alex Certify 40ರ ನಂತರ ಈ ಬಗ್ಗೆ ಅಲರ್ಟ್‌ ಆಗಲೇಬೇಕು ಪುರುಷರು, ಇಲ್ಲದಿದ್ರೆ ಆಗಬಹುದು ಆರೋಗ್ಯ ಸಮಸ್ಯೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

40ರ ನಂತರ ಈ ಬಗ್ಗೆ ಅಲರ್ಟ್‌ ಆಗಲೇಬೇಕು ಪುರುಷರು, ಇಲ್ಲದಿದ್ರೆ ಆಗಬಹುದು ಆರೋಗ್ಯ ಸಮಸ್ಯೆ…..!

ವಯಸ್ಸು ನಲ್ವತ್ತಾಯ್ತು ಅಂದ್ರೆ ಪುರುಷರು ತಮ್ಮ ಆರೋಗ್ಯದ ಬಗ್ಗೆ ದುಪ್ಪಟ್ಟು ಕಾಳಜಿ ವಹಿಸಬೇಕು. ಯಾಕಂದ್ರೆ 40 ವರ್ಷದ ನಂತರ ದೇಹದಲ್ಲಿ ಅನೇಕ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಇದರಿಂದ ತೂಕ ಹೆಚ್ಚಾಗುತ್ತದೆ, ಹೊಟ್ಟೆ ಬರಲು ಪ್ರಾರಂಭಿಸುತ್ತದೆ. ಸೊಂಟದ ಸುತ್ತಲೂ ಕೊಬ್ಬು ಶೇಖರಣೆಯಾಗುತ್ತದೆ.

ಇದರಿಂದ್ಲೇ ಅನೇಕ ಕಾಯಿಲೆಗಳು ಕೂಡ ಬರಬಹುದು. ಹಾಗಾಗಿ ಇದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದೇ ಇದ್ದರೆ ಪ್ರಾಣಕ್ಕೇ ಅಪಾಯ. 40ರ ನಂತರ ನಿಮ್ಮಲ್ಲೂ ಈ ರೀತಿಯ ಸಂಕೇತಗಳು ಕಾಣಿಸಲಾರಂಭಿಸಿದರೆ ದೇಹದಲ್ಲಿ ಎಲ್ಲವೂ ಸರಿಯಾಗಿಲ್ಲ ಅನ್ನೋದನ್ನು ಅರ್ಥಮಾಡಿಕೊಳ್ಳಿ.

ಯಾವಾಗಲೂ ಟೆನ್ಷನ್‌ : ಕಚೇರಿಯಲ್ಲಿನ ಕೆಲಸದ ಹೊರೆ ಮತ್ತು ಮನೆಯ ಜವಾಬ್ದಾರಿಗಳಿಂದಾಗಿ ಪುರುಷರಿಗೆ ಒತ್ತಡದ ಸಮಸ್ಯೆ ಹೆಚ್ಚು. ಈ ಟೆನ್ಷನ್‌ನಿಂದ್ಲೇ ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಪರಿಣಾಮ ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನ ಸಮಸ್ಯೆ ಬರಬಹುದು.

ಹಾರ್ಮೋನ್‌ ಏರುಪೇರು: 40 ವರ್ಷಗಳ ನಂತರ ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಸ್ರವಿಸುವಿಕೆ ಕಡಿಮೆಯಾಗಲು ಪ್ರಾರಂಭಿಸುತ್ತದೆ, ಇದು ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಅನಾರೋಗ್ಯಕರ ಆಹಾರ ಶೈಲಿ ಮತ್ತು ಬಿಡುವಿಲ್ಲದ ಜೀವನಶೈಲಿ ಕೂಡ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸಲು ಕಾರಣವಾಗಿರುತ್ತದೆ.

ದೈಹಿಕ ಚಟುವಟಿಕೆಯ ಕೊರತೆ: ವಯಸ್ಸಾದಂತೆ ಪುರುಷರ ಜವಾಬ್ದಾರಿಗಳು ಸಹ ಹೆಚ್ಚಾಗುತ್ತವೆ. ಆರೋಗ್ಯದ ಬಗ್ಗೆ ಗಮನ ಕೊಡಲು ಸಮಯ ಸಿಗುವುದಿಲ್ಲ. ಜಿಮ್‌ನಲ್ಲಿ ವ್ಯಾಯಾಮ ಅಥವಾ ಇತರ ವರ್ಕೌಟ್‌ಗಳಿಗೆ ಸಮಯ ಸಿಗುವುದಿಲ್ಲ. ನಿಮ್ಮ ದೈಹಿಕ ಚಟುವಟಿಕೆ ಕಡಿಮೆಯಾದರೆ ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದು ಖಚಿತ.

ಚಯಾಪಚಯ ಸಮಸ್ಯೆ : 40 ವರ್ಷ ದಾಟಿದ ನಂತರ ಚಯಾಪಚಯದ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಕ್ಯಾಲೊರಿಗಳನ್ನು ಬರ್ನ್‌ ಮಾಡುವ ಸಾಮರ್ಥ್ಯ ಸಹ ಕಡಿಮೆಯಾಗುತ್ತದೆ. ಇದು ನಿಮ್ಮ ತೂಕದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ಅನಾವಶ್ಯಕ ಕೊಬ್ಬು ಸಂಗ್ರಹವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...