್‌ ಮಾಡಿದ ಕಮೆಂಟ್‌ ಈಗ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೊನಾಲ್ಡೋ ಲೈಕ್‌ ಮಾಡಿದ ಕಮೆಂಟ್‌ ಈಗ ಫುಲ್‌ ವೈರಲ್

ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಬಲಾನ್ ಡಿ’ಓರ್‌ ಗೌರವಕ್ಕೆ ಭಾಜನರಾದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಈ ಸ್ಫರ್ಧೆಯಲ್ಲಿ ಮತ್ತೊಮ್ಮೆ ಕ್ರಿಶ್ಚಿಯಾನೋ ರೊನಾಲ್ಡೋ, ಕರೀಂ ಬೆಂಜ಼ೆಮಾ, ಜೊರ್ಗಿನ್ಹೋ ಹಾಗೂ ರಾಬರ್ಟ್ ಲೆವಾನ್‌ಡೋಸ್ಕಿರನ್ನು ಹಿಂದಿಕ್ಕಿದ್ದಾರೆ.

ಪ್ಯಾರಿಸ್ ಸೇಂಟ್ ಜರ್ಮೇಯ್ನ್‌ ತಾರೆಗೆ ನಿರಂತರವಾಗಿ ಈ ಗೌರವ ಒಲಿದು ಬರುತ್ತಿರುವ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಟಗಾರರ ಅಭಿಮಾನಿಗಳ ನಡುವೆ ಪರ/ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ.

”ರೊನಾಲ್ಡೋ ಹಾಗೂ ಲೆವಾಂಡೋಸ್ಕೀರಿಂದ ದಾಖಲೆಯ ಏಳನೇ ಬಾರಿಗೆ ಮೆಸ್ಸಿ ಚಿನ್ನದ ಚೆಂಡನ್ನು ಕಸಿದುಕೊಂಡಿದ್ದಾರೆ,” ಎನ್ನುವ ಪೋಸ್ಟ್ ಒಂದಕ್ಕೆ ಖುದ್ದು ಕ್ರಿಶ್ಚಿಯಾನೋ ರೊನಾಲ್ಡೋ ಥಂಬ್ಸ್‌ಅಪ್ ನೀಡಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್ ಸೂಪರ್‌ಸ್ಟಾರ್‌ ಲೈಕ್ ಮಾಡಿದ ಈ ಕಾಮೆಂಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋರ್ಚುಗಲ್‌ನ ಫುಟ್ಬಾಲ್ ತಾರೆ ಮಾಡಿರುವ ದಾಖಲೆಗಳ ವಿವರಗಳನ್ನು ಪಟ್ಟಿ ಮಾಡಿರುವ ಈ ಅಭಿಮಾನಿ ತನ್ನ ಮೆಚ್ಚಿನ ತಾರೆಗೇಕೆ ಆ ಗೌರವ ಹೀಗೆ ಸತಾಯಿಸುತ್ತಿದೆ ಎಂದು ಕೇಳಿದ್ದಾರೆ.

2002ರ ಗುಜರಾತ್ ಹಿಂಸಾಚಾರ ಯಾವ ಸರ್ಕಾರದ ಅವಧಿಯಲ್ಲಿ ನಡೆಯಿತು…? ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಕೇಳಲಾಗಿದೆ ಈ ಪ್ರಶ್ನೆ

ರೊನಾಲ್ಡೋ ಜೊತೆಗೆ ಆಟದ ಮೈದಾನದಲ್ಲಿ ತೀವ್ರ ಪೈಪೋಟಿ ಹೊಂದಿರುವ ಮೆಸ್ಸಿ ಬಲಾನ್ ಡಿ’ಓರ್‌‌ ಅನ್ನು 2009, 2010, 2011, 2012, 2015 ಹಾಗೂ 2019ರಲ್ಲಿ ಜಯಿಸಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್ ಹಾಗೂ ರಿಯಲ್ ಮ್ಯಾಡ್ರಿಡ್ ಆಟಗಾರನಾಗಿ ರೊನಾಲ್ಡೋ ಈ ಗೌರವಕ್ಕೆ ಐದು ಬಾರಿ ಭಾಜನರಾಗಿದ್ದಾರೆ.

ಕೋಪಾ ಅಮೆರಿಕಾದಲ್ಲಿ ಅರ್ಜೆಂಟೀನಾ ಪರ ನೀಡಿದ ಪ್ರದರ್ಶನದ ಬೆನ್ನಿಗೆ ಮೆಸ್ಸಿಗೆ ದಾಖಲೆಯ ಏಳನೇ ಬಾರಿಗೆ ಈ ಪ್ರಶಸ್ತಿ ಒಲಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...