alex Certify ಹಸ್ತ ಮೈಥುನ ಮಾಡಿಕೊಳ್ಳುವವರಿಗೆ ಕಾಡುವುದಿಲ್ಲವಂತೆ ಈ ಕಾಯಿಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸ್ತ ಮೈಥುನ ಮಾಡಿಕೊಳ್ಳುವವರಿಗೆ ಕಾಡುವುದಿಲ್ಲವಂತೆ ಈ ಕಾಯಿಲೆ…!

ಹಸ್ತಮೈಥುನದಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಕುರಿತಾಗಿ ಅನೇಕ ವೈದ್ಯರು ಸಕಾರಾತ್ಮಕವಾಗಿ ಹೇಳುತ್ತಲೇ ಬಂದಿದ್ದಾರೆ. ಮಾನಸಿಕ ಒತ್ತಡ ಶಮನಗೊಳಿಸಿ ಆರೋಗ್ಯ ಸಂಬಂಧ ಇತರೆ ಪ್ರಯೋಜನಗಳನ್ನೂ ಹಸ್ತಮೈಥುನ ಕೊಡಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಹಾರ್ವಡ್‌ ವಿವಿಯ ಅಧ್ಯಯನವು ಹಸ್ತಮೈಥುನದಿಂದ ಪ್ರೊಸ್ಟೇಟ್ ಕ್ಯಾನ್ಸರ್‌ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದೆ. ಯೂರೋಪಿಯನ್ ಯೂರಾಲಜಿ ಎಂಬ ನಿಯತಕಾಲಿಕೆಯಲ್ಲಿ ಈ ಅಧ್ಯಯನದ ವರದಿಯು 2016ರಲ್ಲಿ ಪ್ರಕಟವಾಗಿತ್ತು.

ತಿಂಗಳಿಗೆ 21 ಬಾರಿ ಸ್ಖಲಿಸಿಕೊಳ್ಳುವ ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್‌ ಸಂಭವಿಸುವ ಸಾಧ್ಯತೆ ಶೇಕಡಾ 33ರಷ್ಟು ತಗ್ಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಅಧ್ಯಯನಕ್ಕಾಗಿ 31,925 ಪುರುಷರಿಗೆ ಪ್ರಶ್ನಾವಳಿಯನ್ನು ಕಳುಹಿಸಲಾಗಿದ್ದು, ಅವರೆಲ್ಲಾ ಎಷ್ಟು ಬಾರಿ ಹಸ್ತಮೈಥುನದಲ್ಲಿ ಭಾಗಿಯಾಗುತ್ತಾರೆ ಎಂದು ಕೇಳಲಾಗಿದೆ.

18 ವರ್ಷಗಳ ಕಾಲ ಸುದೀರ್ಘವಾಗಿ ನಡೆಸಲಾದ ಈ ಸಂಶೋಧನೆಯು ಅಧ್ಯಯನಕ್ಕೊಳಪಟ್ಟ ಎಷ್ಟು ಮಂದಿ ಪ್ರೊಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎಂದು ಕಂಡುಕೊಂಡಿದೆ. ಇಡೀ ಅಧ್ಯಯನ ಕಾಲಘಟ್ಟದಲ್ಲಿ ಮೂರು ಭಿನ್ನ ಸಮಯಗಳಲ್ಲಿ ಪುರುಷರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 20-40ರ ವಯೋಮಾನದ ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ನಿಯಮಿತವಾಗಿ ಸ್ಖಲಿಸಿಕೊಳ್ಳುವ ಗಂಡಸರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್‌ ಸಂಭವಿಸುವ ಸಾಧ್ಯತೆ ಬಹಳ ಕಡಿಮೆ ಇರಲಿದೆ ಎನ್ನಲಾಗಿದೆ.

ನಿಯಮಿತವಾದ ಹಸ್ತಮೈಥುನದಿಂದಾಗಿ ಪ್ರೊಸ್ಟೇಟ್‌ನಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಇತರೆ ನಂಜಿನಂಶಗಳನ್ನು ಹೊರಹಾಕಬಹುದಾಗಿದೆ ಎನ್ನುವ ತಜ್ಞರು, ಪ್ರೊಸ್ಟೇಟ್ ಕ್ಯಾನ್ಸರ್‌ ತಡೆಗಟ್ಟಲು ಹಸ್ತಮೈಥುನ ಒಂದೇ ದಾರಿಯಲ್ಲ ಎಂದೂ ಸಹ ತಿಳಿಸಿದ್ದಾರೆ.

ಸಾವಯವ ಉತ್ಪನ್ನಗಳಿಂದ ಭರಿತವಾದ ಆರೋಗ್ಯಯುತ ಪಥ್ಯ, ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ನಿದ್ರೆ, ನಿಯಮಿತ ವ್ಯಾಯಾಮ, ಸಸ್ಯಜನ್ಯ ಆಹಾರ, ಒಮೆಗಾ-3 ಕೊಬ್ಬಿನಂಶವುಳ್ಳ ಮೀನು ಸೇವನೆಯಿಂದ ಹಾಗೂ ಟೊಮ್ಯಾಟೋದಂಥ ಕೆಂಪು ಪದಾರ್ಥಗಳ ಸೇವನೆಯಿಂದಲೂ ಈ ಕ್ಯಾನ್ಸರ್‌ನ ಸಂಭವವನ್ನು ತಗ್ಗಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...