alex Certify 2002ರ ಗುಜರಾತ್ ಹಿಂಸಾಚಾರ ಯಾವ ಸರ್ಕಾರದ ಅವಧಿಯಲ್ಲಿ ನಡೆಯಿತು…? ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಕೇಳಲಾಗಿದೆ ಈ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2002ರ ಗುಜರಾತ್ ಹಿಂಸಾಚಾರ ಯಾವ ಸರ್ಕಾರದ ಅವಧಿಯಲ್ಲಿ ನಡೆಯಿತು…? ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಕೇಳಲಾಗಿದೆ ಈ ಪ್ರಶ್ನೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, 12ನೇ ತರಗತಿಯ ಟರ್ಮ್ 1 ಬೋರ್ಡ್ ಪರೀಕ್ಷೆಯಲ್ಲಿ ನೀಡಿದ ಪ್ರಶ್ನೆ ಚರ್ಚೆಗೆ ಕಾರಣವಾಗಿದೆ. 2002 ರ ಗುಜರಾತ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಕೇಳಲಾಗಿದೆ. ಪ್ರಶ್ನೆ ಕೇಳಿದ ಕೇವಲ ಒಂದು ಗಂಟೆಯ ನಂತರ ಮಂಡಳಿ ಕ್ಷಮೆಯಾಚಿಸಿದೆ. ಇದ್ರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಮಂಡಳಿ ಹೇಳಿದೆ.

ಬುಧವಾರ ಸಿಬಿಎಸ್ಇ ಸಮಾಜಶಾಸ್ತ್ರ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರ ಯಾವ ಸರ್ಕಾರದ ಅಡಿಯಲ್ಲಿ ನಡೆಯಿತು (The unprecedented scale and spread of anti-Muslim violence in Gujarat in 2002 took place under which government?) ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ  ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಕಾಂಗ್ರೆಸ್, ಬಿಜೆಪಿ, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್.

ಈ ಪ್ರಶ್ನೆ ಸಿಬಿಎಸ್ಇ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಮಂಡಳಿ ಈ ತಪ್ಪನ್ನು ಒಪ್ಪಿಕೊಂಡಿದೆ. ಇದ್ರ ​​ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದಿದೆ. ಮಂಡಳಿಯು ತನ್ನ ಹೇಳಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಯಾವ ಪ್ರಶ್ನೆ ಕೇಳಲಾಗಿದೆ ಎಂಬುದನ್ನು ಅದು ಹೇಳಿಲ್ಲ. ಆದ್ರೆ ಮಾಧ್ಯಮಗಳು ಇದು ಗುಜರಾತ್ ಹಿಂಸೆಗೆ ಸಂಬಂಧಿಸಿದ್ದು ಎಂದು ವರದಿ ಮಾಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...