alex Certify ಬುಧ ತುಲಾ ರಾಶಿಗೆ ಬರ್ತಿದ್ದಂತೆ ಕೆಡಲಿದೆ ಈ ರಾಶಿಯವರ ಗ್ರಹಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುಧ ತುಲಾ ರಾಶಿಗೆ ಬರ್ತಿದ್ದಂತೆ ಕೆಡಲಿದೆ ಈ ರಾಶಿಯವರ ಗ್ರಹಚಾರ

ಬುಧ ತುಲಾ ರಾಶಿಯಲ್ಲಿ ಪ್ರವೇಶ ಮಾಡಲಿದ್ದಾನೆ. ಅಕ್ಟೋಬರ್ 26ರಂದು  ಬುಧ ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದ್ರಿಂದಾಗಿ ನವೆಂಬರ್ 19ರವರೆಗೆ ಕೆಲ ರಾಶಿಯವರಿಗೆ ಸಮಸ್ಯೆ ಎದುರಾಗಲಿದೆ.

ವೃಷಭ : ಬುಧನ ರಾಶಿ ಬದಲಾವಣೆಯಿಂದ ವೃಷಭ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಏರುಪೇರಾಗಲಿದೆ. ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ತ್ವಚೆಗೆ ಸಂಬಂಧಿಸಿದ ಸಮಸ್ಯೆ ಕೂಡ ಕಾಡುವ ಸಂಭವವಿದೆ. ವೃಷಭ ರಾಶಿಯವರಿಗೆ ಗಂಟಲು ಸಮಸ್ಯೆ ಕಾಡಬಹುದು. ವೃಷಭ ರಾಶಿಯವರು ಈ ಅವಧಿಯಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಶತ್ರುಗಳ ಕಾಟ ಕೂಡ ಹೆಚ್ಚಾಗುವುದ್ರಿಂದ ನೀವು ಎಚ್ಚರಿಕೆ ಹೆಜ್ಜೆ ಇಡಬೇಕು.

ವೃಶ್ಚಿಕ ರಾಶಿ :  ಬುಧ, ತುಲಾ ರಾಶಿಗೆ ಹೋಗ್ತಿದ್ದಂತೆ ವೃಶ್ಚಿಕ ರಾಶಿಯವರಿಗೆ ಸಮಸ್ಯೆ ಶುರುವಾಗಲಿದೆ. ಖರ್ಚನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಯಾವುದೇ ಹಣಕಾಸಿನ ವಹಿವಾಟು ಈ ಸಂದರ್ಭದಲ್ಲಿ ಬೇಡ. ಉದ್ಯೋಗಿಗಳು ಜಾಗರೂಕರಾಗಿರಬೇಕು. ಸಣ್ಣ ತಪ್ಪು ಕೂಡ ದೊಡ್ಡ ಸಮಸ್ಯೆಯಾಗಿ ಕಾಡುವ ಸಾಧ್ಯತೆಯಿರುತ್ತದೆ.

ಕುಂಭ ರಾಶಿ : ಕುಂಭ ರಾಶಿಯವರ ಅದೃಷ್ಟ ಕೂಡ ಕೈಕೊಡಲಿದೆ. ವೆಚ್ಚ ಹೆಚ್ಚಾಗಲಿದೆ. ಒತ್ತಡ ಕಾಡುವ ಸಮಸ್ಯೆಯಿದೆ. ಸಂಬಂಧಿಕರು, ಸಹೋದರರ ಜೊತೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಯಾವುದೇ ವಿಷ್ಯಕ್ಕೆ ಅವರ ಜೊತೆ ವಾದ ಮಾಡಬೇಡಿ.

ಮೀನ ರಾಶಿ : ಬುಧನ ರಾಶಿ ಬದಲಾವಣೆ ಮೀನ ರಾಶಿ ಮೇಲೆ ಕೂಡ ಪ್ರಭಾವ ಬೀರಲಿದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಕಾಡುವ ಸಾಧ್ಯತೆಯಿದೆ.  ಈ ಸಮಯದಲ್ಲಿ ಹೆಚ್ಚು ಧೂಳಿರುವ ಜಾಗಕ್ಕೆ ಹೋಗ್ಬೇಡಿ. ತಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...