alex Certify ಬೆಂಕಿಗಾಹುತಿಯಾಗುತ್ತಿದ್ದ ಮಕ್ಕಳು ಸಿನಿಮೀಯ ರೀತಿಯಲ್ಲಿ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿಗಾಹುತಿಯಾಗುತ್ತಿದ್ದ ಮಕ್ಕಳು ಸಿನಿಮೀಯ ರೀತಿಯಲ್ಲಿ ರಕ್ಷಣೆ

ಚೀನಾದಲ್ಲಿ ಬೆಂಕಿಗೆ ಆಹುತಿಯಾಗುತ್ತಿದ್ದ ಕಟ್ಟಡವನ್ನು ಮಾನವ ಸರಪಳಿ ನಿರ್ಮಿಸಿ ಏರಿದ 6 ಮಂದಿ ಪುರುಷರು ಇಬ್ಬರು ಮಕ್ಕಳನ್ನು ಕಾಪಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮನ್ನಣೆ ಗಳಿಸುತ್ತಿದ್ದಾರೆ. ಅಗ್ನಿಗಾಹುತಿಯಾಗುತ್ತಿದ್ದ ಕಟ್ಟಡದ ಕಬ್ಬಿಣದ ಗ್ರಿಲ್​ಗಳ ಸಹಾಯದಿಂದ ಈ ಹೀರೋಗಳು ಮಕ್ಕಳನ್ನು ರಕ್ಷಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಕ್ಸಿಂಷಿಯನ್​ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಕಟ್ಟಡದ ಮೂರನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಇಬ್ಬರು ಹೆಣ್ಣು ಮಕ್ಕಳು ಒಳಗಡೆ ಸಿಲುಕಿಹಾಕಿಕೊಂಡಿದ್ದರು.

ಈ ಮಕ್ಕಳನ್ನು ಕಾಪಾಡಲು ಸಲುವಾಗಿ 6 ಮಂದಿ ಪುರುಷರು ಮಾನವ ಸರಪಳಿ ನಿರ್ಮಿಸಿ ಕಬ್ಬಿಣದ ಗ್ರಿಲ್​ ಹಿಡಿದು ಏರುವ ಮೂಲಕ ಕಿಟಕಿಯಿಂದ ಮಕ್ಕಳನ್ನು ಹೊರ ಕರೆತಂದಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನಿಜವಾದ ಹೀರೋಗಳು ಅಂದರೆ ಇವರು ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Six men climbed the wall to rescue two children trapped in a building caught fire

In Xintian, Hunan, a building caught fire? on the 3rd floor, and two little girls were trapped at home. Six men climbed the wall with their bare hands to build a human ladder, rescued the children out of the window, and transported them to the ground.

Posted by Trending in China on Friday, August 20, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...